ದುಕಾನವಾಡಿ: ಕುಡಿಯುವ ನೀರು ಸಮಸ್ಯೆಗೆ ಪರಿಹಾರ

| Published : Jan 13 2024, 01:31 AM IST

ಸಾರಾಂಶ

ಯಾದಗಿರಿ ನಗರದ ವಾರ್ಡ್ ಸಂಖ್ಯೆ 20 ಮತ್ತು 21 ರಲ್ಲಿ ಬರುವ ದುಕಾನವಾಡಿಗೆ ನಗರಸಭೆ ಎಇಇ ರಜನಿಕಾಂತ್ ಹಾಗೂ ಅವರ ತಂಡವು ಭೇಟಿ ನೀಡಿ ಕುಡಿಯುವ ಕುಡಿವ ನೀರಿನ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ನಗರದ ವಾರ್ಡ್ ಸಂಖ್ಯೆ 20 ಮತ್ತು 21ರಲ್ಲಿ ಬರುವ ದುಕಾನವಾಡಿ ನಿವಾಸಿಗಳು ಕುಡಿಯುವ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ಪ್ರತಿಭಟನೆ ನಡೆಸಿದ 24 ಗಂಟೆ ಒಳಗಡೆ ನಗರಸಭೆ ಸ್ಪಂದಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ತಿಳಿಸಿದ್ದಾರೆ.

ಶುಕ್ರವಾರ ನಗರಸಭೆ ಎಂಜಿನಿಯರ್‌ ರಜನಿಕಾಂತ್ ಹಾಗೂ ಅವರ ತಂಡವು ಸ್ಥಳಕ್ಕೆ ಆಗಮಿಸಿ ಕುಡಿಯುವ ಕುಡಿವ ನೀರಿನ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿತು. ಅಲ್ಲಿದ್ದ ಕೊಳವೆ ಬಾವಿಗಳನ್ನು ಫ್ಲಶಿಂಗ್ ಮಾಡಲು ಪ್ರಾರಂಭಿಸಿದರು. ಇದಕ್ಕೂ ಸಮಸ್ಯೆ ಪರಿಹರಿಸದಿದ್ದರೆ ಹೊಸ ಕೊಳವೆ ಬಾವಿ ಕೊರೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ದುಕಾನವಾಡಿ ನಗರವು ನಗರಸಭೆ ಮುಂಭಾಗದಲ್ಲಿಯೇ ಇದೆ. ಬಡವರು, ಕೂಲಿಕಾರ್ಮಿಕರು ಇದ್ದು, ಶಾಲೆಗೆ ಮಕ್ಕಳನ್ನು ಕಳುಹಿಸಿ, ತಾವು ಕೂಲಿಗೆ ಹೋಗಲು ಪರದಾಡುವಂತಾಗಿದೆ. ಸಮಸ್ಯೆ ಪರಿಹಾರಕ್ಕೆ ನಗರಸಭೆ ಮುಂದಾಗಿರುವುದು ಶ್ಲಾಘನೀಯವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ತಿಳಿಸಿದ್ದಾರೆ.

ನೀರು ಸರಬರಾಜು ಎಇಇ ಅಶೋಕ, ನಿವಾಸಿಗಳಾದ ರಫೀಕ್ ಪಟೇಲ್, ಆಂಜನೇಯ, ಬಾಬ ಖಾನ್, ಹಾಸಿಮ್ ಬೇಗಂ, ಸಮೀನಾ ಬೇಗಂ, ಶರೀಫ್, ಅರಿಫ್ ಬೇಗಂ, ರಹೆಮತ್ ಬಿ., ಶರತ್, ಕೌಸರ್ ಬೇಗಂ ನೂರ್ ಅಹ್ಮದ್, ಫಯಾಜ್, ನೀರು ಸರಬರಾಜು ಇಲಾಖೆ ಅಧಿಕಾರಿಗಳು ಇದ್ದರು.