ರಾಜ್ಯ , ರಾಷ್ಟ್ರಕ್ಕೆ ಎಸ್‌.ಎಂ. ಕೃಷ್ಣ ಕೊಡುಗೆ ಅಪಾರ

| Published : Dec 11 2024, 12:45 AM IST

ಸಾರಾಂಶ

ಇಂದು ಬೆಂಗಳೂರು ನಗರ ಐಟಿ ಹಬ್ ಆಗಿ ಗುರುತಿಸಿಕೊಂಡಿದ್ದರೆ, ಅದಕ್ಕೆ ಎಸ್.ಎಂ. ಕೃಷ್ಣ ದೂರದೃಷ್ಟಿ ಕಾರಣ.

ಬೆಂಗಳೂರಿಗೆ ವಿಶ್ವಮಾನ್ಯತೆ ತಂದುಕೊಟ್ಟ ಕೃಷ್ಣ | ಮಾಜಿ ಸಿಎಂ ಕೃಷ್ಣ ನಿಧನಕ್ಕೆ ಕಕಜ ವೇದಿಕೆ ಶ್ರದ್ಧಾಂಜಲಿಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ರಾಜ್ಯಕ್ಕೆ ಮಾಹಿತಿ ತಂತ್ರಜ್ಞಾನ ಕಂಪನಿಗಳನ್ನು ಕರೆತಂದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ರಾಜ್ಯದ ಯುವಕರಿಗೆ ಉದ್ಯೋಗ ಕಲ್ಲಿಸುವ ಜತೆಗೆ ಬೆಂಗಳೂರಿಗೆ ವಿಶ್ವಮಾನ್ಯತೆ ತಂದುಕೊಟ್ಟರು. ರಾಜ್ಯ ಹಾಗೂ ರಾಷ್ಟ್ರಕ್ಕೆ ಅವರ ಕೊಡುಗೆ ಅಪಾರ ಎಂದು ಕಸ್ತೂರಿ ಕರ್ನಾಟಕ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‌ಗೌಡ ಅಭಿಪ್ರಾಯಪಟ್ಟರು.ನಗರದ ಕಾವೇರಿ ಸರ್ಕಲ್‌ನಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿಧನಕ್ಕೆ ಕಕಜ ವೇದಿಕೆಯಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಇಂದು ಬೆಂಗಳೂರು ನಗರ ಐಟಿ ಹಬ್ ಆಗಿ ಗುರುತಿಸಿಕೊಂಡಿದ್ದರೆ, ಅದಕ್ಕೆ ಎಸ್.ಎಂ. ಕೃಷ್ಣ ದೂರದೃಷ್ಟಿ ಕಾರಣ. ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ರಾಜ್ಯಕ್ಕೆ ಐಟಿ,ಬಿಟಿ ಸಂಸ್ಥೆಗಳನ್ನು ಕರೆತಂದು ಉದ್ಯೋಗ ಸೃಷ್ಠಿಸುವ ಕೆಲಸ ಮಾಡಿದರು ಎಂದು ಸ್ಪರಿಸಿದರು.ನಿವೃತ್ತ ಪ್ರಾಂಶುಪಾಲ ನಿಂಗೇಗೌಡ (ಎನ್.ಜಿ) ಮಾತನಾಡಿ, ರಾಜ್ಯ ಕಂಡ ಪ್ರಬುದ್ಧ ರಾಜಕಾರಣಿಗಳಲ್ಲಿ ಎಸ್. ಎಂ. ಕೃಷ್ಣ ಅವರು ಒಬ್ಬರು. ಶಿಸ್ತು, ಸರಳತೆ ಮತ್ತು ಅಭಿವೃದ್ದಿಯ ಚಿಂತನೆಯಲ್ಲಿ ಅವರಿಗೆ ಸಾಟಿ ಯಾರು ಇಲ್ಲ. ಇಂದು ರಾಜಕಾರಣಿಗಳ ನಾಲಿಗೆಗೆ ಹಿಡಿತವೇ ಇಲ್ಲವಾಗಿದ್ದು, ಒಬ್ಬರ ವಿರುದ್ಧ ಮತ್ತೊಬ್ಬರು ಆರೋಪ-ಟೀಕೆ ಮಾಡುತ್ತಾ ರಾಜಕೀಯ ಕೆಸರೆರೆಚಾಟ ಮಾಡುತ್ತಾ ಅಭಿವೃದ್ಧಿಯನ್ನು ಮರೆತಿದ್ದಾರೆ. ಆದರೆ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಬರ, ಡಾ. ರಾಜ್‌ಕುಮಾರ್ ಅಪಹರಣ ಸೇರಿದಂತೆ ಹಲವಾರು ಸಮಸ್ಯೆಗಳು ಬಂದರೂ ಸಹ ಎಲ್ಲವನ್ನು ಚಾಣ್ಮೆಯಿಂದ ಎದುರಿಸಿದರು. ಜೊತೆಗೆ ಯಾವುದೇ ರಾಜಕಾರಣಿಯ ಬಗ್ಗೆಯಾಗಲಿ ಯಾವುದೇ ಪಕ್ಷದ ಬಗ್ಗೆಯಾಗಲಿ ಎಂದೂ ಅವಾಷ್ಯವಾಗಿ, ಹಗುರವಾಗಿ ಮಾತನಾಡಿದವರಲ್ಲ ಎಂದರು.ಕೃಷ್ಣಪ್ರಸಾದ್, ಗಾಯಕ ಚೌ.ಪು. ಸ್ವಾಮಿ, ಕಾಂಗ್ರೆಸ್ ಮುಖಂಡ ಸೋಗಾಲಪಾಳ್ಯ ಮಹದೇವು ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್‌ಎಂ.ಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕೆಲ ಸಮಯ ಮೌನಾಚರಣೆ ಮಾಡುವ ಮೂಲಕ ಎಸ್.ಎಂ. ಕೃಷ್ಣ ಅವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಯಿತು.ಕಕಜವೇ ತಾಲೂಕು ಅಧ್ಯಕ್ಷ ಡಾ. ಸತೀಶ್, ಸಮಾಜ ಸೇವಕ ಸಿ.ಪಿ.ರಾಮು, ರಾಜು, ಜಯರಾಮು, ನಿವೃತ್ತ ಶಿಕ್ಷಕ ಪುಟ್ಟಪ್ಪಾಜಿ, ಮೆಣಸಿಗನಹಳ್ಳಿ ರಾಮಕೃಷ್ಣಪ್ಪ, ಮರಿಅಂಕೇಗೌಡ, ಬೀರೇಶ್ ಇತರರು ಇದ್ದರು.ಬಾಕ್ಸ್..........ಪ್ರತಿಭಟನೆ

