ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ಸಾಮಾಜಿಕ ಕಾರ್ಯಕರ್ತ ಅರುಣ್ ಕುಮಾರ್ ಬೋರು ಗುಡ್ಡೆ ತನ್ನ ಸರ್ವಸ್ವವನ್ನೂ ಸಮಾಜ ಸೇವೆಗಾಗಿ ಅರ್ಪಿಸಿದವರು ಎಂದು ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಬಣ್ಣಿಸಿದ್ದಾರೆ.ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ನರಿಕೊಂಬು ಗ್ರಾ.ಪಂ.ಸದಸ್ಯ ಮತ್ತು ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ನಿರ್ದೇಶಕ, ಸಾಮಾಜಿಕ ಕಾರ್ಯಕರ್ತ ಅರುಣ್ ಕುಲಾಲ್ ಬೋರುಗುಡ್ಡೆ ಹಾಗೂ ಅವರ ಮಗ ಧ್ಯಾನ್ ಅವರಿಗೆ ಸೋಮವಾರ ಪಾಣೆಮಂಗಳೂರು ಸತ್ಯಶ್ರೀ ಕಲ್ಯಾಣ ಮಂಟಪದಲ್ಲಿ ನಡೆದ ಸಾರ್ವಜನಿಕ ಶ್ರದ್ದಾಂಜಲಿ ಸಭೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಅವರು ಮಾತನಾಡಿದರು.
ಬಿಜೆಪಿ, ನರಿಕೊಂಬು ಓಂ ಶ್ರೀ ಗೆಳೆಯರ ಬಳಗ ನ್ಯಾಲ ನರಿಕೊಂಬು, ಶ್ರೀ ದೇವಿ ಯುವಕ ಮಂಡಲ, ನ್ಯಾಲ ಕಾಪಿಕಾಡು, ನರಿಕೊಂಬು ಕುಂಬಾರರ ಯಾನೆ ಕುಲಾಲರ ಸಂಘ, ನರಿಕೊಂಬು ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಸೇವಾ ಸಮಿತಿ, ನ್ಯಾಲ-ಮರ್ದೋಳಿ-ಕಾಪಿಕಾಡು ಇವರ ಸಂಯುಕ್ತ ಆಶ್ರಯದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.ಬಿಜೆಪಿ ಪ್ರಮುಖರಾದ ಡೊಂಬಯ್ಯ ಅರಳ, ದೇವಪ್ಪ ಪೂಜಾರಿ, ನರಿಕೊಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್, ದಿನೇಶ್ ಅಮ್ಟೂರ್, ಯಶೋಧರ ಕರ್ಬೆಟ್ಟು, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಮಯೂರ್ ಉಲ್ಲಾಳ್, ಸಮಾಜ ಸೇವಾ ಬ್ಯಾಂಕ್ ನ ಸುರೇಶ ಕುಲಾಲ್, ಉದ್ಯಮಿ ಅನಿಲ್ ದಾಸ್, ಕುಂಬಾರ ಗುಡಿ ಕೈಗಾರಿಗೆ ಸುಂದರ್ ಕುಲಾಲ್, ಪ್ರೇಮನಾಥ್ ಶೆಟ್ಟಿ ಅಂತರ, ರವಿ ಅಂಚನ್ ನುಡಿ ನಮನ ಸಲ್ಲಿಸಿದರು.
ಅರುಣ್ ಬೋರ್ ಗುಡ್ಡೆಯವರ ಶಾಶ್ವತ ನೆನಪಿಗಾಗಿ ನಾಯಿಲ ಪರಿಸರದ ಒಂದು ರಸ್ತೆಗೆ ಅವರ ಹೆಸರನ್ನು ಇಡಬೇಕೆಂಬ ಅಭಿಪ್ರಾಯ ಕೇಳಿಬಂತು.ಶಕ್ತಿ ಕೇಂದ್ರದ ಪ್ರಮುಖ ಮಹಾಶಕ್ತಿ ಕೇಂದ್ರದ ಅಧ್ಯಕ್ಷ, ಪಂಚಾಯಿತಿ ಸದಸ್ಯರು, ಪಕ್ಷದ ಕಾರ್ಯಕರ್ತರು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರುಗಳು, ಅವರ ಬಂಧು ಮಿತ್ರರು ಭಾಗವಹಿಸಿ ಪುಷ್ಪಾರ್ಚನೆಗೈದರು.
ನವೀನ್ ಕುಲಾಲ್ ಪುತ್ತೂರು ಪ್ರಸ್ತಾವನೆ ಮಾಡಿದರು. ಕಿರಣ್ ಅಟ್ಲೂರು ವಂದಿಸಿದರು.ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.