ಕೌಶಲ್ಯ ಸಹಿತ ವ್ಯಕ್ತಿ ಸ್ವಾವಲಂಬಿ: ರೇಣುಕಾಚಾರ್ಯ ಸ್ವಾಮಿ

| Published : Jan 24 2025, 12:46 AM IST

ಕೌಶಲ್ಯ ಸಹಿತ ವ್ಯಕ್ತಿ ಸ್ವಾವಲಂಬಿ: ರೇಣುಕಾಚಾರ್ಯ ಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿಬಿರಾರ್ಥಿಗಳು ಸಂಜೀವಿನಿ, ಎನ್,ಆರ್.ಎಲ್.ಎಂ. ಯೋಜನೆ ಅಡಿ ವಿವಿಧ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.

ಸಂಡೂರು: ಕೌಶಲ್ಯ ರಹಿತ ವ್ಯಕ್ತಿ ಪರಾವಲಂಬಿ, ಕೌಶಲ್ಯ ಸಹಿತ ವ್ಯಕ್ತಿ ಸ್ವಾವಲಂಬಿ. ಪ್ರತಿ ಉದ್ಯಮದಲ್ಲೂ ಅಗತ್ಯ ಕೌಶಲ್ಯಗಳನ್ನು ಹೊಂದಿದ್ದಲ್ಲಿ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಬಹುದಾಗಿದೆ ಎಂದು ತಾಪಂ ಸಹಾಯಕ ನಿರ್ದೇಶಕ ರೇಣುಕಾಚಾರ್ಯ ಸ್ವಾಮಿ ಹೇಳಿದರು.

ತಾಲೂಕಿನ ಭುಜಂಗನಗರದಲ್ಲಿ ಜಿಪಂ, ತಾಪಂ, ಕೆನರಾ ಬ್ಯಾಂಕ್‌ನ ಆರ್.ಎಸ್.ಇ.ಟಿ.ಐ ತರಬೇತಿ ಕೇಂದ್ರ, ಬಳ್ಳಾರಿ, ಗ್ರಾಪಂ ಹಾಗೂ ಕುಮಾರಸ್ವಾಮಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ಭುಜಂಗನಗರದ ಸಹಯೋಗದಲಿ ಸ್ವಸಹಾಯ ಸಂಘಗಳ ಸದಸ್ಯರಿಗೆ ಹಮ್ಮಿಕೊಳ್ಳಲಾಗಿರುವ 6 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ಕುರಿತ ತರಬೇತಿ ಶಿಬಿರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಿಬಿರಾರ್ಥಿಗಳು ಸಂಜೀವಿನಿ, ಎನ್,ಆರ್.ಎಲ್.ಎಂ. ಯೋಜನೆ ಅಡಿ ವಿವಿಧ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಆರ್.ಎಸ್.ಇ.ಟಿ.ಐ ವಿಭಾಗದ ನಿರ್ದೇಶಕರಾದ ರಾಜಾಸಾಬ್ ವಿವಿಧ ಜೀವನೋಪಾಯ ಚಟುವಟಿಕೆಗಳು ಮತ್ತು ಬ್ಯಾಂಕ್ ಸೌಲಭ್ಯಗಳ ಕುರಿತು ವಿವರಿಸಿದರು. ಶಿಬಿರಾರ್ಥಿಗಳು ತರಬೇತಿಯನ್ನು ಸದುಪಯೋಗಪಡಿಸಿಕೊಂಡು ಜೀವಿನೋಪಾಯ ಚಟುವಟಿಕೆಗಳನ್ನು ಕೈಗೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ತಿಳಿಸಿದರು.

ಪಿಡಿಒ ಕೊಟ್ರಯ್ಯ, ಸದಸ್ಯರಾದ ಉರುಳಿ ಸಿದ್ದಪ್ಪ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಮಾ, ಸಂಜೀವಿನಿ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಕೆ.ಸೋಮಶೇಖರ, ಆರ್.ಎಸ್.ಇ.ಟಿ.ಐ ಬೋಧಕರಾದ ಜಡೇಶ್, ಸಂಜೀವಿನಿ ಒಕ್ಕೂಟದ ಸಿಬ್ಬಂದಿ ಆರತಿ, ಸುನಂದಾ, ಪಾರ್ವತಿ, ಮಲ್ಲಮ್ಮ, ನೇತ್ರಾವತಿ, ಸ್ವಸಹಾಯ ಸಂಘಗಳ ಸದಸ್ಯರು, ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.

ಸಂಡೂರು ತಾಲೂಕಿನ ಭುಜಂಗನಗರ ಗ್ರಾಮದಲ್ಲಿ ಸ್ವಸಹಾಯ ಸಂಘಗಳ ಸದಸ್ಯರಿಗೆ ಹಮ್ಮಿಕೊಳ್ಳಲಾಗಿರುವ ಉದ್ಯಮಶೀಲತಾ ಅಭಿವೃದ್ಧಿ ಕುರಿತ ತರಬೇತಿ ಶಿಬಿರಕ್ಕೆ ಬುಧವಾರ ಚಾಲನೆ ನೀಡಲಾಯಿತು.