ಸಾಮಾಜಿಕವಾಗಿ ಮಹಿಳೆ ಪ್ರಗತಿಯಲ್ಲಿದ್ದಾಳೆ: ರಜನಿ ಪಾಟೀಲ

| Published : Mar 09 2024, 01:31 AM IST

ಸಾಮಾಜಿಕವಾಗಿ ಮಹಿಳೆ ಪ್ರಗತಿಯಲ್ಲಿದ್ದಾಳೆ: ರಜನಿ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕ ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಉತ್ತಮ ಆದಾಯ ಹೊಂದುವ ಮೂಲಕ ಮನೆಯ ಆರ್ಥಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಕುಟುಂಬದ ಏಳ್ಗೆಗಾಗಿ ಶ್ರಮಿಸುತ್ತಿರುವುದರಿಂದ ಸಾಮಾಜಿಕವಾಗಿ ಮಹಿಳೆ ಪ್ರಗತಿಯ ಹಾದಿಯಲ್ಲಿದ್ದಾಳೆ ಎಂದು ಗದಗ-ಬೆಟಗೇರಿ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ರಜನಿ ಪಾಟೀಲ ಹೇಳಿದರು.

ಗದಗ: ಆಧುನಿಕ ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಉತ್ತಮ ಆದಾಯ ಹೊಂದುವ ಮೂಲಕ ಮನೆಯ ಆರ್ಥಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಕುಟುಂಬದ ಏಳ್ಗೆಗಾಗಿ ಶ್ರಮಿಸುತ್ತಿರುವುದರಿಂದ ಸಾಮಾಜಿಕವಾಗಿ ಮಹಿಳೆ ಪ್ರಗತಿಯ ಹಾದಿಯಲ್ಲಿದ್ದಾಳೆ ಎಂದು ಗದಗ-ಬೆಟಗೇರಿ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ರಜನಿ ಪಾಟೀಲ ಹೇಳಿದರು.

ನಗರದ ಜಿಲ್ಲಾ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆಯಿಂದ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸನ್ಮಾನಗೊಂಡು ಅವರು ಮಾತನಾಡಿ, ಪ್ರತಿಯೊಬ್ಬ ಪ್ರತಿಭಾನ್ವಿತ ಪುರುಷನ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ ಎಂಬುದೊಂದು ನುಡಿ. ಆದರೆ ಇಂದು ಮಹಿಳೆಯ ಮೇಲೆ ನಿತ್ಯ ನಡೆಯುತ್ತಿರುವ ಶೋಷಣೆಗಳಿಗೆ ಕೊನೆ ಇಲ್ಲದಾಗುತ್ತಿದೆ ಎಂದರು.

ಕವಿತಾ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ತ್ರೀಯರನ್ನು ಶಕ್ತಿ ಸ್ವರೂಪಿಯಾಗಿ ಆರಾಧಿಸುವ ದೇಶ ನಮ್ಮದು. ಮೂರು ವಿಧಗಳಲ್ಲಿ ತಮ್ಮ ನಿಸ್ವಾರ್ಥ ಸೇವೆಯನ್ನು ಮಹಿಳೆಯರು ಸಲ್ಲಿಸುತ್ತಿದ್ದು ಕತೃತ್ವ, ನೇತೃತ್ವ, ತಾಯತ್ವ ಈ ಮೂರು ಜವಾಬ್ದಾರಿಯೊಂದಿಗೆ ಸ್ತ್ರೀಯರು ಸಮಾಜದಲ್ಲಿ ಸುಂದರಮಯವಾಗಿ ಬದುಕನ್ನು ರೂಪಿಸಿಕೊಂಡಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜ್ಯೋತಿ ಭರಮಗೌಡರ ಮಾತನಾಡಿ, ಸ್ತ್ರೀಯರು ಅಕ್ಷರಸ್ಥರಾದರೆ ಸುಸಜ್ಜಿತ ನಾಗರಿಕ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ ಎಂದರು.

ಈ ವೇಳೆ ಮಂಜುಳಾ ಹಲಗತ್ತಿ, ಮೀನಾಕ್ಷಿ ಕೊರವನವರ, ರೇಖಾ ರೊಟ್ಟಿ, ಅಶ್ವಿನಿ ಮಾದಗುಂಡಿ, ಅನುರಾಧಾ ಅಮಾತ್ಯೆಗೌಡರ, ಸುನಂದ ಡಿಂಪಲಿ, ಅನುರಾಧಾ ಬಸವಾ, ಸುಧಾ ಬಂಡಾ, ವಿನೂತಾ ಜಲಗೇರಿ, ಸಂಪದ ಶಿಶುನಾಳ, ಗಿರಿಜಾ ನಿಡಗುಂದಿ, ರೇಖಾ ಜಿಗಜಿನ್ನಿ, ವಂದನಾ ಪತ್ತಾರ, ಅಶ್ವಿನಿ ಪಾಟೀಲ, ಮಹಾನಂದಾ ಕಾತರಕಿ, ಸೀತಾ ಚಿಟಗುಪ್ಪಿ ಮುಂತಾದವರಿದ್ದರು. ಸುಮಾ ಪಾಟೀಲ, ಪ್ರಿಯಾಂಕ ಹಳ್ಳಿ ವಚನ ಪ್ರಾರ್ಥನೆಗೈದರು. ಹೇಮಾ ಪೊಂಗಾಲಿಯಾ ಸ್ವಾಗತಿಸಿದರು. ಸಾಗರಿಕ ಅಕ್ಕಿ ಪರಿಚಯಿಸಿದರು. ಸವಿತಾ ಸಿಂತ್ರಿ ನಿರೂಪಿಸಿದರು. ಶ್ವೇತಾ ಭಿಕ್ಷಾವತಿಮಠ ವಂದಿಸಿದರು.