ಸಾರಾಂಶ
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ಪೊಲೀಸ್ ತಂಡದಿಂದ ಸುಗಮ ಸಂಗೀತ, ಜಗನ್ಮೋಹನ ನಾಟ್ಯಾಲಯದಿಂದ ಭರತನಾಟ್ಯ, ರಾಪ್ ಸಾಂಗ್, ಹಾಸ್ಯ ಕಲಾವಿದರಿಂದ ಹಾಸ್ಯ ಸಂಜೆ ಐದನೇ ದಿನದ ಕಾವೇರಿ ಕಲಾವೇದಿಕೆಯಲ್ಲಿ ಸಂಭ್ರಮ ಕಂಡುಬಂತು.46ನೇ ವರ್ಷದ ಕಾವೇರಿ ದಸರಾ ಸಮಿತಿ ಆಚರಿಸುವ ಜನೋತ್ಸವದಲ್ಲಿ ಪೊಲೀಸರ ಕಾವೇರಮ್ಮ, ಮಾಹದೇವ, ಶೋಭ ತಂಡಗಳು ನಡೆಸಿದ ಸುಗಮಸಂಗೀತ ಕೇಳುಗರನ್ನು ರಂಜಿಸಿತು.ರಾಪ್ ಸಂಗೀತದಲ್ಲಿ ಯುವ ಪ್ರತಿಭೆ ಮನೆಯಪಂಡ ಅಶ್ವಿನ್ ಸುಬ್ಬಯ್ಯ ಅವರ ತಂಡ ಪ್ರಸ್ತುತ ಪಡಿಸಿದ ಗೀತೆಗಳು ಗಮನ ಸೆಳೆದು ಯುವಕರಲ್ಲಿ ಕುತೂಹಲ ಕೆರಳಿಸಿತು.ಜಗನ್ಮೋಹನ ನಾಟ್ಯಾಲಯದಿಂದ ಭರತನಾಟ್ಯ, ಗಮನ ಸೆಳೆಯಿತು. ಖಾಸಗಿ ವಾಹಿನಿಯ ಹಾಸ್ಯ ನಟರಿಂದ ಹಾಸ್ಯ ಸಂಜೆ ನಗುವಿನ ಅಲೆಯನ್ನು ತೇಲಿಸಿತು.ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಕಾವೇರಿ ದಸರಾ ಸಮಿತಿ ಪ್ರದಾನ ಕಾರ್ಯದರ್ಶಿ ಕಂದ ದೇವಯ್ಯ, ಕಾರ್ಯದರ್ಶಿ ವರಲಕ್ಷ್ಮೀ, ಉಪಾಧ್ಯಕ್ಷ ಶಿವಾಜಿ, ಕೋಶಾಧಿಕಾರಿ ಚೆಪ್ಪುಡಿರ ದ್ಯಾನ್ ಸುಬ್ಬಯ್ಯ, ಮಹಿಳಾ ದಸರಾ ಅಧ್ಯಕ್ಷೆ ಎಂ. ಮಂಜುಳಾ, ಸಂಸ್ಕ್ರತಿ ಸಮಿತಿ ಸಂಚಾಲಕರಾದ ಪಾರುವಂಗಡ ದಿಲನ್ ಚಂಗಪ್ಪ, ಸೈಕ್ಲೋನ್ ರಮೇಶ್, ಅವಿನಾಶ್ ಸಂಯೋಜಕರಾದ ಮನೆಯಪಂಡ ಶಿಲಾ ಬೋಪ್ಪಣ್ಣ, ಚಂದನ್ ಕಾಮತ್, ಸಮಿತಿ ಸದಸ್ಯರಾದ ಕೊಕ್ಕಂಡ ರೋಶನ್, ಜಪ್ಪೆಕೊಡಿ ರಾಜ ಉತ್ತಪ್ಪ, ಶೋಭಿತ್ ಪಿ.ವಿ, ಗುರುರಾಜ್, ಓಮನ, ಚಂದನ ಮಂಜುನಾಥ್, ಆಹಾರ ಸಮಿತಿ ತೆರೆಸವಿಕ್ಟರ್, ವಿನು ಇದ್ದರು.--------------------------------------------------------
ಗಮನ ಸೆಳೆದ ಮಕ್ಕಳ ದಸರಾಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ಶ್ರೀ ದಸರಾ ಸಮಿತಿಯ 46ನೇ ವರ್ಷದ ಜನೋತ್ಸವದ 8ನೇ ವರ್ಷದ ಮಕ್ಕಳ ದಸರಾ ಸಂಭ್ರಮವಾಗಿತ್ತು.ಮಕ್ಕಳು ವಿವಿಧ ಕಲಾಪ್ರಾಕಾರಗಳ ನೃತ್ಯ ರೂಪಕ ಪ್ರದರ್ಶಿಸಿ ನೋಡುಗರಿಗೆ ರಸದೌತಣ ಉಣಬಡಿಸಿದರು. ನಾನಾ ಬಗೆಯ ವೇಷಭೂಷಣ ಧರಿಸಿ ಗಮನಸೆಳೆದರು.