ಸಾರಾಂಶ
ನಂದಗೋಕುಲ ಕನ್ವೆನ್ಷನ್ ಹಾಲ್‌ನಲ್ಲಿ ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಶಾಖೆ, ಮಹಿಳಾ ವಿಭಾಗದ ವತಿಯಿಂದ ಭಾನುವಾರ ಬೆಳಿಗ್ಗೆ ನಡೆದ ಸೃಷ್ಠಿ-೨೦೨೪ ೬ನೇ ರಾಜ್ಯಮಟ್ಟದ ವೈದಕೀಯ ಮಹಿಳಾ ವೈದ್ಯರ ಸಮಾವೇಶವನ್ನು ಫಾರ್ಮರ್ ಡೈರೆಕ್ಟರ್ ಆಫ್ ಮೆಡಿಕಲ್ ಎಜುಕೇಶನ್ ಮೊದಲ ಉಪ ಕುಲಪತಿ ಡಾ. ಎಸ್. ಕಾಂತ ಉದ್ಘಾಟಿಸಿದರು. ಪ್ರಸ್ತುತದಲ್ಲಿ ವೈದ್ಯರು ಎದುರಿಸುತ್ತಿರುವ ಸಮಸ್ಯೆಗಳು, ಯುವ ವೈದ್ಯರು ಅನುಸರಿಸಬೇಕಾದ ನಿಯಮಗಳು, ವೈದ್ಯಕೀಯ ರಂಗದಲ್ಲಿನ ಮಹಿಳಾ ವೈದ್ಯರು ಸಹಜವಾಗಿಯೇ ಹೆಚ್ಚಿನ ಒತ್ತಡ ಸ್ಥಿತಿಯ ಬಗ್ಗೆ ತಿಳಿಸಿದಲ್ಲದೇ ವೈದ್ಯರು ಇರಬೇಕಾದ ಬಗ್ಗೆ ಕೆಲ ಸಲಹೆಗಳನ್ನು ನೀಡಿದರು.
ಕನ್ನಡಪ್ರಭ ವಾರ್ತೆ ಹಾಸನ
ನಗರದ ಹೊರವಲಯದ ಹೊಳೆನರಸೀಪುರ ರಸ್ತೆ ಬಳಿ ಇರುವ ನಂದಗೋಕುಲ ಕನ್ವೆನ್ಷನ್ ಹಾಲ್‌ನಲ್ಲಿ ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಶಾಖೆ, ಮಹಿಳಾ ವಿಭಾಗದ ವತಿಯಿಂದ ಭಾನುವಾರ ಬೆಳಿಗ್ಗೆ ನಡೆದ ಸೃಷ್ಠಿ-೨೦೨೪ ೬ನೇ ರಾಜ್ಯಮಟ್ಟದ ವೈದಕೀಯ ಮಹಿಳಾ ವೈದ್ಯರ ಸಮಾವೇಶವನ್ನು ಫಾರ್ಮರ್ ಡೈರೆಕ್ಟರ್ ಆಫ್ ಮೆಡಿಕಲ್ ಎಜುಕೇಶನ್ ಮೊದಲ ಉಪ ಕುಲಪತಿ ಡಾ. ಎಸ್. ಕಾಂತ ಉದ್ಘಾಟಿಸಿದರು. ನಂತರ ಉದ್ದೇಶಿಸಿ ಮಾತನಾಡಿ, ಪ್ರಸ್ತುತದಲ್ಲಿ ವೈದ್ಯರು ಎದುರಿಸುತ್ತಿರುವ ಸಮಸ್ಯೆಗಳು, ಯುವ ವೈದ್ಯರು ಅನುಸರಿಸಬೇಕಾದ ನಿಯಮಗಳು, ವೈದ್ಯಕೀಯ ರಂಗದಲ್ಲಿನ ಮಹಿಳಾ ವೈದ್ಯರು ಸಹಜವಾಗಿಯೇ ಹೆಚ್ಚಿನ ಒತ್ತಡ ಸ್ಥಿತಿಯ ಬಗ್ಗೆ ತಿಳಿಸಿದಲ್ಲದೇ ವೈದ್ಯರು ಇರಬೇಕಾದ ಬಗ್ಗೆ ಕೆಲ ಸಲಹೆಗಳನ್ನು ನೀಡಿದರು. ಕರ್ನಾಟಕ ರಾಜ್ಯ ವುಮೆನ್ ಡೈರಕ್ಟರ್ ವಿಂಗ್ ಚೇರ್ಮನ್ ಡಾ. ಬಿ.ಕೆ. ಸೌಮ್ಯಮಣಿ ಅವರು ಪ್ರೊಜೆಕ್ಟರ್ ಮೂಲಕ ಪ್ರದರ್ಶಿಸಿ ಪ್ರಸ್ತುತ ಸಮಾಜದಲ್ಲಿ ಮಹಿಳೆ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಜೀವನ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಆಕೆ ತನ್ನ ಭಾವನೆಗಳು, ದೇಹ ಸ್ಥಿತಿ ಮತ್ತು ಮನಸ್ಥಿತಿಗಳನ್ನು ಸಜ್ಜುಗೊಳಿಸಿಕೊಳ್ಳುವುದು ಅತಿ ಮುಖ್ಯವಾದ ಅಂಶವಾಗಿದೆ. ಅದರಲ್ಲೂ ವೈದ್ಯಕೀಯ ರಂಗದಲ್ಲಿನ ಮಹಿಳಾ ವೈದ್ಯರು ಸಹಜವಾಗಿಯೇ ಹೆಚ್ಚಿನ ಒತ್ತಡದ ಸ್ಥಿತಿಯಲ್ಲಿರುತ್ತಾರೆ. ಮಹಿಳಾ ವೈದ್ಯ ತನ್ನ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಜಾಗರೂಕತೆಯಿಂದ ಕಾರ್ಯನಿರ್ವಹಿಸಿಕೊಂಡು ತನ್ನ ಕೌಟುಂಬಿಕ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದ ಅವರು, ಆಗ ಮಾತ್ರ ಸಮಾಜದ ಸುಧಾರಣೆಗೆ ತನ್ನನ್ನು ಕೊಡುಗೆಯಾಗಿಸಿಕೊಳ್ಳಲು ಸಾಧ್ಯ. ಮಹಿಳಾ ವೈದ್ಯರ ವೃತ್ತಿಪರತೆಯ ಜೊತೆಗೆ ಜೀವನ ಶೈಲಿಯನ್ನು ಉತ್ತಮಗೊಳಿಸಿಕೊಳ್ಳಲು ಪೂರಕವಾಗುವಂತೆ ಸೃಷ್ಟಿ ೨೦೨೪ ಸಮಾವೇಶ ರಚಿಸಲ್ಪಟ್ಟಿದೆ ಎಂದು ಹೇಳಿದರು. ಐಎಂಎ ರಾಜ್ಯ ಶಾಖೆಯ ಉಪಾಧ್ಯಕ್ಷೆ ಡಾ. ಸಾವಿತ್ರಿ ಮಾತನಾಡಿ, ಭಾರತೀಯ ವೈದ್ಯಕಿಯ ಸಂಘದ ಸದಸ್ಯರನ್ನು ಒಟ್ಟುಗೂಡಿಸುವುದು, ಅವರ ಗೌರವ ಮತ್ತು ಯೋಗಕ್ಷೇಮವನ್ನು ಕಾಪಾಡುವುದು, ಮಹಿಳಾ ವೈದ್ಯರಿಗೆ ಸಾಮಾಜಿಕ ಸ್ಥಾನಮಾನ, ಸೇವಾ ಭದ್ರತೆ ಕೊಟ್ಟು ಅವರನ್ನು ಪ್ರೋತ್ಸಾಹಿಸಬೇಕಾಗಿದೆ. ಸಭೆ, ಕಾರ್ಯಾಗಾರ ಮೂಲಕ ಮಹಿಳಾ ವೈದ್ಯರನ್ನು ಇನ್ನಷ್ಟು ಗಟ್ಟಿಗೊಳಿಸುವುದಾಗಿದೆ ಎಂದರು. ಸ್ವಯಂ ಆರೋಗ್ಯ ರಕ್ಷಣೆ ಎನ್ನುವ ಧ್ಯೇಯವಾಕ್ಯದೊಂದಿಗೆ ರೂಪಿತಗೊಂಡಿದೆ. ಮಹಿಳಾ ವೈದ್ಯೆ ವೈದ್ಯರಾಗಿ ತನ್ನ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಜಾಗರುಕತೆಯಿಂದ ಕಾರ್ಯ ನಿರ್ವಹಿಸಿಕೊಂಡು ತನ್ನ ಕೌಟುಂಬಿಕ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನದಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಇದೆ ವೇಳೆ ಪ್ರಾಸ್ತಾವಿಕ ನುಡಿಯಲ್ಲಿ ಮಹಿಳಾ ವೈದ್ಯರ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಐಎಂಎ ಅಧ್ಯಕ್ಷ ಡಾ. ಎಸ್. ಶ್ರೀನಿವಾಸ್, ಕಾರ್ಯದರ್ಶಿ ಡಾ ಬಿ.ಪಿ. ಕರುಣಾಕರ್, ಐಎಂಎ ಎಲಕ್ಟ್ ಅಧ್ಯಕ್ಷ ಡಾ. ವಿ.ವಿ. ಚಿನಿವಾಲರ್, ಮಕ್ಕಳ ತಜ್ಞ ಕ್ಫಿ. ದಿನೇಶ್, ಮಹಿಳಾ ಉಪಾದ್ಯಕ್ಷೆ ಡಾ. ಎ. ಸಾವಿತ್ರಿ, ಡಾ. ಹೊನ್ನೇಗೌಡ, ಡಾ. ಎಚ್.ಆರ್. ದೇವದಾಸ್, ಡಾ. ಎಚ್.ಜೆ. ತೇಜಸ್ವಿ, ಡಾ. ಕಾಮಿನಿ ಎ. ರಾವ್, ಡಾ. ಬಿ.ಜಿ. ವಾಗೀಶ್, ಡಾ. ಪ್ರವೀಣ್ ಶಾಸ್ತ್ರಿ, ಭಾರತಿ ರಾಜಶೇಖರ್, ಡಾ. ರಾಜಲಕ್ಷ್ಮಿ, ಶಾಖೆಯ ಉಪಾಧ್ಯಕ್ಷೆ ಡಾ. ಸಾವಿತ್ರಿ, ರಾಜ್ಯ ಶಾಖೆ ಸದಸ್ಯರಾದ ಕೆ.ವಿ. ಕಿರಣ, ರಂಗಲಕ್ಷ್ಮಿ, ಡಾ. ವೇದಾವತಿ ಇತರರು ಉಪಸ್ಥಿತರಿದ್ದರು.