ರಾಜಕಾರಣಿಯಾಗಲು ಕೆಲವರಿಂದ ಸಮಾಜ ಸೇವೆ: ಆಶಯ್‌ ಮಧು

| Published : Aug 20 2024, 12:46 AM IST

ರಾಜಕಾರಣಿಯಾಗಲು ಕೆಲವರಿಂದ ಸಮಾಜ ಸೇವೆ: ಆಶಯ್‌ ಮಧು
Share this Article
  • FB
  • TW
  • Linkdin
  • Email

ಸಾರಾಂಶ

ಜಿ.ಮಾದೇಗೌಡರ ಹಾದಿಯಲ್ಲೇ ನಡೆಯುತ್ತಿರುವ ಆಶಯ್‌ಮಧು ಅವರಿಗೆ ರಾಜಕೀಯದಲ್ಲಿ ಶಕ್ತಿ ನೀಡಿ ಬೆಂಬಲಿಸಬೇಕು. ಇಂದು ಜನರ ಸೇವೆ ಹೆಸರಿನಲ್ಲಿ ಮೋಸ ಮಾಡುವ ರಾಜಕಾರಣಿಗಳು ಹೆಚ್ಚಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಹಿಂದೆಲ್ಲಾ ಸಮಾಜ ಸುಧಾರಣೆಗೋಸ್ಕರ ರಾಜಕಾರಣಕ್ಕೆ ಬರುತ್ತಿದ್ದರು. ಈಗ ರಾಜಕಾರಣವನ್ನೇ ಗುರಿಯಾಗಿಸಿಕೊಂಡು ಸಮಾಜ ಸೇವೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ ಆಶಯ್‌ ಮಧು ವಿಷಾದಿಸಿದರು.

ಗುರುದೇವರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್, ಶ್ರೀಮತಿ ಪದ್ಮ ಜಿ. ಮಾದೇಗೌಡ ನರ್ಸಿಂಗ್ ಕಾಲೇಜು, ಬಿಇಟಿ ಹೆಲ್ತ್ ಸೈನ್ಸ್ ಅಂಗಸಂಸ್ಥೆಗಳು, ಆಶಯ್‌ ಜಿ. ಮಧು ಅಭಿಮಾನಿಗಳ ಬಳಗ, ವರ್ಧಮಾನ್ ಜೈನ್ ನೇತ್ರಾಲಯ ಮಂಡ್ಯ, ಗುರುದೇವರಹಳ್ಳಿ ಆರೋಗ್ಯ ಪ್ರಾಥಮಿಕ ಕೇಂದ್ರ, ಚಿಕ್ಕರಸಿನಕೆರೆ ಗ್ರಾಪಂ ಆಶ್ರಯದಲ್ಲಿ 5 ದಿನಗಳ ಕಾಲ ಬೃಹತ್ ಉಚಿತ ಆರೋಗ್ಯ ತಪಾಸಣೆ, ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಆಧುನಿಕ ಶಸ್ತ್ರ ಚಿಕಿತ್ಸೆ ಮೂಲಕ ಐಒಎಲ್ ಅಳವಡಿಕೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದ ಸುಧಾರಣೆಗೋಸ್ಕರ ಸೇವೆ ಮಾಡಲು ರಾಜಕೀಯಕ್ಕೆ ಬರುತ್ತಿದ್ದ ಕಾಲ ಮಾಯವಾಗಿದೆ. ಈಗ ಏನಿದ್ದರೂ ಕೆಲವರಿಗೆ ಸಮಾಜ ಸೇವೆಯೇ ರಾಜಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಮ್ಮ ತಾತ ದಿ.ಜಿ.ಮಾದೇಗೌಡರು ಜನರ ಸೇವೆಗಾಗಿ ರಾಜಕೀಯ ಮಾಡಿದವರು. ಹಾಗೆಯೇ ನಮ್ಮ ಕುಟುಂಬದವರು ಸಹ ಅದೇ ಹಾದಿಯಲ್ಲಿ ನಡೆಯುತ್ತಿದ್ದೇವೆ. ಕೆಲವರು ಜನರಿಗೆ ಉಡುಗೊರೆಗಳನ್ನು ಕೊಟ್ಟು ಕಾರ್ಯಕ್ರಮಗಳನ್ನು ಮಾಡಿ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಇಂತಹ ರಾಜಕಾರಣಿಗಳಿಂದ ಯಾವುದೇ ಅಭಿವೃದ್ದಿ ಸಾಧ್ಯವಿಲ್ಲ. ಚುನಾವಣೆ ವೇಳೆ ಆಮಿಷಗಳನ್ನು ನೀಡಿ ಮತ ಪಡೆಯುವವರಿಗೆ ಮಣೆ ಹಾಕಬಾರದು ಎಂದು ಸಲಹೆ ನೀಡಿದರು.

