ತೇರು ಎಳೆಯುವುದರಿಂದ ಭಾವೈಕ್ಯತೆಯ ಕೊಂಡಿ ಬೆಸುಗೆ

| Published : Jul 17 2024, 12:45 AM IST

ಸಾರಾಂಶ

ತೇರು ಎಳೆಯುವುದರಿಂದ ಮನಸ್ಸುಗಳು ಒಂದುಗೂಡಲಿದ್ದು, ಸಮಾನತೆಯ ಭಾವನೆ ಮೂಡಲಿದೆ, ಭಾವೈಕ್ಯತೆಯ ಕೊಂಡಿ ಗಟ್ಟಿಯಾಗಲಿದೆ ಎಂದು ತುಬಚಿಯ-ನಾಗೂರ ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಐಗಳಿ

ತೇರು ಎಳೆಯುವುದರಿಂದ ಮನಸ್ಸುಗಳು ಒಂದುಗೂಡಲಿದ್ದು, ಸಮಾನತೆಯ ಭಾವನೆ ಮೂಡಲಿದೆ, ಭಾವೈಕ್ಯತೆಯ ಕೊಂಡಿ ಗಟ್ಟಿಯಾಗಲಿದೆ ಎಂದು ತುಬಚಿಯ-ನಾಗೂರ ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.

ಇಲ್ಲಿಯ ಸಿಂಧೂರ ವಸತಿಯ ಅಪ್ಪಯ್ಯಸ್ವಾಮಿ ಜಾತ್ರೆಯ ನಿಮಿತ್ತ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಲಿಂ.ಅಪ್ಪಯ್ಯ ಸ್ವಾಮಿಗಳು ಪವಾಡ ಪುರುಷರು, ಮಹಾ ತಪಸ್ವಿಗಳು ಆಗಿದ್ದರು. ನಾಡಿನಲ್ಲಿ ಅನೇಕ ಪವಾಡ ಮಾಡಿದ್ದಾರೆ. ಉಗಾದಿ ಹಬ್ಬದ ದಿನ ಒಂದೇ ಸಮಯದಲ್ಲಿ ಐಗಳಿಯಲ್ಲಿ ಮತ್ತು ಶ್ರೀಶೈಲದ ಮಲ್ಲಿಕಾರ್ಜುನ ದೇವಾಲಯದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಇಂತಹ ಅನೇಕ ಪವಾಡ ಮಾಡಿದ್ದಾರೆ. ಕರ್ನಾಟಕ, ಮಹಾರಾಷ್ಟ್ರದಲ್ಲಿ ಅನೇಕ ದೇವಾಲಯಗಳು ನಿರ್ಮಾಣವಾಗಿವೆ. ಪೂಜ್ಯರಲ್ಲಿ ಒಂದು ಶಕ್ತಿ ಇತ್ತು ಎಂದರು.

ತುಂಗಳದ ಅನುಸೂಯಾ ದೇವಿ, ತೆಲಸಂಗದ ವಿರೇಶ್ವರ ದೇವರು, ಕನ್ನಾಳದ ಬಸವಲಿಂಗ ಸ್ವಾಮೀಜಿ, ಟ್ರಸ್ಟ್ ಕಮಿಟಿ ಅಧ್ಯಕ್ಷ ನರಸಪ್ಪ ಸಿಂಧೂರ, ಉಪಾಧ್ಯಕ್ಷ ಮಹಾದೇವ ಹಾಲಳ್ಳಿ, ಸಿ.ಎಸ್. ನೇಮಗೌಡ, ಅಪ್ಪಾಸಾಬ ಪಾಟೀಲ, ಗ್ರಾಪಂ ಅಧ್ಯಕ್ಷೆ ಶಕುಂತಲಾ ಪಾಟೀಲ, ಸಿದಗೌಡ ಬಳ್ಳೋಳ್ಳಿ, ನಿಂಗನಗೌಡ ಪಾಟೀಲ, ಶಿವಾನಂದ ಸಿಂಧೂರ, ಶಿವನಿಂಗ ಅರಟಾಳ, ಚನ್ನಪ್ಪ ಸಿಂಧೂರ, ಎಂ.ಬಿ. ನೇಮಗೌಡ ಸೇರಿದಂತೆ ಅನೇಕರು ಇದ್ದರು.

ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವದಲ್ಲಿ ವಿವಿಧ ವಾಧ್ಯಗಳು, ಆರತಿ, ಕುಂಭ, ನಂದಿಕೋಲು, ಉತ್ಸವ ಸಡಗರದಿಂದ ಜರುಗಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿ ಬೆಂಡು ಭತ್ತಾಸು, ಖಾರಿಕ್, ಕೊಬ್ಬರಿ, ಬಾಳೆಹಣ್ಣು ಹಾರಿಸಿ ಹರಿಕೆ ತಿರಿಸಿದರು. ಬಳಿಕ ತೆಂಗಿನಕಾಯಿ ಲಿಲಾವು ಜರುಗಿತು.ಕೇದಾರಿ ಬಿರಾದಾರ ಮಲಗೌಡ ಪಾಟೀಲ, ಜಗದೀಶ ಕೊರಬು ಸಂಚಾಲಕರಾಗಿ ಸೇವೆ ಸಲ್ಲಿಸಿದರು.