ಸಾರಾಂಶ
ಧಾರವಾಡ: ಶಾಲಾ ಶಿಕ್ಷಣ ಇಲಾಖೆ ಇಲ್ಲಿಯ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ವಿವಿಧ ವಯೋಮಿತಿಯ ಒಟ್ಟು 18 ಸ್ಕೇಟರ್‌ಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು. ಆಯ್ಕೆಯಾದ ಈ ಸ್ಕೇಟರ್‌ಗಳು ಅ. 20ರಂದು ಬೆಳಗಾವಿಯಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
14 ವರ್ಷದೊಳಗಿನ ಕ್ವಾಡ್ ವಿಭಾಗದಲ್ಲಿ ಶೀತನ ಢವಳೆ, ಅಭಯ ಹಲವಾದಿಮಠ ಹಾಗೂ ಯಶಸ್ ಅಂಕುಶಕರ ಆಯ್ಕೆಯಾದರು. ಬಾಲಕಿಯರ ವಿಭಾಗದಲ್ಲಿ ಅಮರೀನತಾಜ್, ನೇತ್ರಾವತಿ ಕೋರಿ ಹಾಗೂ ಲಾವಣ್ಯ ಆಯ್ಕೆಯಾದರು. 14 ವರ್ಷದೊಳಗಿನ ಇನ್‌ಲೈನ್ ವಿಭಾಗದಲ್ಲಿ ನಿಹಾಲ್ ಮೈಸೂರ ಮಾತ್ರ ರಾಜ್ಯಮಟ್ಟಕ್ಕೆ ಅರ್ಹತೆ ಪಡೆದನು. ಬಾಲಕಿಯರ ವಿಭಾಗದಲ್ಲಿ ಅತಿಕಾ ನದಾಫ್, ಅಶ್ವಿನಿ ಹಾಗೂ ಆಜಂ ಆಯ್ಕೆಯಾದರು.17 ವರ್ಷದೊಳಗಿನ ಬಾಲಕರ ಕ್ವಾಡ್ ವಿಭಾಗದಲ್ಲಿ ಸಂದೇಶ ಹಿರೇಮಠ, ಮೊಹಮ್ಮದ ಯಾಸೀರ, ವಿನಯ ಅಂಕುಶಕರ, ಬಾಲಕಿಯರ ವಿಭಾಗದಲ್ಲಿ ಸೌಜನ್ಯ ಶೇಷಗಿರಿ, ಮೈಥಲಿ ಆಯ್ಕೆಯಾದರು. ಇನ್‌ಲೈನ್ ಬಾಲಕರ ವಿಭಾಗದಲ್ಲಿ ಸೋಹಿಲ್ ನದಾಫ್, ಆದಿತ್ಯ ಪಾಟೀಲ ಹಾಗೂ ಬಾಲಕಿಯರ ವಿಭಾಗದಲ್ಲಿ ಯಾಸ್ಮೀನ್ ತಹಶೀಲ್ದಾರ ಆಯ್ಕೆಯಾದರು.
ಇದಕ್ಕೂ ಮುಂಚೆ ಜಿಲ್ಲಾ ಸಮನ್ವಯಾಧಿಕಾರಿ ಎಸ್.ಎಂ. ಹುಡೇದಮನಿ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ನಂತರ ವಿಜೇತ ಹಾಗೂ ರಾಜ್ಯಕ್ಕೆ ಆಯ್ಕೆಯಾದ ಸ್ಕೇಟರ್‌ಗಳಿಗೆ ಪದಕಗಳನ್ನು ವಿತರಣೆ ಮಾಡಿದ ಜಿಲ್ಲಾ ಒಲಂಪಿಕ್ ಅಸೋಸಿಯೇಶನ್ ಮಾಜಿ ಅಧ್ಯಕ್ಷರು, ಬಿಜೆಪಿ ಮುಖಂಡ ಪಿ.ಎಚ್. ನೀರಲಕೇರಿ, ಈ ಮೊದಲು ಜಿಲ್ಲಾಧಿಕಾರಿ ಮನೆ ಎದುರು ಆಡುತ್ತಿದ್ದ ಸ್ಕೇಟರ್‌ಗಳಿಗೆ ಶಾಶ್ವತವಾಗಿ ಮೈದಾನ ಲಭ್ಯವಾಗಿದೆ. ಇದು 100 ಮೀಟರ್ ಮಾತ್ರ ಇದ್ದು 200 ಮೀಟರ್ ಟ್ರ್ಯಾಕ್ ಆಗಿ ಅಭಿವೃದ್ಧಿಯಾಗಬೇಕು. ಈ ಮೂಲಕ ಸ್ಕೇಟರ್‌ಗಳು ರಾಜ್ಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಜಿಲ್ಲೆಗೆ ಹೆಸರು ತರುವ ಪದಕಗಳನ್ನು ತರಬೇಕು ಎಂದು ಆಶಿಸಿದರು.ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವಿಷ್ಣು ಹೆಬ್ಬಾರ, ದೈಹಿಕ ಶಿಕ್ಷಣ ಪರಿವೀಕ್ಷಕ ಶಶಿಧರ ಬಸಾಪೂರ, ದೈಹಿಕ ಶಿಕ್ಷಕರಾದ ಸುನೀಲ ಹೊಂಗಲ, ಕೆ.ಎನ್. ಮುಗಳಿ ಹಾಗೂ ಸ್ಕೇಟಿಂಗ್ ತರಬೇತುದಾರರಾದ ಮಲ್ಲಿಕಾರ್ಜುನ ಕಾಡಪ್ಪನವರ, ಶಶಿಧರ ಪಾಟೀಲ, ಅಕ್ಷಯ ಸೂರ್ಯವಂಶಿ, ವಿರುಪಾಕ್ಷ ಕಮ್ಮಾರ ಹಾಗೂ ಪಾಲಕರು ಇದ್ದರು.