ಸಾರಾಂಶ
ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆರೋಗ್ಯಕರ ಚರ್ಮದ ಮಾಸಾಚರಣೆ ಅಂಗವಾಗಿ ಅಗದ ತಂತ್ರ ವಿಭಾಗದಿಂದ ಚರ್ಮರೋಗಗಳ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ‘ತ್ವಕ್‌ಶುದ್ಧಿ ಕಲ್ಪ’ವನ್ನು ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆರೋಗ್ಯಕರ ಚರ್ಮದ ಮಾಸಾಚರಣೆ ಅಂಗವಾಗಿ ಅಗದ ತಂತ್ರ ವಿಭಾಗದಿಂದ ಚರ್ಮರೋಗಗಳ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ‘ತ್ವಕ್‌ಶುದ್ಧಿ ಕಲ್ಪ’ವನ್ನು ಹಮ್ಮಿಕೊಳ್ಳಲಾಗಿತ್ತು.ಕಾಲೇಜಿನ ಪ್ರಾಂಶುಪಾಲ ಡಾ. ಸತ್ಯನಾರಾಯಣ ಬಿ., ಸಂಸ್ಥೆಯ ಆಡಳಿತಾಧಿಕಾರಿ ಯೋಗೀಶ್ ಶೆಟ್ಟಿ, ರಸಶಾಸ್ತ್ರ ಮತ್ತು ಬೈಷಜ್ಯ ವಿಭಾಗದ ಮುಖ್ಯಸ್ಥ ಡಾ.ದಿನೇಶ್ ನಾಯಕ್ ಜೆ., ರೋಗನಿಧಾನ ವಿಭಾಗದ ಮುಖ್ಯಸ್ಥ ಡಾ.ರವಿಶಂಕರ ಶೆಣೈ, ಆಸ್ಪತ್ರೆಯ ಮೇಲ್ವಿಚಾರಕ ಡಾ.ಪ್ರಮೋದ್ ಶೇಟ್, ಶಿಬಿರದ ಮೇಲ್ವಿಚಾರಕಿ ಡಾ.ಪ್ರೀತಿ ಪಾಟೀಲ್, ಅಗದ ತಂತ್ರ ತಜ್ಞೆ ಡಾ.ವಾರುಣಿ ಎಸ್. ಬಾಯರಿ, ಬಾಲರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸೌಮ್ಯ ಪ್ರಿಯದರ್ಶಿನಿ ವಿ. ದೀಪೋಜ್ವಲನ ಮೂಲಕ ಉದ್ಘಾಟಿಸಿದರು.ಸಂಸ್ಥೆಯ ಇತರ ವೈದ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಉಚಿತ ತಪಾಸಣಾ ಹಾಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆಯ ಜೊತೆಗೆ ಆಹಾರದಿಂದ ಉಂಟಾಗುವ ಅಲರ್ಜಿ, ಕೀಟಗಳ ಕಡಿತದಿಂದ ಆಗುವ ಚರ್ಮದ ಸಮಸ್ಯೆಗಳು ಹಾಗೂ ಇತರ ಚರ್ಮರೋಗಗಳನ್ನು ತಪಾಸಣೆ ನಡೆಸಲಾಯಿತು. ರೋಗಿಗಳಿಗೆ ಚರ್ಮದ ಸಮಸ್ಯೆಗಳನ್ನು ತಡೆಯುವುದು ಹೇಗೆ, ಸರಿಯಾದ ಚರ್ಮದ ಆರೈಕೆ ಕ್ರಮಗಳು, ಆಹಾರ ನಿಯಮಗಳು ಮತ್ತು ಜೀವನ ಶೈಲಿಯ ಕುರಿತು ಶಿಕ್ಷಣವನ್ನು ಈ ಶಿಬಿರದ ಮೂಲಕ ನೀಡಲಾಯಿತು.