ಅಧ್ಯಾತ್ಮಿಕ ಪ್ರಜ್ಞೆಯಿಂದ ಸಮಾಜಮುಖಿ ಚಿಂತನೆ

| Published : Apr 29 2024, 01:33 AM IST

ಸಾರಾಂಶ

ದೊಡ್ಡಬಳ್ಳಾಪುರ: ಇಲ್ಲಿನ ದೇವರಾಜನಗರದ ಸತ್ಯಸಾಯಿ ಸೇವಾ ಕ್ಷೇತ್ರದಲ್ಲಿ ಭಗವಾನ್ ಶ್ರೀಸತ್ಯಸಾಯಿ ಸೇವಾ ಸಮಿತಿಯಿಂದ ಸತ್ಯಸಾಯಿ ಬಾಬಾ ಮಹಾಸಮಾಧಿ ಪುಣ್ಯಸ್ಮರಣೆ ಅಂಗವಾಗಿ 13ನೇ ವರ್ಷದ ಆರಾಧನಾ ಮಹೋತ್ಸವ ನಡೆಯಿತು.

ದೊಡ್ಡಬಳ್ಳಾಪುರ: ಇಲ್ಲಿನ ದೇವರಾಜನಗರದ ಸತ್ಯಸಾಯಿ ಸೇವಾ ಕ್ಷೇತ್ರದಲ್ಲಿ ಭಗವಾನ್ ಶ್ರೀಸತ್ಯಸಾಯಿ ಸೇವಾ ಸಮಿತಿಯಿಂದ ಸತ್ಯಸಾಯಿ ಬಾಬಾ ಮಹಾಸಮಾಧಿ ಪುಣ್ಯಸ್ಮರಣೆ ಅಂಗವಾಗಿ 13ನೇ ವರ್ಷದ ಆರಾಧನಾ ಮಹೋತ್ಸವ ನಡೆಯಿತು. ಸತ್ಯಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಎ.ಆ‌ರ್.ನಾಗರಾಜನ್ ಮಾತನಾಡಿ, ಮಕ್ಕಳು ತಮ್ಮ ಹೊಣೆಗಾರಿಕೆ ಅರಿಯಬೇಕಿದ್ದು, ಸಾಯಿ ಬಾಬಾ ಅವರ ಕರ್ತವ್ಯ ನಿಷ್ಠೆ, ತತ್ವಾದರ್ಶ ಸ್ಪೂರ್ತಿಯಾಗಬೇಕಿದೆ. ಸಾಯಿಬಾಬಾ ಅವರ ಅಧ್ಯಾತ್ಮಿಕ ಹಾಗೂ ಸಾಮಾಜಿಕ ವಿಚಾರವನ್ನು ಇಂದಿನ ಪೀಳಿಗೆ ಅರಿಯಬೇಕು. ಅವರ ಪುಣ್ಯ ಸ್ಮರಣೆಯಂದು ಸಮಾಜಮುಖಿ ಚಿಂತನೆ ಮಾಡುವ ಪಣ ತೊಡಬೇಕಿದೆ ಎಂದರು.

ಧಾರ್ಮಿಕ ಪ್ರಜ್ಞೆ ಜಾಗೃತಗೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸುವುದು ಪೋಷಕರ ಆದ್ಯತೆಯಾಗಬೇಕು. ಅಧ್ಯಾತ್ಮಿಕ ಚಿಂತನೆಗಳತ್ತ ಮನಸ್ಸನ್ನು ಕೇಂದ್ರೀಕರಿಸುವುದರಿಂದ ಧನಾತ್ಮಕ ಚಿಂತನೆಗಳನ್ನು ಹೊಂದಬಹುದು ಎಂದು ತಿಳಿಸಿದರು.

ಆರಾಧನೆಯ ಅಂಗವಾಗಿ ಬೆಳಗಿನ ಜಾವ ನಗರ ಸಂಕೀರ್ತನೆ, ಓಂಕಾರ, ಸುಪ್ರಭಾತ, ಅಭಿಷೇಕ ನಡೆಯಿತು.

ಆರಾಧನೆಯ ಅಂಗವಾಗಿ ಶ್ರೀಸತ್ಯಸಾಯಿ ಸಾಮೂಹಿಕ ಭಜನೆ, ಪ್ರಸಾದ ವಿನಿಯೋಗ ಜರುಗಿತು. ಬಾಲ ವಿಕಾಸ ಮಕ್ಕಳಿಂದ ಭಕ್ತ ಮಾರ್ಕಂಡೇಯ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಶ್ರೀಸತ್ಯಸಾಯಿ ಸೇವಾ ಟ್ರಸ್ಟ್ ಸಂಚಾಲಕ ಎಸ್.ಎಲ್.ರಾಮಚಂದ್ರ, ಗೌರಮ್ಮ ಹಾಗೂ ಸಮಿತಿಯ ಸದಸ್ಯರು ಇತರರಿದ್ದರು.28ಕೆಡಿಬಿಪಿ3-ದೊಡ್ಡಬಳ್ಳಾಪುರದ ಶ್ರೀಸತ್ಯಸಾಯಿ ಸೇವಾ ಸಮಿತಿಯಿಂದ ನಡೆದ ಸತ್ಯಸಾಯಿ ಬಾಬಾ ಆರಾಧನಾ ಮಹೋತ್ಸವದಲ್ಲಿ ಬಾಲ ವಿಕಾಸ ಮಕ್ಕಳು ''''''''ಭಕ್ತ ಮಾರ್ಕಂಡೇಯ'''''''' ನಾಟಕ ಪ್ರದರ್ಶನ ನಡೆಯಿತು.