ಸಾರಾಂಶ
ಮಸ್ಕಿಯ ಕುಡಿಯುವ ನೀರಿನ ಕೆರೆಗೆ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಭೇಟಿ ನೀಡಿದರು.
ಮಸ್ಕಿ ಕುಡಿವ ನೀರಿನ ಕೆರೆಗೆ ಮಾಜಿ ಶಾಸಕ ಪ್ರತಾಪ್ ಗೌಡ ಭೇಟಿ
ಕನ್ನಡಪ್ರಭ ವಾರ್ತೆ ಮಸ್ಕಿಕುಡಿವ ನೀರಿನ ಕೆರೆಗಳಲ್ಲಿ ನೀರು ಖಾಲಿಯಾದ ಪರಿಣಾಮ ಪಟ್ಟಣದಲ್ಲಿ ನೀರಿಗಾಗಿ ಜನರು ಸಮಸ್ಯೆ ಎದುರಿಸುವಂತಹ ಪರಿಸ್ಥಿತಿ ಉಂಟಾಗಿತ್ತು. ಆದ್ದರಿಂದ ಈಗ ಎಡನಾಲೆಯಿಂದ ಕಾಲುವೆಗೆ ನೀರು ಬಿಟ್ಟ ಹಿನ್ನೆಲೆ ಅಧಿಕಾರಿಗಳು ಕೆರೆಗಳಿಗೆ ನೀರನ್ನು ತುಂಬಿಸಿಕೊಳ್ಳುತ್ತಿದ್ದು, ಜನರಿಗೆ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ಮಾಜಿ ಶಾಸಕ ಪ್ರತಾಪ್ ಗೌಡ ತಿಳಿಸಿದರು.
ಪಟ್ಟಣದ ತುಂಗಭದ್ರಾ ಎಡನಾಲೆಯ ಹತ್ತಿರವಿರುವ ಕುಡಿಯುವ ನೀರಿನ ಕೆರೆಗೆ ಪುರಸಭೆ ಸದಸ್ಯರೊಂದಿಗೆ ಭೇಟಿ ನೀಡಿ ಮಾತನಾಡಿದರು.
ಸಿಎಂ ರಾಜೀನಾಮೆ ನೀಡಲಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಕೇವಲ ಸಚಿವರ ರಾಜೀನಾಮೆ ಪಡೆದರೆ ಸಾಲದು ಈ ಭ್ರಷ್ಟಾಚಾರದ ನೇರ ಹೊಣೆಯನ್ನು ಸಿಎಂ ಸಿದ್ದರಾಮಯ್ಯ ಅವರು ಹೊತ್ತುಕೊಂಡು ತಕ್ಷಣ ತಮ್ಮ ಪದವಿಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.ಕಾಂಗ್ರೆಸ್ ಸರ್ಕಾರ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರ ಮೇಲೆ ಬರೆ ಎಳೆದಿದ್ದು, ಕೂಡಲೇ ಬೆಲೆ ಇಳಿಕೆಗೆ ಕ್ರಮ ವಹಿಸದೇ ಇದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಶಾಂಪ್ರಕಾಶ ಪುಣ್ಯತಿಥಿ: ಮಸ್ಕಿಯ ಬಿಜೆಪಿ ಕಚೇರಿಯಲ್ಲಿ ಭಾರತೀಯ ಜನ ಸಂಘ ಸಂಸ್ಥಾಪಕ ಹಾಗೂ ಬಿಜೆಪಿ ಪಕ್ಷದ ಹಿರಿಯ ಶಾಂಪ್ರಕಾಶ ಅವರ ಪುಣ್ಯತಿಥಿ ಅಂಗವಾಗಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಸಿಗಳನ್ನು ನೆಟ್ಟರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ವಿವಿಧ ಮಂಡಲಗಳ ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಇದ್ದರು.