ಇಲ್ಲಿನ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಆಯೋಜಿಸಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ವೈದ್ಯರನ್ನು ಸನ್ಮಾನಿಸಲಾಯಿತು.

ಸೋಮವಾರಪೇಟೆ: ಇಲ್ಲಿನ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಆಯೋಜಿಸಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ವೈದ್ಯರನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿದ ತಾಲೂಕು ವೈದ್ಯಧಿಕಾರಿ ಜಮೀರ್ ಮಾತನಾಡಿ, ಸ್ಥಳೀಯ ಆಸ್ಪತ್ರೆಯಲ್ಲಿ ಕೆಲಸ ಮಾಡಲು ತುಂಬಾ ಖುಷಿ ತಂದುಕೊಟ್ಟಿದೆ, ಸಾರ್ವಜನಿಕರು ನಮ್ಮೊಂದಿಗೆ ಸೌಜನ್ಯದಿಂದ ವರ್ತಿಸಿ ಸಹಕರಿಸುತ್ತಾರೆ ಎಂದರು.

ಜಿಲ್ಲಾ ಆರೋಗ್ಯ ಅಧಿಕಾರಿ ಸತೀಶ್ ಮಾತನಾಡಿ ಕೊಡಗು ಜಿಲ್ಲೆಗೆ ವೈದ್ಯರು ಬರಲು ಮನಸು ಮಾಡುವುದಿಲ್ಲ. ಜಿಲ್ಲೆಯ ಶಾಸಕರು ಈ ವಿಷಯವಾಗಿ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಈಗಾಗಲೇ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ನೀಗಿಸಿದ್ದೇವೆ. ಈಗ ಒಂಬತ್ತು ವೈದ್ಯರು ಇಲ್ಲಿನ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಕೆಲವು ವೈದ್ಯರಿಗೆ ಸಂಬಂಧಿಸಿದ ಉಪಕರಣಗಳ ಕೊರತೆ ಇದೆ. ಸಧ್ಯದಲ್ಲೇ ಉಪಕರಣಗಳ ಕೊರತೆ ನೀಗಿಸಲಾಗುವುದು ಎಂದರು.

ಕರವೇ ಜಿಲ್ಲಾಧ್ಯಕ್ಷ ಕೆ.ಎ. ದೀುಪಕ್ ಮಾತನಾಡಿ, ಈ ಭಾಗದಲ್ಲಿ ಕೂಲಿ ಕಾರ್ಮಿಕರು ಹಾಗೂ ರೈತರು ಹೆಚ್ಚು ಇರುವುದರಿಂದ ಸಣ್ಣಪುಟ್ಟ ಮೂಳೆಮುರಿತ ಆದರು ತಕ್ಷಣ ಚಿಕಿತ್ಸೆ ನೀಡಲು ಮೂಳೆ ರೋಗದ ವೈದ್ಯರು ಇಲ್ಲ ಈ ಆಸ್ಪತ್ರೆಗೆ ಪ್ರಮುಖವಾಗಿ ಇಬ್ಬರ ವೈದ್ಯರ ಅವಶ್ಯಕತೆ ಹೆಚ್ಚಿದ್ದು ಒದಗಿಸುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ಮನವಿ ಮಾಡಿದರು.

ವೈದ್ಯರಾದ ಕೆ. ಕಿರಣ್, ಆರ್. ಪ್ರತಿಭಾ, ಎನ್. ಅಶ್ವಿನಿ, ಎಚ್.ಎಂ. ಶೇಖರಾಜು, ಜಿ. ಮಂಜಳ, ಯಶಸ್ ಗಾಂಧಿ. ಲೋಕೇಶ್ ಅವರನ್ನು ಸನ್ಮಾನಿಸಲಾಯಿತು.

ಕರವೇ ಪದಾಧಿಕಾರಿಗಳಾದ ಮಂಜುನಾಥ್, ವಸಂತ, ರವೀಶ್‌ ಮತ್ತಿತರರು ಇದ್ದರು.