ಸಾರಾಂಶ
ಪಟ್ಟಣದ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿ ನೂತನ ಆಸ್ಪತ್ರೆ ನಿರ್ಮಾಣ ಹಿನ್ನಲೆಯಲ್ಲಿ ಸೋಮವಾರ ಶಾಸಕ ಎಚ್.ವಿ.ವೆಂಕಟೇಶ್ ಬಿಎಸ್‌ಎನ್‌ಎಲ್ ಸಮೀಪ ಸ್ಥಳ ಪರಿಶೀಲನೆ ನಡೆಸಿದರು.
ಪಾವಗಡ: ಪಟ್ಟಣದ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿ ನೂತನ ಆಸ್ಪತ್ರೆ ನಿರ್ಮಾಣ ಹಿನ್ನಲೆಯಲ್ಲಿ ಸೋಮವಾರ ಶಾಸಕ ಎಚ್.ವಿ.ವೆಂಕಟೇಶ್ ಬಿಎಸ್‌ಎನ್‌ಎಲ್ ಸಮೀಪ ಸ್ಥಳ ಪರಿಶೀಲನೆ ನಡೆಸಿದರು.
ಪರಿಶೀಲನೆ ನಡೆಸಿದ ಸ್ಥಳದಲ್ಲಿ ಈ ಹಿಂದೆ ಹಳೇ ಸರ್ಕಾರಿ ಆಸ್ಪತ್ರೆ ಕಟ್ಟಡ ಇದ್ದು, ಈಗ ಶಿಥಿಲಾವಸ್ಥೆಯಲ್ಲಿರುವ ಕಾರಣ ಆ ಕಟ್ಟಡವನ್ನು ಶೀಘ್ರ ತೆರವುಗೊಳಿಸಿ ಅದೇ ಜಾಗದಲ್ಲಿ ಸುಸಜ್ಜಿತವಾದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇಲ್ಲಿಯ ಆಸ್ಪತ್ರೆಯ ನಿರ್ಮಾಣದಿಂದ ಪಟ್ಟಣದ ಜನತೆಯ ಆರೋಗ್ಯ ಸೇವೆಗೆ ಹೆಚ್ಚು ಅನುಕೂಲವಾಗಲಿದೆ ಎಂದರು.ಮುಖಂಡರಾದ ಸುದೇಶ್ ಬಾಬು,ಪ್ರ ಮೋದ್ ಕುಮಾರ್, ತೆಂಗಿನ ರವಿ, ಪಿ.ಎಚ್.ರಾಜೇಶ್ ಕಿರಣಕುಮಾರ ಹಾಗೂ ಮುಖ್ಯಾಧಿಕಾರಿ ಶಂಷುದ್ದೀನ್‌ರಿ ಇತರರಿದ್ದರು.