ಸಾರಾಂಶ
ಗದಗ: ಜಿಲ್ಲಾ ಮಾಜಿ ಸೈನಿಕರ ಸಂಘವು ಗದುಗಿನಲ್ಲಿ ನಿರ್ಮಿಸಿರುವ ಸೈನಿಕ ಸಮುದಾಯ ಭವನ ಹಾಗೂ ತರಬೇತಿ ಕೇಂದ್ರವು ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದು ಮಲ್ಲಸಮುದ್ರದ ಓಂಕಾರೇಶ್ವರ ಹಿರೇಮಠದ ಫಕ್ಕೀರೇಶ್ವರ ಪಟ್ಟಾಧ್ಯಕ್ಷರು ತಿಳಿಸಿದರು.ಸೈನಿಕ ಸಮುದಾಯ ಭವನ ಹಾಗೂ ತರಬೇತಿ ಕೇಂದ್ರದಲ್ಲಿ ಏರ್ಪಡಿಸಿದ್ದ ದಾನಿಗಳಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ದೇಶದ ರಕ್ಷಣೆ ಮತ್ತು ಹಿತವನ್ನು ಕಾಪಾಡುವಲ್ಲಿ ಸೈಕರು ಹಗಲಿರುಳು ತಮ್ಮ ಜೀವದ ಹಂಗು ತೊರೆದು ದಕ್ಷತೆಯಿಂದ ಕಾರ್ಯ ಮಾಡುತ್ತಿದ್ದಾರೆ. ಅವರಿಗೆ ನೈತಿಕ ಬಲ ಆತ್ಮಸ್ಥೈರ್ಯವನ್ನು ತುಂಬುವ ಮೂಲಕ ಸದಾಕಾಲ ಸೈನಿಕರ ಶ್ರೇಯೋಭಿವೃದ್ಧಿಯನ್ನು ಬಯಸಬೇಕು ಎಂದರು.ಕಟ್ಟಡವು ಸರ್ವಾಂಗ ಸುಂದರವಾಗಿ ನಿರ್ಮಾಣಗೊಂಡಿದ್ದು, ಇದಕ್ಕೆಲ್ಲ ದೇಣಿಗೆ ನೀಡಿದ ಸಮಸ್ತ ದಾನಿಗಳು ಅಭಿನಂದನಾರ್ಹರು. ಬರಲಿರುವ ದಿನಗಳಲ್ಲಿ ಮೊದಲ ಅಂತಸ್ತು ಕಟ್ಟಡವು ಸಹ ದಾನಿಗಳ ಸಹಕಾರದೊಂದಿಗೆ ಶೀಘ್ರದಲ್ಲಿ ನಿರ್ಮಾಣಗೊಳ್ಳಲಿ ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಾಜಿ ಸೈನಿಕರ ಸಂಘವ ಅಧ್ಯಕ್ಷ ಜಿ.ಬಿ. ಮಾಲಗಿತ್ತಿಮಠ ಮಾತನಾಡಿ, ಈ ಕಟ್ಟಡ ಸುಂದರವಾಗಿ ರೂಪುಗೊಳ್ಳುವಲ್ಲಿ ಸಂಘದ ಸರ್ವ ಸದಸ್ಯರ ದೇಣಿಗೆ, ಸಹಾಯ ಸಹಕಾರ ತುಂಬಾ ದೊಡ್ಡದು. ಇದೆಲ್ಲವೂ ಒಗ್ಗಟ್ಟಿನ ಪ್ರತಿಫಲ. ಇದಕ್ಕೆ ಸರ್ಕಾರ ಮತ್ತು ಜನಪ್ರತಿನಿಧಿಗಳ ಸಹಕಾರವನ್ನು ಮರೆಯುವಂತಿಲ್ಲ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ₹40 ಲಕ್ಷ, ಸಂಸದ ಬಸವರಾಜ ಬೊಮ್ಮಾಯಿ ₹5 ಲಕ್ಷ, ವಿಧಾನಪರಿಷತ್ ಸದಸ್ಯ ₹4 ಲಕ್ಷ, ಸಲೀಂ ಅಹ್ಮದ್ ₹2 ಲಕ್ಷ ಹೀಗೆ ಒಟ್ಟು ₹51 ಲಕ್ಷಗಳಷ್ಟು ಹಣ ಜನಪ್ರತಿನಿಧಿಗಳು ಸರ್ಕಾರ ಅನುದಾನದಿಂದ ಬಿಡುಗಡೆಗೊಳಿಸಿ ಮಾರ್ಗದರ್ಶನ ನೀಡಿದ್ದರ ಪರಿಣಾಮವಾಗಿ ಈ ಕಾರ್ಯ ಸಾಕಾರಗೊಳ್ಳಲು ಕಾರಣವಾಯಿತು. ಧರ್ಮಸ್ಥಳದ ಧರ್ಮದರ್ಶಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಸಹ ₹1.50 ಲಕ್ಷ ನೀಡಿದ್ದಾರೆ ಎಂದರು. ಈ ಕಟ್ಟಡದಲ್ಲಿ ಸೈನ್ಯಕ್ಕೆ ಸೇರಲಿಚ್ಛಿಸುವ ಯುವ ಜನಾಂಗಕ್ಕೆ ನಿವೃತ್ತ ಸೈನ್ಯಾಧಿಕಾರಿಗಳಿಂದ, ಹಿರಿಯ ಮಾಜಿ ಸೈನಿಕರಿಂದ ಮತ್ತು ವಿಷಯತಜ್ಞರಿಂದ ತರಬೇತಿ ನೀಡುವ ಸದುದ್ದೇಶವನ್ನು ಹೊಂದಲಾಗಿದೆ. 2026- 27ನೇ ಸಾಲಿನಲ್ಲಿ ಮೇಲಿನ ಕಟ್ಟಡವನ್ನು ಪೂರ್ಣಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಮಾಲಗಿತ್ತಿಮಠ ವಿವರಿಸಿದರು.ಎಸ್.ಎಫ್. ಹೊನ್ನಪ್ಪನವರ, ಸಂಘಟನಾ ಕಾರ್ಯದರ್ಶಿ ಈರಣ್ಣ ತಳ್ಳಿಕೇರಿ, ಸಹ ಕಾರ್ಯದರ್ಶಿ ಮಹೇಶ ಆಶಿ, ಮಹಮ್ಮದಹನೀಫ್ ಶೇಖಬಾಯಿ, ನಿರ್ದೇಶಕರಾದ ಬಿ.ವಿ. ಅಬ್ಬಿಗೇರಿ, ಎಚ್.ಬಿ. ಜಂಗಣ್ಣವರ, ಲಲಿತಾ ಕುರಹಟ್ಟಿ, ಶರಣಪ್ಪ ಸರ್ವಿ, ವೀರಪ್ಪ ಬಿಂಗಿ, ಶಿವಲೀಲಾ ಬಾವಿಕಟ್ಟಿ, ಕೆ.ಎಸ್. ಹಿರೇಮಠ, ಎ.ಎಂ. ತಹಶೀಲ್ದಾರ, ರಘುನಾಥರೆಡ್ಡಿ ಶೆಟ್ರಡ್ಡಿ, ಬಿ.ಬಿ. ಅರವಟಗಿಮಠ, ಚನ್ನಯ್ಯ ಬಳಗಾನೂರಮಠ, ಎಸ್.ಎಸ್. ವಡ್ಡಿನ, ಬಸನಗೌಡ ಪಾಟೀಲ, ಎಸ್.ಎಂ. ಮಡಿವಾಳರ, ಮೀನಾಕ್ಷಿ ಬದಿ, ಶಂಕರಗೌಡ ಪಾಟೀಲ, ದ್ರಾಕ್ಷಾಯಣಿ ಲಕ್ಕುಂಡಿ ಮುಂತಾದವರಿದ್ದರು.
;Resize=(128,128))
;Resize=(128,128))
;Resize=(128,128))