ನೃತ್ಯ ವೈಭವ, ಜಾನಪದ ಗೀತೆಗಳ ಸಮೂಹ ಗಾಯನ, ದೇಶಭಕ್ತಿ ಗೀತೆ ಗಾಯನ, ಭರತನಾಟ್ಯ ಸೇರಿದಂತೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ನೆರೆದಿದ್ದವರ ಮನರಂಜಿಸಿದರು.ನಿಧಾನ ಸೈಕಲ್ ತುಳಿಯುವುದು, ಕಪ್ಪೆ ಓಟ, ಗೋಣಿಚೀಲ ಓಟ, ಬುಕ್ ಬ್ಯಾಲೆನ್ಸ್, ಸಂಗೀತ ಕುರ್ಚಿ, ಸ್ಪರ್ಧೆಗಳು ನಡೆದವು. ಮೊರಾರ್ಜಿ ದೇಸಾಯಿ ವಸತಿ ಶಾಲೆ 8ನೇ ತರಗತಿ ಅಮೂಲ್ಯ ಪಿ.ಎಸ್, ಅಧ್ಯಕ್ಷತೆ ವಿದ್ಯಾರ್ಥಿ ಅಯ್ಯಪ್ಪ ಪಿ.ಸಿ. ಉಪಸ್ಥಿತಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ರವಿ ಮಕ್ಕಳ ದಸರಾಕ್ಕೆ ಚಾಲನೆ ನೀಡಿದರು.ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಮಕ್ಕಳ ದಸರಾ ಸಮಿತಿ ಅಧ್ಯಕ್ಷ ತಿರುನೆಲ್ಲಿಮಡ ಜೀವನ್ ಬಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಬಿಂದು ಕೆ.ಆರ್., ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ ಆರ್ ರಾಜೇಶ್, ಸಮೂಹ ಸಂಪನ್ಮೂಲ ವ್ಯಕ್ತಿ, ರಾಧಾ ಬಿ.ಕೆ, ಶ್ರೀ ಕಾವೇರಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಂದಾ ದೇವಯ್ಯ, ಕೋಶಾಧಿಕಾರಿ ಧ್ಯಾನ್ ಸುಬ್ಬಯ್ಯ, ಸಂಯೋಜಕಿ ಮನೆಯಪಂಡ ಶೀಲಾ ಬೋಪಣ್ಣ, ಮಕ್ಕಳ ದಸರಾ ಸಮಿತಿ ಕಾರ್ಯದರ್ಶಿ ವಾಮನ ಟಿ.ಕೆ, ಸಹ ಕಾರ್ಯದರ್ಶಿ ಮಹೇಶ್ ಟಿ.ಎಸ್., ಉಪಾಧ್ಯಕ್ಷೆ ರೋಸಿ ಐ.ಎಮ್. ಸದಸ್ಯೆ ಚಂದನ ಡಿ, ಅಲೀಮಾ ಪಿ.ಎಸ್, ಗಿರಿಜಾ ಎಂ, ದಾಕ್ಷಾಯಿಣಿ ಎಂ.ಎಸ್. ಏನ್. ನಿಂಗರಾಜು, ಶೋಭಾ ಕೆ, ಮಮತಾ ನಿಂಗರಾಜ್, ಸಂಗೀತಾ ಸಿ.ಯು, ಲೀನಾ ರಾಘವೇಂದ್ರ ಇದ್ದರು.ಇಂದಿನ ಕಾರ್ಯಕ್ರಮ: 9ರಂದು ಗೋಣಿಕೊಪ್ಪ ಚಿಗುರು ತಂಡ, ಪೊನ್ನಂಪೇಟೆ ನಾಟ್ಯ ಸಂಕಲ್ಪ ಶಾಲೆಯಿಂದ ನೃತ್ಯ ಹಾಗೂ ಭರತನಾಟ್ಯ, ನಂತರ ಸೈಕ್ಲೋನ್ ಮತ್ತು ರಿಫ್ಲೆಕ್ಷನ್ ಡ್ಯಾನ್ಸ್ ತಂಡದಿಂದ ನೃತ್ಯ. 10 ರಂದು ಸರಿಗಮಪ ಖ್ಯಾತಿಯ ಅನ್ವಿತ್ ಕುಮಾರ್, ವಿರಾಜಪೇಟೆ ಇಂಡೋಪಿಸ್ ಡ್ಯಾನ್ಸ್ ತಂಡದಿಂದ ರಸಮಂಜರಿ, ಮಲ್ಲಕಂಬ ಪ್ರದರ್ಶನ, ಮಂಗಳೂರು ಡಾರ್ಜಲಿಂಗ್ ಡಿಲೈಟ್ ತಂಡದಿಂದ ಸಂಗೀತ.