ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸಮಾಜದ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನ ಬಲುಮುಖ್ಯ. ಇದರಿಂದ ಸ್ಥಳೀಯ ಸಮಗ್ರ ಚಿತ್ರಣ ಸಿಗಲಿದೆ ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ ತಿಳಿಸಿದರು.ಸಮೀಪದ ಭಾರತೀಪುರ ಗ್ರಾಮದಲ್ಲಿ ಸ್ನಾತಕೋತ್ತರ ಸಾಮಾಜಿಕ ಕಾರ್ಯವಿಭಾಗದಿಂದ ಜರುಗಿದ ಆರ್ಥಿಕ, ಸಾಮಾಜಿಕ ಗ್ರಾಮೀಣ ಅಧ್ಯಯನ ಸಮೀಕ್ಷೆ ಶಿಬಿರದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಇಂತಹ ಸಮೀಕ್ಷೆ ಶಿಬಿರದಿಂದ ಎಲ್ಲರಿಗೂ ಅನುಕೂಲವಾಗಲಿದೆ. ಗ್ರಾಮೀಣ ಜನರಿಗೆ ತಮ್ಮ ಬದುಕನ್ನು ಮಕ್ಕಳಿಗೆ ತಿಳಿಸಲು ಬಲುಪಯೋಗವಾಗಲಿದೆ ಎಂದರು.
ಶಿಬಿರದಲ್ಲಿ ವಿಶೇಷವಾಗಿ ರೈತರು ಬಳಸುವ ನೇಗಿಲು, ನೊಗ, ರಾಗಿಕಲ್ಲುಗಳಂತಹ ವಸ್ತುಗಳನ್ನು ಇಟ್ಟು ಪ್ರದರ್ಶಿಸುವುದು ರೈತರ ಶ್ರಮಿಕ ಬದುಕು ಮುಂದಿನ ಪೀಳಿಗೆಗೆ ಅರ್ಥವಾಗಲಿದೆ. ರೈತ, ಯೋಧ ನಮ್ಮದೇಶದ ಆಸ್ತಿ. ಇವರನ್ನು ಗೌರವಿಸುವ ಕೆಲಸವಾಗಬೇಕಿದೆ ಎಂದರು.ಸಮೀಕ್ಷೆ ನಡೆಯುವಾಗ ಮರೆಮಾಚದೆ ವಾಸ್ತವತೆ ಚಿತ್ರಣ ನೀಡಬೇಕು. ತಮ್ಮ ಸಾಮಾಜಿಕ, ಕೌಟುಂಬಿಕ ಭದ್ರತೆಗೆ ಸಹಕಾರಿಯಾಗಲಿದೆ. ಸುಳ್ಳು ಮಾಹಿತಿ ಹಲವು ವೇಳೆ ಸಮಸ್ಯೆಗೆ ಸಿಲುಕಿಸಲಿದೆ ಎಂದರು.
ಈ ವೇಳೆ ಮುಖಂಡರಾದ ಪುಟ್ಟಣ್ಣ, ಜನಾರ್ದನ್, ಶಿಕ್ಷಕ ಯೋಗೇಶ್, ಉಪನ್ಯಾಸಕರಾದ ರಿಯಾಜ್‌ಅಹಮದ್, ನಾಗರಾಜ್, ಹರೀಶ್, ಪುನೀತ್, ಅನಿತಾ, ಮಂಜು ಹಾಗೂ ಗ್ರಾಮ ಮುಖಂಡರು ಉಪಸ್ಥಿತರಿದ್ದರು.ಬೇಸಿಗೆ ಶಿಬಿರಗಳಲ್ಲಿ ಮಕ್ಕಳ ಬಗ್ಗೆ ಕಾಳಜಿ ವಹಿಸಿ: ರಾಮಲಿಂಗಯ್ಯ
ಕೆ.ಎಂ.ದೊಡ್ಡಿ:ಮದ್ದೂರು ತಾಲೂಕಿನಾದ್ಯಂತ ಗ್ರಾಪಂ ಕೇಂದ್ರ ಸ್ಥಾನಗಳಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರಗಳಲ್ಲಿ ಮಕ್ಕಳ ಬಗ್ಗೆ ಕಾಳಜಿ ವಹಿಸುವಂತೆ ತಾಪಂ ಇಒ ರಾಮಲಿಂಗಯ್ಯ ಸೂಚಿಸಿದರು.
ಸಮೀಪದ ತೊರೆಬೊಮ್ಮನಹಳ್ಳಿ, ಕ್ಯಾತಘಟ್ಟ, ಚಿಕ್ಕರಸಿನಕೆರೆ ಹಾಗೂ ಎಸ್.ಐ. ಹೊನ್ನಲಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರಗಳಿಗೆ ಭೇಟಿ ನೀಡಿ ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮೀಣ ಭಾಗದ ಮಕ್ಕಳು ರಜಾ ಸಮಯವನ್ನು ಅತ್ಯಂತ ಅರ್ಥಪೂರ್ಣವಾಗಿ ಕಳೆಯಲು 42 ಗ್ರಾಪಂಗಳಲ್ಲೂ ಅರಿವು ಕೇಂದ್ರ ಮತ್ತು ಸರ್ಕಾರಿ ಶಾಲೆಗಳ ಸಹಯೋಗದಿಂದ 21 ದಿನಗಳ ಕಾಲ ಬೇಸಿಗೆ ಶಿಬಿರ ಆರಂಭಿಸಲಾಗಿದೆ. ಎಲ್ಲಾ ಮಕ್ಕಳು ಭಾಗವಹಿಸಬೇಕು ಎಂದರು.ಈ ವೇಳೆ ನರೇಗಾ ತಾಂತ್ರಿಕ ಸಂಯೋಜಕ ಕೆ.ಆರ್.ರಮೇಶ್, ಗ್ರಾಪಂ ಪಿಡಿಒ, ಬೇಸಿಗೆ ಶಿಬಿರದ ಶಿಕ್ಷಕರು ಹಾಗೂ ಪಂಚಾಯ್ತಿ ಸಿಬ್ಬಂದಿ ಉಪಸ್ಥಿತರಿದ್ದರು.