ಇಲ್ಲಿನ ಮೋಟಾರು ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಆಯುಧ ಪೂಜಾ ಕಾರ್ಯಕ್ರಮದ ಪ್ರಯುಕ್ತ ಸಂಘದ ಸದಸ್ಯರಿಗೆ ವಿವಿಧ ಕ್ರೀಡಾ ಸ್ಪರ್ಧಾ ಕಾರ್ಯಕ್ರಮ ಇತ್ತೀಚೆಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು.

ಸೋಮವಾರಪೇಟೆ: ಇಲ್ಲಿನ ಮೋಟಾರು ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಆಯುಧ ಪೂಜಾ ಕಾರ್ಯಕ್ರಮದ ಪ್ರಯುಕ್ತ ಸಂಘದ ಸದಸ್ಯರಿಗೆ ವಿವಿಧ ಕ್ರೀಡಾ ಸ್ಪರ್ಧಾ ಕಾರ್ಯಕ್ರಮ ಇತ್ತೀಚೆಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಚೌಡ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್‌ ತಿಮ್ಮಯ್ಯ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ವಹಿಸಿದ್ದರು. ಚೌಡ್ಲು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ನತೀಶ್ ಮಂದಣ್ಣ, ಸಂಘದ ಉಪಾಧ್ಯಕ್ಷ ಬಿ.ಎನ್. ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಣಿ ಕುಶಾಲಪ್ಪ, ಖಜಾಂಚಿ ಡ್ಯಾನಿ ಡೋಮಿನಿಕ್, ಸಹಕಾರ್ಯದರ್ಶಿ ಎಂ.ಎಂ. ಕಿರಣ್ ಹಾಗೂ ಎಸ್.ಎಂ. ಕೃಷ್ಣ ಇದ್ದರು.

ಕ್ರೀಡಾ ಸ್ಪರ್ಧೆಯ ಕಬಡ್ಡಿ ಪಂದ್ಯದಲ್ಲಿ ಮೊದಲನೇ ಸ್ಥಾನವನ್ನು ಕೆ.ಎನ್. ಶರತ್ ಮತ್ತು ತಂಡ ಪಡೆಯಿತು. ದ್ವಿತೀಯ ಸ್ಥಾನವನ್ನು ಎ.ಸಿ. ವಿನಯ್ ಮತ್ತು ತಂಡ ಹಾಗೂ ತೃತೀಯ ಸ್ಥಾನವನ್ನು ಸತೀಶ್ ಮತ್ತು ತಂಡ ಪಡೆಯಿತು. ಹಗ್ಗ ಜಗ್ಗಾಟದಲ್ಲಿ ಪ್ರಥಮ ಪ್ರಸನ್ನ ಮತ್ತು ತಂಡ, ದ್ವಿತೀಯ ಕೆ.ಎನ್. ಹರೀಶ್ ಮತ್ತು ತಂಡ ಹಾಗೂ ತೃತೀಯ ಮಹೇಶ್ ಮತ್ತು ತಂಡ ಪಡೆಯಿತು. ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ಸಿ.ಎಂ. ಶಿವಣ್ಣ ಪ್ರಥಮ, ಯು.ಎಂ. ಸುಕಾಂತ್ ದ್ವಿತೀಯ ಹಾಗೂ ಎಸ್.ಬಿ. ರಮೇಶ್ ತೃತೀಯ ಸ್ಥಾನ ಗಳಿಸಿದರು. ಬಾಂಬ್ ಇಂದ ಸಿಟಿ ಸ್ಪರ್ಧೆಯಲ್ಲಿ ಸಿ.ಎಂ. ಶಿವಣ್ಣ ಪ್ರಥಮ, ಯು.ಟಿ. ಚಂದ್ರಶೇಖರ್ ದ್ವಿತೀಯ ಹಾಗೂ ಎಸ್.ಬಿ. ರಮೇಶ್ ತೃತೀಯ ಸ್ಥಾನ ಗಳಿಸಿದರು.

100 ಮೀಟರ್ ಓಟದ ಸ್ಪರ್ಧೆಯಲ್ಲಿ ಯು.ಎಂ. ಸುಕಾಂತ್ ಪ್ರಥಮ, ಎ.ಕೆ. ಪ್ರಕಾಶ್ ದ್ವಿತೀಯ, ಹಾಗೂ ಬಿ.ಜಿ. ಕೃಷ್ಣಪ್ಪ ತೃತೀಯ ಸ್ಥಾನ ಪಡೆದರು. 200 ಮೀಟರ್ ಓಟದ ಸ್ಪರ್ಧೆಯಲ್ಲಿ ಕೆ.ಎನ್. ಶರತ್ ಪ್ರಥಮ, ಎಚ್.ಪಿ. ದುಶಾಂತ್ ದ್ವಿತೀಯ ಹಾಗೂ ಕೆ.ಎ. ಮಿಥುನ್ ತೃತೀಯ ಸ್ಥಾನ ಪಡೆದರು.

ವಿಜೇತರಿಗೆ ಆಯುಧಪೂಜಾ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.