ಹರದನಹಳ್ಳಿ ಗ್ರಾಮದ ಸಿದ್ದಮಲ್ಲಶೆಟ್ಟಿ ಆರೋಪ
---ಕನ್ನಡಪ್ರಭ ವಾರ್ತೆ ಚಾಮರಾಜನಗರ
‘ನಮ್ಮ ಜಮೀನಿನ ವಿಷಯವಾಗಿ ಯಜಮಾನರುಗಳ ಬಳಿ ಹೋದರೆ ಅವರು ತಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ನಮ್ಮ ೪.೧೩ ಗುಂಟೆ ಜಮೀನಿನ ಪೈಕಿ ಗ್ರಾಮದ ಕೆಲವರು ೨.೧೩ ಎಕರೆ ಜಮೀನಿಗೆ ನಕಲಿ ಸಹಿ ಮಾಡಿ, ಅಕ್ರಮ ಖಾತೆ ಮಾಡಿಸಿಕೊಂಡಿದ್ದಾರೆ. ನಮ್ಮನ್ನು ಸಾಮಾಜಿಕ ಬಹಿಷ್ಕಾರದಿಂದ ಪಾರು ಮಾಡಿ ನ್ಯಾಯಕೊಡಿಸಿ’ ಎಂದು ಹರದನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ತಾವರೆಕಟ್ಟೆ ಮೋಳೆ ಗ್ರಾಮದ ಸಿದ್ದಮಲ್ಲಶೆಟ್ಟಿ ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಹರದನಹಳ್ಳಿ ಎಲ್ಲೆ ಸರ್ವೇ ನಂ.೪೬೦/೧ ಮತ್ತು ೨ರಲ್ಲಿ ೪.೧೩ ಎಕರೆ ಜಮೀನಿದ್ದು, ೧೯೮೫ರಲ್ಲಿ ನಮ್ಮ ತಂದೆ ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಡುವ ಸಂಬಂಧ ೨ಎಕರೆ ಜಮೀನನ್ನು ಸರ್ಕಾರಕ್ಕೆ ನೀಡಿದ್ದರು. ೧ ಎಕರೆಗೆ ಸರ್ಕಾರ ಅನುದಾನ ಮಂಜೂರು ಮಾಡಿತ್ತು’ ಎಂದರು.
‘೧.೭ ಎಕರೆಯಲ್ಲಿ ಗ್ರಾಮದ ಜನರು ಮನೆ ಕಟ್ಟಿಕೊಂಡಿದ್ದಾರೆ. ಜಮೀನಿಗೆ ಸಂಬಂಧಪಟ್ಟ ಎಲ್ಲ ದಾಖಲಾತಿಗಳು ಲಭ್ಯವಿದ್ದು, ನ್ಯಾಯಕ್ಕಾಗಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ’ ಎಂದರು.
‘ಕೂಲಿ ಮಾಡಿ ಜೀವಿಸುವ ಬಡ ಕುಟುಂಬದವರು, ನಮ್ಮ ಕುಟುಂಬದವರು ಯಾರನ್ನು ಮಾತನಾಡಿಸಬಾರದು, ಧಾರ್ಮಿಕ ಕಾರ್ಯಕ್ರಮಗಳು ಕರೆಯದಂತೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ, ಆಗಾಗ್ಗೆ ನಮ್ಮ ಕುಟುಂಬದವರ ಮೇಲೆ ಹಲ್ಲೆ ನಡೆದಿವೆ. ಗ್ರಾಮದ ಕೆಲವರು ಕೊಡುತ್ತಿರುವ ಕಿರುಕುಳ ತಾಳಲಾರದೇ, ಹೊಲದ ಮನೆಯಲ್ಲಿ ತೆಂಗಿನಗರಿ ಶೆಡ್ ಹಾಕಿಕೊಂಡು ವಾಸವಿದ್ದವು. ಶೆಡ್ ಅನ್ನು ಸಹ ಸುಟ್ಟು ಹಾಕಿದ್ದಾರೆ. ಈ ಬಗ್ಗೆ ದೂರು ನೀಡಲಾಗಿದೆ’ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಶೆಟ್ಟಿ ಪತ್ನಿ ನೀಲಮ್ಮ, ಪುತ್ರರಾದ ಬಸವಣ್ಣ, ಕೆಂಪರಾಜು ಇದ್ದರು
---(ಮಗ್‌ಶಾಟ್ ಇಡಿ ಸಾಕು)
೨೪ಸಿಎಚ್‌ಎನ್೧ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಾವರೆಕಟ್ಟೆ ಮೋಳೆ ಗ್ರಾಮದ ಸಿದ್ದಮಲ್ಲಶೆಟ್ಟಿ ಮಾತನಾಡಿದರು.