ಸಮಾಜ ಸೇವೆಯೇ ಲಯನ್ಸ್ ಕ್ಲಬ್ ಗುರಿ-ಸುಭಾಸ ಹುಲ್ಯಾಳದ

| Published : Jul 17 2024, 12:49 AM IST

ಸಾರಾಂಶ

ಹಾವೇರಿಯ ಬಸವೇಶ್ವರ ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಲಯನ್ಸ್ ಕ್ಲಬ್‌ನ ನೂತನ ೫೨ನೇ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ನಡೆಯಿತು.

ಹಾವೇರಿ: ಸ್ಥಳೀಯ ಬಸವೇಶ್ವರ ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಲಯನ್ಸ್ ಕ್ಲಬ್‌ನ ನೂತನ ೫೨ನೇ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ನಡೆಯಿತು.ಎಂಜೆಎಫ್ ಸುದೇಶ ಬೋರಕಾರ ಅವರು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ, ಪ್ರತಿಜ್ಞಾವಿಧಿಯನ್ನು ಬೋಧಿಸಿ, ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾರ್ಗದರ್ಶನ ನೀಡಿದರು. ನಿಕಟಪೂರ್ವ ಅಧ್ಯಕ್ಷ ಪಿ.ಡಿ. ಶಿರೂರ ಅಧಿಕಾರ ಹಸ್ತಾಂತರಿಸಿದರು. ನೂತನ ಅಧ್ಯಕ್ಷರಾಗಿ ಸುಭಾಸ ಹುಲ್ಯಾಳದ, ಕಾರ್ಯದರ್ಶಿಗಳಾಗಿ ವಿರೂಪಾಕ್ಷ ಹಾವನೂರ ಹಾಗೂ ಖಜಾಂಚಿಯಾಗಿ ಗಿರೀಶ ಬಣಕಾರ ಅಧಿಕಾರ ವಹಿಸಿಕೊಂಡರು.ನೂತನ ಅಧ್ಯಕ್ಷ ಸುಭಾಸ ಹುಲ್ಯಾಳದ ಮಾತನಾಡಿ, ಸಮಾಜ ಸೇವೆ ಮಾಡುವುದೇ ಲಯನ್ಸ್ ಕ್ಲಬ್ ಸಂಸ್ಥೆಯ ಗುರಿಯಾಗಿದೆ. ಅದಕ್ಕಾಗಿ ಯಾವುದೇ ಸಂದರ್ಭದಲ್ಲೂ ಸೇವೆಗೆ ಸದಾ ಸಿದ್ಧನಾಗಿದ್ದು, ಸದಸ್ಯರ ಸಹಕಾರದೊಂದಿಗೆ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ, ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಅತಿಥಿಯಾಗಿ ಪಾಲ್ಗೊಂಡಿದ್ದ ರುದ್ರಪ್ಪ ಕಮ್ಮಾರ ಮಾತನಾಡಿದರು.ವಿ.ಜಿ. ಬಣಕಾರ ನೇತೃತ್ವದಲ್ಲಿ ಪ್ರತಿವರ್ಷದಂತೆ ಈ ವರ್ಷವು ಹೊಲಿಗೆ ಯಂತ್ರವನ್ನು ನದಿನೀರಲಗಿ ಗ್ರಾದಮ ಪ್ರೀತಿ ಎನ್. ಕಲ್ಲನಗೌಡ್ರ, ಹಾಗೂ ಹಾವೇರಿಯ ಶಿವಲೀಲಾ ಕೆ. ಪಾಟೀಲ ಅವರಿಗೆ ವಿತರಿಸಲಾಯಿತು. ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಶಿಕ್ಷಣ ಸಂಸ್ಥೆಯ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ನೂತನ ಪದಾಧಿಕಾರಿಗಳನ್ನು ಗೌರವಿಸಿ ಶುಭ ಹಾರೈಸಿದರು. ಸಾರ್ವಜನಿಕರು ಹಾಗೂ ಶಾಲಾ ಸಿಬ್ಬಂದಿ ಪಾಲ್ಗೊಂಡಿದ್ದರು. ಪಿ.ಡಿ.ಶಿರೂರ ಸ್ವಾಗತಿಸಿದರು. ಅಶೋಕ ಮಾಗನೂರ ವರದಿ ವಾಚನ ಮಾಡಿದರು. ನಿತಿನ್ ಹೊರಡಿ ಪರಿಚಯ ಭಾಷಣ ಮಾಡಿದರು. ಎ.ಎಚ್. ಕಬ್ಬಿಣಕಂತಿಮಠ ನಿರೂಪಿಸಿದರು. ಗಿರೀಶ ಬಣಕಾರ ವಂದಿಸಿದರು.