ಕನ್ನಡಪ್ರಭ ವಾರ್ತೆ ಮಂಡ್ಯ

ಇತ್ತೀಚಿನ ವಿಜ್ಞಾನ-ತ್ರಂತ್ರಜ್ಞಾನ ಸಂಶೋಧನೆಯಲ್ಲಿ ಪರಿಸರ ಸ್ನೇಹಿ ಅಥವಾ ಮಣ್ಣಿನಲ್ಲಿ ಕರಗುವ ಬಯೋ ಪ್ಲಾಸ್ಟಿಕ್‌ನ್ನು ಸಂಶೋಧಿಸಲಾಗಿದೆ ಎಂದು ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ರಾಮಲಿಂಗಯ್ಯ ಹೇಳಿದರು.

ನಗರದಲ್ಲಿರುವ ಬಾಲ ಭವನದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ತಂತ್ರಜ್ಞಾನದ ಪರಿಚಯ-ಪವಾಡ ರಹಸ್ಯ ಬಯಲು ಮತ್ತು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣ ಪತ್ರ ಹಾಗೂ ಪದಕ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಾಮಾನ್ಯ ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗಲು ನೂರಾರು ವರ್ಷ ಬೇಕಾಗುತ್ತದೆ. ಆದರೆ, ಈಗ ವಿಜ್ಞಾನಿಗಳು ಸುಲಭವಾಗಿ ಕರಗುವ ಪರ್ಯಾಯಗಳನ್ನು ಕಂಡುಹಿಡಿದಿದ್ದಾರೆ. ಬಯೋಪ್ಲಾಸ್ಟಿಕ್‌ನ್ನು ಮೈಸೂರಿನ ಸಂಸ್ಥೆಯು ಮಣ್ಣಿನಲ್ಲಿ ಕರಗುವ ‘ಪರಿಸರ ಸ್ನೇಹಿ ಪ್ಲಾಸ್ಟಿಕ್ ಚೀಲಗಳನ್ನು’ ಅಭಿವೃದ್ಧಿಪಡಿಸಿದೆ, ಬಿದಿರಿನ ಪ್ಲಾಸ್ಟಿಕ್, ಬಿದಿರಿನ ಸೆಲ್ಯುಲೋಸ್ ಬಳಸಿ ಕೇವಲ ೫೦ ದಿನಗಳಲ್ಲಿ ಮಣ್ಣಿನಲ್ಲಿ ಕರಗುವ ಪ್ಲಾಸ್ಟಿಕ್‌ನ್ನು ಸಂಶೋಧಕರು ತಯಾರಿಸಿದ್ದಾರೆ ಎಂದರು.

ನ್ಯಾನೋ ಮತ್ತು ಎಐ ತಂತ್ರಜ್ಞಾನದಿಂದ ಸ್ಮಾರ್ಟ್ ವಿಂಗಡಣೆ ಮಾಡಲಾಗುತ್ತಿದೆ, ಕೃತಕ ಬುದ್ಧಿಮತ್ತೆ ಆಧಾರಿತ ರೋಬೋಟ್‌ಗಳು ವಿವಿಧ ರೀತಿಯ ಪ್ಲಾಸ್ಟಿಕ್‌ಗಳನ್ನು ನಿಖರವಾಗಿ ವಿಂಗಡಿಸಿ ಮರುಬಳಕೆಗೆ ಕಳುಹಿಸುತ್ತಿವೆ, ನ್ಯಾನೋ-ಕಾಂಪೋಸಿಟ್ಸ್: ಪ್ಲಾಸ್ಟಿಕ್ ಶಕ್ತಿ ಮತ್ತು ಬಾಳಿಕೆಯನ್ನು ಹೆಚ್ಚಿಸಲು ನ್ಯಾನೋ ಕಣಗಳನ್ನು ಸೇರಿಸಲಾಗುತ್ತಿದೆ, ಇದರಿಂದ ಕಡಿಮೆ ಪ್ಲಾಸ್ಟಿಕ್ ಬಳಸಿ ಬಲಿಷ್ಠ ವಸ್ತುಗಳನ್ನು ತಯಾರಿಸಬಹುದು ಎಂದರು.


ಕಾರ್ಯಕ್ರಮವನ್ನು ಜಿಲ್ಲಾ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಸಿ ಶಿವಲಿಂಗಯ್ಯ, ವಿಜ್ಞಾನ ವಿಷಯ ನಿವೃತ್ತ ತಜ್ಞ ಎಸ್ ಲೋಕೇಶ್, ಪರಿಷತ್ ಗೌರವಾಧ್ಯಕ್ಷ ಎಂ.ಸಿ.ಬಸವರಾಜು, ರಾಜ್ಯ ಸಮಿತಿ ಸದಸ್ಯೆ ಪುಷ್ಪಲತಾ, ಉಪಾಧ್ಯಕ್ಷೆ ವಸಂತ, ಕೌಶಲ್ಯ ಯುವತಿ ಮತ್ತು ಮಹಿಳಾ ಮಂಡಳಿ ಅಧ್ಯಕ್ಷ ವಿಜಯ, ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ವಿಜಯಕುಮಾರ್, ಕೆಂಪರಾಜು, ರುಚಿತಾ, ಎಂ.ಸಿ.ಲಂಕೇಶ್, ಕೆ.ಶೃತಿ, ಅನುಪಮಾ ಇತರರಿದ್ದರು.