ರಾಜ್ಯಮಟ್ಟಕ್ಕೆ ಸೋಹನ್ ಮೌರ್ಯ ಆಯ್ಕೆ

| Published : Nov 03 2025, 01:30 AM IST

ಸಾರಾಂಶ

ತಟ್ಟೆಕೆರೆ ಆದರ್ಶ ವಿದ್ಯಾಲಯದ ೧೦ನೇ ತರಗತಿ ವಿದ್ಯಾರ್ಥಿ ಸೋಹನ್ ಮೌರ್ಯ ಡಿ.ವಿ. ಅವರು ೧೭ರ ವಯೋಮಿತಿಯ ೪೫ ಕೇಜಿ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಾಸನದ ಹೊಯ್ಸಳ ನಗರದಲ್ಲಿರುವ ನಟರಾಜ ಫಿಟ್ನೆಸ್ ಮತ್ತು ಕರಾಟೆ ಸೆಂಟರ್‌ನಲ್ಲಿ ೧೪ರಿಂದ ೧೭ ವರ್ಷದ ವಯೋಮಿತಿಯ ಕರಾಟೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ೧೭ರ ವಯೋಮಿತಿಯ ೪೫ ಕೆಜಿ ವಿಭಾಗದಲ್ಲಿ ತಾಲೂಕಿನ ತಟ್ಟೆಕೆರೆ ಆದರ್ಶ ವಿದ್ಯಾಲಯದ ೧೦ನೇ ತರಗತಿ ವಿದ್ಯಾರ್ಥಿ ಸೋಹನ್ ಮೌರ್ಯ ಡಿವಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನ ತಟ್ಟೆಕೆರೆ ಆದರ್ಶ ವಿದ್ಯಾಲಯದ ೧೦ನೇ ತರಗತಿ ವಿದ್ಯಾರ್ಥಿ ಸೋಹನ್ ಮೌರ್ಯ ಡಿ.ವಿ. ಅವರು ೧೭ರ ವಯೋಮಿತಿಯ ೪೫ ಕೇಜಿ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ್, ಉಪ ನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಹಾಸನ ಮತ್ತು ಓಕಿನೋವಾ ಶೋರಿನ್‌ರೂ ಶೋರಿನ್ ಕೈ ಕರಾಟೆ-ಡು, ಜಪಾನ್ ಸಹಯೋಗದೊಂದಿಗೆ ೨೦೨೫-೨೬ನೇ ಸಾಲಿಗೆ ಜಿಲ್ಲಾಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟದ ಅಂಗವಾಗಿ ನಡೆದ ಹಾಸನದ ಹೊಯ್ಸಳ ನಗರದಲ್ಲಿರುವ ನಟರಾಜ ಫಿಟ್ನೆಸ್ ಮತ್ತು ಕರಾಟೆ ಸೆಂಟರ್‌ನಲ್ಲಿ ೧೪ರಿಂದ ೧೭ ವರ್ಷದ ವಯೋಮಿತಿಯ ಕರಾಟೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ೧೭ರ ವಯೋಮಿತಿಯ ೪೫ ಕೆಜಿ ವಿಭಾಗದಲ್ಲಿ ತಾಲೂಕಿನ ತಟ್ಟೆಕೆರೆ ಆದರ್ಶ ವಿದ್ಯಾಲಯದ ೧೦ನೇ ತರಗತಿ ವಿದ್ಯಾರ್ಥಿ ಸೋಹನ್ ಮೌರ್ಯ ಡಿವಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಸುಜಾತ ಅಲಿ, ಸ್ಕ್ವಾಯ್ ನ್ಯಾಷನಲ್ ಮಾರ್ಷಲ್ ಆರ್ಟ್ಸ್ ಶಾಲೆಯ ಕೋಚ್ ಅಬ್ದುಲ್ ಹೈ, ರೆಫರಿ ಹರ್ಷವರ್ಧನ್, ಸಂಘಸಂಸ್ಥೆಗಳು, ತಾಲೂಕು ಆಡಳಿತ, ಆದರ್ಶ ಶಾಲೆಯ ಶಿಕ್ಷಕರು, ಸಿಬ್ಬಂದಿ, ಮುಖ್ಯ ಶಿಕ್ಷಕ ಮೋಹನ್ ಕುಮಾರ್ ಅಭಿನಂದಿಸಿದ್ದಾರೆ.