ತರಕಾರಿ ಮಾರುಕಟ್ಟೆ ವ್ಯಾಪಾರಸ್ಥರ ಸಮಸ್ಯೆ ಬಗೆಹರಿಸಿ

| Published : Jul 13 2024, 01:31 AM IST

ತರಕಾರಿ ಮಾರುಕಟ್ಟೆ ವ್ಯಾಪಾರಸ್ಥರ ಸಮಸ್ಯೆ ಬಗೆಹರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ವಿನೋಬನಗರ 100 ಅಡಿ ರಸ್ತೆ ಶಿವಾಲಯ ದೇವಸ್ಥಾನದ ಪಕ್ಕದಲ್ಲಿರುವ ಹೂವು, ಹಣ್ಣು, ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಎದುರಿಸುತ್ತಿರುವ ಸಮಸ್ಯೆ ಸರಿಪಡಿಸುವಂತೆ ಒತ್ತಾಯಿಸಿ ಜೆಡಿಎಸ್ ಜಿಲ್ಲಾ ಘಟಕ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಿನೋಬನಗರ 100 ಅಡಿ ರಸ್ತೆ ಶಿವಾಲಯ ದೇವಸ್ಥಾನದ ಪಕ್ಕದಲ್ಲಿರುವ ಹೂವು, ಹಣ್ಣು, ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಎದುರಿಸುತ್ತಿರುವ ಸಮಸ್ಯೆ ಸರಿಪಡಿಸುವಂತೆ ಒತ್ತಾಯಿಸಿ ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ವಿನೋಬನಗರ 100 ಅಡಿ ರಸ್ತೆ ಶಿವಾಲಯ ದೇವಸ್ಥಾನದ ಪಕ್ಕದಲ್ಲಿ ಶಿವಮೊಗ್ಗ ಮಹಾನಗರಪಾಲಿಕೆ ವತಿಯಿಂದ ನಿರ್ಮಾಣ ಮಾಡಲಾಗಿರುವ ಹೂವು, ಹಣ್ಣು, ತರಕಾರಿ ಮಾರುಕಟ್ಟೆ ನಗರದ ಲಕ್ಷ್ಮಿ ಟಾಕೀಸ್ ವೃತ್ತದಿಂದ ವಿನೋಬನಗರ ಪೊಲೀಸ್ ಚೌಕಿ ವೃತ್ತ ಸೇರಿ ಆಲ್ಕೋಳ ವೃತ್ತದವರೆಗೂ 100 ಅಡಿ ರಸ್ತೆ ಅಕ್ಕಪ-ಪಕ್ಕದಲ್ಲಿ ಹೂವು ಹಣ್ಣು ತರಕಾರಿ ಮಾರಾಟ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಸ್ಥರನ್ನು ಸ್ಥಳಾಂತರಿಸಿ ಅವರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಈ ಹಿಂದೆ ನಿರ್ಮಾಣ ಮಾಡಲಾಗಿತ್ತು. ಅದರಂತೆ ಕೆಲ ದಿನಗಳ ಹಿಂದೆ ಸುಮಾರು 72 ಫಲಾನುಭವಿ ಗುರುತಿಸಿ ಮಳಿಗೆಗಳನ್ನು ವಿತರಿಸಲಾಗಿತ್ತು. ಆದರೆ ಸದರಿ ವ್ಯಾಪಾರಸ್ಥರು ತಮಗೆ ವಿತರಿಸಲಾಗಿರುವ ಮಳಿಗೆಗಳಲ್ಲಿ ವ್ಯಾಪಾರ ನಡೆಸಲು ಮಾರುಕಟ್ಟೆ ಪ್ರಾಂಗಳದಲ್ಲಿ ಅನಾನುಕೂಲಗಳಿರುವ ಕಾರಣ ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ಮಾರುಕಟ್ಟೆ ಮುಂಭಾಗ ಸರಿಯಾದ ಬೆಳಕಿನ ವ್ಯವಸ್ಥೆ ಹಾಗೂ ಪ್ರವೇಶದ್ವಾರ ಚಿಕ್ಕದಿರುವ ಕಾರಣ ಗ್ರಾಹಕರು ಒಳಬಂದು ವ್ಯವಹರಿಸಲು ಹಿಂದೇಟು ಹಾಕುತ್ತಿದ್ದಾರೆ. ಆದಕಾರಣ ಮಾರುಕಟ್ಟೆಯಲ್ಲಿನ ವ್ಯಾಪಾರಸ್ಥರು ಪುನಃ ಹೊರ ಬಂದು ರಸ್ತೆ ಬದಿ ಕುಳಿತು ವ್ಯಾಪಾರನಡೆಸುವಂತಾಗಿದೆ. ಸದರಿ ಮಾರುಕಟ್ಟೆಯಲ್ಲಿನ ಪ್ರತಿಕೂಲ ವಾತಾವರಣದಿಂದಾಗಿ ವ್ಯಾಪಾರಸ್ಥರು ನಿತ್ಯ ನಷ್ಟ ಅನುಭವಿಸಿ, ಮಾರುಕಟ್ಟೆ ನಿರ್ಮಿಸಿದ ಮೂಲ ಉದ್ದೇಶಕ್ಕೆ ದಕ್ಕೆಯಾಗಿದೆ ಎಂದು ಆರೋಪಿಸಿದರು.

ಸರ್ಕಾರದ ಹಣದಲ್ಲಿ ನಿರ್ಮಾಣ ಮಾಡಲಾಗಿರುವ ಈ ಮಾರುಕಟ್ಟೆ ಪ್ರಯೋಜನವು ವ್ಯಾಪಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಆಗುತ್ತಿಲ್ಲ. ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದವರಿಗೆ ಈ ಹೊಸ ಮಾರುಕಟ್ಟೆ ಕಲ್ಪಿಸಿಯೂ ಸಹ ಅದು ಅವರಿಗೆ ಉಪಯೋಗವಾಗುತ್ತಿಲ್ಲ ಎಂದು ದೂರಿದರು.

ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್, ಉಪಾಧ್ಯಕ್ಷ ದಯಾನಂದ್ ಸಾಲಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಯ್ಯ, ಜಿಲ್ಲಾ ವಕ್ತಾರ ನರಸಿಂಹ ಗಂಧದಮನೆ, ನಗರ ಯುವ ಜೆಡಿಎಸ್ ಅಧ್ಯಕ್ಷ ಸಂಜಯ್ ಕಶ್ಯಪ್, ಪ್ರಮುಖ ನಿಹಾಲ್, ಗೋಪಿ, ವಿನಯ್, ಲೋಹಿತ್, ಶ್ಯಾಮ್, ಸುರೇಶ ಉಪಸ್ಥಿತರಿದ್ದರು.