ಪರಾರಿಯಾಗಿರುವವರ ಪೈಕಿ ಹೊಸೂರು ತಾಲೂಕಿನ ಚೂಡಪುರಂ ವಿಒಸಿ ನಗರದ ನಿವಾಸಿ ಶಿವಕುಮಾರ್ (23) ಎಂದು ತಿಳಿದು ಬಂದಿದ್ದು, ತಲೆಮರೆಸಿಕೊಂಡಿರುವವರಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ.

ಚಿಂತಾಮಣಿ: ಪಿಎಂ ಕುಸುಮ್-ಸಿ ಮತ್ತು ಸೋಲಾರ್ ಪ್ಲಾಂಟ್ ಕಾಮಗಾರಿಗೆ ಅಳವಡಿಸುವ ಕೇಬಲ್ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಟ್ಟಹಳ್ಳಿ ಪೊಲೀಸರು ಆರು ಮಂದಿ ಖದೀಮರ ಪೈಕಿ ಇಬ್ಬರನ್ನು ಬಂಧಿಸಿದ್ದು 3.70 ಲಕ್ಷ ರು. ಹಾಗೂ ಬೊಲೆರೋ ವಾಹನ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ತಮಿಳುನಾಡಿನ ಕೃಷ್ಣಾಗಿರಿ ಜಿಲ್ಲೆಯ ಮುಸ್ಟುಪಲ್ಲಿ ನಿವಾಸಿ ರಾಧಾಕೃಷ್ಣ (47), ಹೊಸೂರು ತಾಲೂಕಿನ ಚೂಡಪುರಂನ ವಿಒಸಿ ನಗರದ ವಾಸಿ ಚಾಲಕ ಜನಾರ್ದನ್ (32) ಬಂಧಿತರೆಂದು ತಿಳಿದುಬಂದಿದೆ.

ಪರಾರಿಯಾಗಿರುವವರ ಪೈಕಿ ಹೊಸೂರು ತಾಲೂಕಿನ ಚೂಡಪುರಂ ವಿಒಸಿ ನಗರದ ನಿವಾಸಿ ಶಿವಕುಮಾರ್ (23) ಎಂದು ತಿಳಿದು ಬಂದಿದ್ದು, ತಲೆಮರೆಸಿಕೊಂಡಿರುವವರಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ. ಕೆಂಚಾರ್ಲಹಳ್ಳಿ ಪೊಲೀಸ್ ಇನ್‌ಸ್ಪೆಕ್ಟರ್ ನಾರಾಯಣಸ್ವಾಮಿ, ಬಟ್ಲಹಳ್ಳಿ ಠಾಣೆ ಪಿಎಸ್‌ಐ ಶಿವಕುಮಾರ್, ಸಿಬ್ಬಂದಿ ವಿಶ್ವನಾಥ, ವೆಂಕಟೇಶ್, ಪ್ರವೀಣ್ ಕುಮಾರ್, ಸರ್ವೇಶ್, ನವೀನ್ ಚಿಕ್ಕಬಳ್ಳಾಪುರದ ಮುನಿಕೃಷ್ಣ, ರವೀಂದ್ರ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗಿವಹಿಸಿದ್ದರು.