ಸಾರಾಂಶ
ಹಾನಗಲ್ಲ: ಲಿಂಗ ಸಮಾನತೆ, ಸಾಮಾಜಿಕ ತಾರತಮ್ಯ ನಿರ್ಮೂಲನೆಗೆ ಶ್ರಮಿಸಿದ್ದ ಬಸವಣ್ಣ ಮೂಢನಂಬಿಕೆ, ಅನಿಷ್ಟ ಆಚರಣೆಗಳ ವಿರುದ್ಧ ಸಮರ ಸಾರಿದರು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಹಾನಗಲ್ಲಿನ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸ ಮಾನೆ ಭಾಗವಹಿಸಿದ್ದರು. ಬಳಿಕ ವಿರಕ್ತಮಠದ ಆವರಣದಲ್ಲಿನ ಜಗಜ್ಯೋತಿ ಬಸವೇಶ್ವರ ಹಾಗೂ ವೀರರಾಣಿ ಕಿತ್ತೂರು ಚೆನ್ನಮ್ಮನ ಪುತ್ಥಳಿಗಳಿಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.ಜಾತೀಯತೆ, ಮತಾಂಧತೆ, ಶೋಷಣೆ, ಮೌಢ್ಯಗಳಿಂದ ಮುಳುಗಿ ಹೋಗಿದ್ದ ಸಮಾಜವನ್ನು ಮೇಲೆತ್ತುವಲ್ಲಿ ೧೨ ನೇ ಶತಮಾನದಲ್ಲಿಯೇ ಬಸವಣ್ಣ ಜನಪರ ಕಾಳಜಿಯಿಂದ ಮಾಡಿದ ಪ್ರಯತ್ನ, ಪ್ರಯೋಗಗಳು ಇಂದಿಗೂ ಕೂಡ ಆದರ್ಶವಾಗಿವೆ ಎಂದರು.ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣನವರನ್ನು ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಅಷ್ಟೆಅಲ್ಲದೇ ಬಸವ ತತ್ವಗಳ ಆಧಾರದ ಮೇಲೆ ಆಡಳಿತ ನೀಡುತ್ತಿದೆ ಎಂದು ತಿಳಿಸಿದ ಶ್ರೀನಿವಾಸ ಮಾನೆ, ಸಮಸಮಾಜ ನಿರ್ಮಾಣದ ಬಗ್ಗೆ ಬಸವಣ್ಣನವರು ಕಂಡ ಕನಸು ನನಸು ಮಾಡಲು ಎಲ್ಲರ ಸಹಕಾರ ಬೇಕಿದೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಜಯಕುಮಾರ ದೊಡ್ಡಮನಿ, ಮಂಜು ಗೊರಣ್ಣನವರ, ಕೆಪಿಸಿಸಿ ಸದಸ್ಯ ಖ್ವಾಜಾಮೊಹಿದ್ದೀನ್ ಜಮಾದಾರ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಶಿವು ಭದ್ರಾವತಿ, ಶಿವು ತಳವಾರ, ಮುಖಂಡರಾದ ಕಲವೀರಪ್ಪ ಪವಾಡಿ, ಯಲ್ಲಪ್ಪ ಕಲ್ಲೇರ, ವೀರೇಶ ಬೈಲವಾಳ, ಬಸವಂತ ನಾಯ್ಕ, ಬಸನಗೌಡ ಪಾಟೀಲ, ರಾಜಶೇಖರ ಹಲಸೂರ, ಮಮತಾ ಆರೆಗೊಪ್ಪ, ಲೀಲಾವತಿ ದೊಡ್ಡಮನಿ, ಮೇಕಾಜಿ ಕಲಾಲ, ವಿನಾಯಕ ಬಂಕನಾಳ, ರಾಜೇಶ ಚವ್ಹಾಣ, ಸುರೇಶ ನಾಗಣ್ಣನವರ, ಪ್ರವೀಣ ಹಿರೇಮಠ, ರಾಜೂ ಗಾಡಗೇರ, ರಫೀಕ್ ಉಪ್ಪಣಸಿ, ಪರಶುರಾಮ್ ಖಂಡೂನವರ, ಪ್ರಸಾದಗೌಡ, ಯಲ್ಲಪ್ಪ ಕುದರಿಸಿದ್ದನವರ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಫೋಟೊ: ೧೦ಎಚ್‌ಎನ್‌ಎಲ್೨
ಹಾನಗಲ್ ವಿರಕ್ತಮಠದ ಆವರಣದಲ್ಲಿನ ಜಗಜ್ಯೋತಿ ಬಸವೇಶ್ವರ ಪುತ್ಥಳಿಗೆ ಶಾಸಕ ಶ್ರೀನಿವಾಸ ಮಾನೆ ಗೌರವಾರ್ಪಣೆ ಸಲ್ಲಿಸಿದರು.