ಆಶಯ್‌ ಗೆ ಶಕ್ತಿ ನೀಡಿ :

ಭಾರತೀ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಮಾತನಾಡಿ, ಜಿ.ಮಾದೇಗೌಡರ ಹಾದಿಯಲ್ಲೇ ನಡೆಯುತ್ತಿರುವ ಆಶಯ್‌ಮಧು ಅವರಿಗೆ ರಾಜಕೀಯದಲ್ಲಿ ಶಕ್ತಿ ನೀಡಿ ಬೆಂಬಲಿಸಬೇಕು. ಇಂದು ಜನರ ಸೇವೆ ಹೆಸರಿನಲ್ಲಿ ಮೋಸ ಮಾಡುವ ರಾಜಕಾರಣಿಗಳು ಹೆಚ್ಚಾಗಿದ್ದಾರೆಂದು ತಿಳಿಸಿದರು.

ಶಾಸಕ ಮಧು ಜಿ.ಮಾದೇಗೌಡ ಮಾತನಾಡಿ, ಆರೋಗ್ಯ ತಪಾಸಣಾ ಶಿಬಿರಗಳನ್ನು ಪ್ರತಿ ಗ್ರಾಪಂ ಮಟ್ಟದಲ್ಲೂ ಆಯೋಜಿಸಲು ಆಶಯ್‌ ಅಭಿಮಾನಿಗಳ ಬಳಗ ಚಿಂತನೆ ನಡೆಸಿದೆ ಎಂದು ಹೇಳಿದರು.

ವೈದ್ಯಾಧಿಕಾರಿಗಳಿಗೆ ಮತ್ತು ಸುತ್ತಮುತ್ತಲಿನ ಆಶಾ ಕಾರ್ಯಕರ್ತೆಯರಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು. ವೇದಕೆಯಲ್ಲಿ ಟಿಎಚ್‌ಓ ಬಿ.ರವೀಂದ್ರ, ಬಿಇಟಿ ಹೆಲ್ತ್‌ಸೈನ್ಸ್‌ನ ನಿರ್ದೇಶಕ ಟಿ.ತಮಿಜ್‌ಮಣಿ, ಗ್ರಾಪಂ ಅಧ್ಯಕ್ಷೆ ಕಮಲಮ್ಮ, ಜಿ.ಮಾದೇಗೌಡ ಆಸ್ಪತ್ರೆ ಆಡಳಿತಾಧಿಕಾರಿ ಪಿ.ಎಸ್.ಗಣೇಶ್‌ಪ್ರಭು, ವರ್ಧಮಾನ್ ಜೈನ್ ನೇತ್ರಾಲಯ ವೈದ್ಯಾಧಿಕಾರಿ ಜೆ.ಆಶಾರಾಣಿ, ಪಿಡಿಒ ಎಚ್.ಪಿ.ಶಿವಮಾದಯ್ಯ, ಪದ್ಮಜಿ.ಮಾದೇಗೌಡ ನರ್ಸರಿ ಕಾಲೇಜಿನ ಪ್ರೊ.ಮಹೇಶ್‌ಕುಮಾರ್‌ ಜಿಲೋನಿ, ತಾಪಂ ಮಾಜಿ ಸದಸ್ಯ ಭರತೇಶ್, ಮುಖಂಡರಾದ ಅಣ್ಣೂರು ಸಿದ್ದಪ್ಪ, ಕಾರ್ಕಹಳ್ಳಿ ಸ್ವರೂಪ್‌ಚಂದ್ರು, ಗುರುದೇವರಹಳ್ಳಿ ಪುಟ್ಟಸ್ವಾಮಿ, ಚಿಕ್ಕರಸಿನಕೆರೆ ಶಿವಲಿಂಗಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.