ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಗೆ ಲಕ್ಷ್ಯಾ ಮಾತೃ ಆರೋಗ್ಯ ಕಾರ್ಯಕ್ರಮದಡಿ ರಾಷ್ಟ್ರೀಯ ಗುಣಮಟ್ಟದ ಪ್ರಮಾಣ ಪತ್ರ ಲಭಿಸಿರುವ ಪ್ರಯುಕ್ತ ಕರುಣಾ ಟ್ರಸ್ಟ್‌ ಅಧ್ಯಕ್ಷನಾಗಿ, ಇದೇ ಆಸ್ಪತ್ರೆ ಮುಖ್ಯಸ್ಥನಾಗಿ ಕೆಲಸ ಮಾಡಿದ್ದರಿಂದ ಇಂದು ಮದರ್ ಥೆರೆಸಾ ಮತ್ತು ಡಾ. ಬಿ.ಸಿ.ರಾಯ್ ಸೇವಾ ಪ್ರಶಸ್ತಿ ನೀಡಿ, ಕೃತಜ್ಞತೆಯನ್ನು ಸಲ್ಲಿಸುತ್ತಿರುವುದು ಸಂತಸದ ವಿಷಯ. ಈ ಪ್ರಶಸ್ತಿಗೆ ಭಾಜನರಾಗಿರುವವರು ನಮ್ಮ ವಿದ್ಯಾರ್ಥಿಗಳೇ ಎಂಬುದು ಹೆಮ್ಮೆಯ ವಿಷಯ ಎಂದು ಡಾ. ಎಚ್.ಎನ್. ಮಲ್ಲಿಕಾರ್ಜುನ ಹರ್ಷ ವ್ಯಕ್ತಪಡಿಸಿದ್ದಾರೆ.

- ಕರುಣಾ ಟ್ರಸ್ಟ್‌ನಿಂದ ಮಹಿಳೆ-ಮಕ್ಕಳ ಆಸ್ಪತ್ರೆಯಲ್ಲಿ ಅಭಿನಂದನಾ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಗೆ ಲಕ್ಷ್ಯಾ ಮಾತೃ ಆರೋಗ್ಯ ಕಾರ್ಯಕ್ರಮದಡಿ ರಾಷ್ಟ್ರೀಯ ಗುಣಮಟ್ಟದ ಪ್ರಮಾಣ ಪತ್ರ ಲಭಿಸಿರುವ ಪ್ರಯುಕ್ತ ಕರುಣಾ ಟ್ರಸ್ಟ್‌ ಅಧ್ಯಕ್ಷನಾಗಿ, ಇದೇ ಆಸ್ಪತ್ರೆ ಮುಖ್ಯಸ್ಥನಾಗಿ ಕೆಲಸ ಮಾಡಿದ್ದರಿಂದ ಇಂದು ಮದರ್ ಥೆರೆಸಾ ಮತ್ತು ಡಾ. ಬಿ.ಸಿ.ರಾಯ್ ಸೇವಾ ಪ್ರಶಸ್ತಿ ನೀಡಿ, ಕೃತಜ್ಞತೆಯನ್ನು ಸಲ್ಲಿಸುತ್ತಿರುವುದು ಸಂತಸದ ವಿಷಯ. ಈ ಪ್ರಶಸ್ತಿಗೆ ಭಾಜನರಾಗಿರುವವರು ನಮ್ಮ ವಿದ್ಯಾರ್ಥಿಗಳೇ ಎಂಬುದು ಹೆಮ್ಮೆಯ ವಿಷಯ ಎಂದು ಡಾ. ಎಚ್.ಎನ್. ಮಲ್ಲಿಕಾರ್ಜುನ ಹರ್ಷ ವ್ಯಕ್ತಪಡಿಸಿದರು.

ಕರುಣಾ ಟ್ರಸ್ಟ್‌ ವತಿಯಿಂದ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರುಣಾ ಟ್ರಸ್ಟಿನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ, ತಾವೆಲ್ಲರೂ ಶ್ರಮ, ಶ್ರದ್ಧೆ, ಪ್ರಾಮಾಣಿಕತೆ, ಪ್ರೀತಿ, ವಿಶ್ವಾಸ, ನಂಬಿಕೆಯಿಂದ ಕಾರ್ಯ ನಿರ್ವಹಿಸಿ, ಪ್ರಶಸ್ತಿಗೆ ಭಾಜನರಾಗಿದ್ದೀರಿ. ಇನ್ನೂ ಹೆಚ್ಚಿನ ಸಾಧನೆಗೆ ಬುದ್ಧನ ಜೀವನಾನಂದದ ಸೂತ್ರಗಳಾದ ಉದಾರತೆ, ಉತ್ಸಾಹ ತುಂಬುವ ಪ್ರಯತ್ನಗಳು, ತಾಳ್ಮೆ, ತನ್ನ ಮತ್ತು ಇತರರ ಮೇಲಕ್ಕೆತ್ತುವ ವಿವೇಕ, ಪ್ರಜ್ಞಾಪೂರ್ವಕ ಎಚ್ಚರ, ನೈತಿಕ ಸ್ವಯಂ ಶಿಸ್ತು ಇವುಗಳ ಅಳವಡಿಕೆ ಬಹುಮುಖ್ಯ ಎಂದು ಇವುಗಳ ಬಗ್ಗೆ ಸ್ಪಷ್ಟ ಅರಿವು ಮೂಡಿಸಿದರು.

ವೈದ್ಯಕೀಯ ಅಧೀಕ್ಷಕ ಡಾ. ಎಸ್.ಪಿ. ಮಧು ಮಾತನಾಡಿ, ನಮ್ಮ ಆಸ್ಪತ್ರೆಗೆ ಲಭಿಸಿರುವ ಈ ಗೌರವ ಕೇವಲ ನಮ್ಮಿಂದ ಮಾತ್ರವಲ್ಲ. ನಮ್ಮ ಆಸ್ಪತ್ರೆಯ ಪ್ರತಿಯೊಬ್ಬ ಸಿಬ್ಬಂದಿಯೂ ಕಾರಣಕರ್ತರು ಎಂದರು.

ಕಾರ್ಯಕ್ರಮದಲ್ಲಿ ಡಾ. ಎಸ್.ಪಿ. ಮಧು, ಡಾ. ಎಸ್.ಜಿ. ಭಾರತಿ, ಡಾ. ಎಸ್.ಸಿ. ಬಸವರಾಜ, ಕೆ.ಎಚ್. ಸುಧಾ, ಟಿ.ಪಿ. ಹೇಮಣ್ಣ ಅವರಿಗೆ ಡಾ. ಬಿ.ಸಿ. ರಾಯ್ ಸೇವಾ ಪ್ರಶಸ್ತಿ, ಮದರ್ ತೆರೆಸಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕರುಣಾ ಟ್ರಸ್ಟ್‌ ಸಿಬ್ಬಂದಿ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿ ಭಾಗವಹಿಸಿದ್ದರು.

- - - -22ಕೆಡಿವಿಜಿ38ಃ:

ದಾವಣಗೆರೆಯಲ್ಲಿ ಕರುಣಾ ಟ್ರಸ್ಟ್‌ನಿಂದ ಸಾಧಕರಿಗೆ ಡಾ. ಬಿ.ಸಿ. ರಾಯ್ ಸೇವಾ ಪ್ರಶಸ್ತಿ, ಮದರ್ ತೆರೆಸಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.