ಮರಾಠಿಗರು ಕನ್ನಡಿಗರನು ಕೆಣಕಿದರೆ ಸುಮ್ಮನೆ ಇರುವುದಿಲ್ಲ: ಯೋಗೀಶ್‌ಗೌಡಚನ್ನಪಟ್ಟಣ: ಮರಾಠಿಗರು ಕನ್ನಡಿಗರನ್ನು ಕೆಣಕಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಕಕಜ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ಎಚ್ಚರಿಕೆ ನೀಡಿದರು.ಬೆಳಗಾವಿ ಮರಾಠರಿಗೆ ಸೇರಿದ್ದು ಇಲ್ಲಿ ಅಧಿವೇಶನ ನಡೆಯಬಾರದು. ಬೆಳಗಾವಿ ಮರಾಠರಿಗೆ ಸೇರಿದೆ ಎಂದು ಉದ್ದಟತನದ ಹೇಳಿಕೆ ನೀಡಿರುವ ಆದಿತ್ಯ ಠಾಕ್ರೆಗೆ ಮುಂದಿನ ದಿನಗಳಲ್ಲಿ ವೇದಿಕೆಯಿಂದ ಮಸಿಯನ್ನು ಬಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಅದಿತ್ಯ ಠಾಕ್ರೆ ಹೇಳಿಕೆ ವಿರುದ್ಧ ಮುಖ್ಯಮಂತ್ರಿ, ವಿಪಕ್ಷ ನಾಯಕರು ಸೇರಿದಂತೆ ಎಲ್ಲರೂ ರಾಜಕೀಯವನ್ನು ಬದಿಗಿತ್ತು ಟೀಕೆ ಮಾಡಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ರಾಜ್ಯಗಳ ಗಡಿಯನ್ನು ಗುರುತಿಸಲಾಗಿದೆ. ಮತ್ತೆ ಈ ಬಗ್ಗೆ ಖ್ಯಾತೆ ತೆಗೆದರೆ ಸುಮ್ಮನೆ ಇರುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಇದು ಮಾತಿಗೆ ಸೀಮಿತ ಆಗಬಾರದು ಬೆಳಗಾವಿಯಲ್ಲಿ ಖ್ಯಾತೆ ತೆಗೆಯುವ ಎಂಇಎಸ್ ಸಂಘಟನೆ ಮತ್ತು ಮರಾಠಿಗರಿಗೆ ಬುದ್ದಿ ಕಲಿಸುವ ನಿಟ್ಟಿನಲ್ಲಿ ಕನ್ನಡಿಗರನ್ನು ಕೆಣಕಿದವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಜೈಲಿಗೆ ಕಳಿಸಬೇಕು ಎಂದು ಒತ್ತಾಯಿಸಿದರು.ಪೊಟೋ೧೦ಸಿಪಿಟಿ೧: ನಗರದ ಕಾವೇರಿ ಸರ್ಕಲ್‌ನಲ್ಲಿ ಕಕಜವೇಯಿಂದ ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.