ಸಾರಾಂಶ
ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ, ಹಾಗೂ ಸಮಾಜ ಸೇವಕ ಜಿ.ಸಿ ಕಿರಣ್ ಶುಕ್ರವಾರ ರಾತ್ರಿ ತಾಲೂಕಿನ ಮುಳ್ಳೂರು ಗ್ರಾಮಕ್ಕೆ ಭೇಟಿ ನೀಡಿ ಅನಾರೋಗ್ಯ ಪೀಡಿತ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡುವ ಭರವಸೆ । ಕ್ಯಾನ್ಯರ್ ಭಾದಿತನಿಗೆ 25ಸಾವಿರ, ಅನಾರೋಗ್ಯಕ್ಕಿಡಾಗಿದ್ದ ಕುಟುಂಬಕ್ಕೆ 10ಸಾವಿರ ವಿತರಣೆ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ, ಹಾಗೂ ಸಮಾಜ ಸೇವಕ ಜಿ.ಸಿ ಕಿರಣ್ ಶುಕ್ರವಾರ ರಾತ್ರಿ ತಾಲೂಕಿನ ಮುಳ್ಳೂರು ಗ್ರಾಮಕ್ಕೆ ಭೇಟಿ ನೀಡಿ ಅನಾರೋಗ್ಯ ಪೀಡಿತ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ತಾಲೂಕಿನ ಉಪ್ಪಾರ ಬಡಾವಣೆಗೆ ಭೇಟಿ ನೀಡಿದ ಅವರು ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವ ನಂಜಮ್ಮ ಎಂಬುವರಿಗೆ ರೇಡಿಯೇಶನ್ ಚಿಕಿತ್ಸೆ ವೆಚ್ಚಕ್ಕಾಗಿ 25,000 ರೂ ಗಳ ಚೆಕ್ಕನ್ನು ನೀಡಿದರಲ್ಲದೆ ಮುಂದಿನ ವಾರ ಆಗಮಿಸಿ ಇನ್ನು ಹೆಚ್ಚಿನ ನೆರವು ನೀಡುವ ಭರವಸೆ ನೀಡಿದರು.
ಮತ್ತೊಬ್ಬ ಕ್ಯಾನ್ಸರ್ ಪೀಡಿತೆ ನಾಗಮ್ಮ ಎಂಬುವರ ಮನೆಗೆ ಭೇಟಿ ನೀಡಿ ಅವರ ಚಿಕಿತ್ಸೆ ಹಾಗೂ ಔಷಧ ವೆಚ್ಚಕ್ಕಾಗಿ ಸಹ ಧನ ಸಹಾಯ ಮಾಡಿದರು. ಒಂದೇ ಮನೆಯಲ್ಲಿ ಮೂವರು ಅನಾರೋಗ್ಯ ಪೀಡಿತರಾಗಿ ದುಡಿಮೆ ಇಲ್ಲದೆ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ವೆಚ್ಚಕ್ಕಾಗಿ ಪರದಾಡುತ್ತಿದ್ದ ವೆಂಕಟರಮಣಶೆಟ್ಟಿ ರವರ ಮನೆಗೆ ಭೇಟಿ ನೀಡಿ ಕುಟುಂಬದ ಸಮಸ್ಯೆ ಆಲಿಸಿ 10ಸಾವಿ ರು. ಗಳ ಚೆಕ್ ವಿತರಿಸಿದರು. ಹಾಗೂ ದುಡಿಮೆಯೇ ಇಲ್ಲದಿದ್ದ ಮೇಲೆ ಬದುಕು ಸಾಗಿಸುವುದು ಕಷ್ಟ. ನಾನು ನೀಡಿರುವ ಈ ಸಣ್ಣ ಸಹಾಯವಾಗಿದ್ದು . ನೀವು ಜೀವನ ನಿರ್ವಹಣೆ ಮಾಡಲು ನಿಮ್ಮ ಕುಟುಂಬಕ್ಕೆ ಹೊಲಿಗೆಯಂತ್ರ ಕೊಡಿಸುತ್ತೇನೆ. ಇದರಿಂದ ದುಡಿಮೆ ಮಾಡಿ ಹೇಗೂ ಜೀವನ ನಿರ್ವಹಣೆ ಮಾಡಬಹುದು ಎಂದು ಭರವಸೆ ನೀಡಿದರು.ಪರಿಶಿಷ್ಟ ಜನಾಂಗದ ಬಡಾವಣೆಯಲ್ಲಿರುವ ಮಹಿಳಾ ಸಂಘದ ಸದಸ್ಯರನ್ನು ಭೇಟಿ ಮಾಡಿ ಅವರ ಸಮಸ್ಯೆಯನ್ನು ಆಲಿಸಿ ಮಾತನಾಡಿದ ಅವರು ಮಹಿಳೆಯರು ಸ್ವಾವಲಂಬಿಗಳಾಗಲು ಸ್ವಯಂ ಉದ್ಯೋಗ ಕಲಿತು ಆರ್ಥಿಕವಾಗಿ ಸಬಲರಾಗಬೇಕು. ಆಗ ಮಾತ್ರ ಸಮಾಧಾನಕರ ಜೀವನ ನಡೆಸಲು ಸಾಧ್ಯ. ನಿಮ್ಮ ಮಹಿಳಾ ಸಂಘಕ್ಕೆ ಹೊಲಿಗೆ ಯಂತ್ರಗಳನ್ನು ಕೊಡಿಸುತ್ತೇನೆ ಇದರಿಂದ ದುಡಿದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ. ಪಂ. ಸದಸ್ಯೆ ಕಾಂತಮ್ಮ ಮಹಿಳಾ ಸಂಘದ ರಾಜಮ್ಮ, ಜಯಲಕ್ಷ್ಮಿ, ಸುಷ್ಮಾ, ಗಿರಿಜಾ, ಗೀತಾ, ಕಾವ್ಯ, ಪುಟ್ಟಮ್ಮ, ಚಂದ್ರಕಲಾ, ಚಂದ್ರಮ್ಮ ಮುಖಂಡರಾದ ಮಂಜು ಇನ್ನಿತರಿದ್ದರು.