ಭಾರತೀಯ ಧರ್ಮದರ್ಶನದಿಂದ ಜಗತ್ತಿನ ಸಮಸ್ಯೆಗೆ ಪರಿಹಾರ: ಭಟ್ಟಾರಕ ಶ್ರೀ

| Published : Feb 02 2025, 11:46 PM IST

ಭಾರತೀಯ ಧರ್ಮದರ್ಶನದಿಂದ ಜಗತ್ತಿನ ಸಮಸ್ಯೆಗೆ ಪರಿಹಾರ: ಭಟ್ಟಾರಕ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ವಾರಣಾಸಿ ನಮೋ ಘಾಟ್‌ನಲ್ಲಿ ಭಾರತೀಯ ಧರ್ಮ ದರ್ಶನಗಳ ಎರಡು ದಿನಗಳ ಸಮ್ಮೇಳನವನ್ನು ಮೂಡುಬಿದಿರೆ ಶ್ರೀ ಜೈನ ಮಠದ ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ವಾರಣಾಸಿ ನಮೋ ಘಾಟ್‌ನಲ್ಲಿ ಭಾರತೀಯ ಧರ್ಮ ದರ್ಶನಗಳ ಎರಡು ದಿನಗಳ ಸಮ್ಮೇಳನವನ್ನು ಮೂಡುಬಿದಿರೆ ಶ್ರೀ ಜೈನ ಮಠದ ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಭಾರತೀಯ ಧರ್ಮ ದರ್ಶನ ಜಗತ್ತಿನ ಸಮಸ್ಯೆಗೆ ಪರಿಹಾರ ನೀಡುವುದರೊಂದಿಗೆ ಪರಿಸರ, ಜೀವ, ಆಜೀವ ಜಗತ್ತಿನಲ್ಲಿ ಮಾನವ ಜೀವನದ ಕಲ್ಯಾಣ ಹೇಗೆ ಸಾಧ್ಯ ಎಂದು ನಿರೂಪಿಸಿ, ಆಧ್ಯಾತ್ಮಿಕತೆ ಅಳವಡಿಸಿ ನೆಮ್ಮದಿಯ ಜೀವನ, ಸುಖ, ಶಾಂತಿಯ ಉಪಾಯ ತಿಳಿಸಿದೆ ಎಂದರು.ಆತ್ಮನ್ ಸಂಘಟನೆ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಅಂತಾರಾಷ್ಟ್ರೀಯ ಆಧ್ಯಾತ್ಮ ಸಮ್ಮೇಳನ ಆಯೋಜಿಸಿದ್ದು, ಇದರಲ್ಲಿ ಸ್ವಾಮಿ ಚಿನ್ಮಯ ಮಿಷನ್‌ನ ಅವ್ಯಾನಂದ, ಹುಸೇನ್ ದೀದಿ, ಡಾ.ಆದಿತ್ಯ, ಬುದ್ಧ ಧರ್ಮದ ಯೋಗಿ ಮಿಂಗ್ಯೂರ್ ರಿನ್ ಪೂಚೆ, ಇಸ್ಕಾನ್ ರಿಷಿ ಕುಮಾರ್ ಪ್ರಭು, ಎಂ.ಗುರು, ರಬ್ಬೀ ಎಜೆ ಕುಲೆ, ಗೀತಾ ಚಂದ್ರನ್ ಮೊದಲಾದವರು ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.