16ರಿಂದ ಸೋ.ಪೇಟೆ ಶ್ರೀ ಮುತ್ತಪ್ಪ ಸ್ವಾಮಿ ದೇವಳ ಜಾತ್ರೋತ್ಸವ

| Published : Mar 15 2025, 01:03 AM IST

16ರಿಂದ ಸೋ.ಪೇಟೆ ಶ್ರೀ ಮುತ್ತಪ್ಪ ಸ್ವಾಮಿ ದೇವಳ ಜಾತ್ರೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಮಾ.೧೬ರಂದು ಬೆಳಗ್ಗೆ ೫.೩೦ಕ್ಕೆ ದೇವಾಲಯದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿಯವರ ತಾಂತ್ರಿಕತ್ವದಲ್ಲಿ ಗಣಪತಿ ಹೋಮದೊಂದಿಗೆ ಜಾತ್ರಾ ಮಹೋತ್ಸವ ಆರಂಭವಾಗಲಿದೆ. ಸಂಜೆ ೬.೩೦ಕ್ಕೆ ಕೇರಳದ ಕೊಳಪುರಂ ಮನಹಿಲ್ಲಂ ತಂತ್ರಿಗಳಾದ ಕೃಷ್ಣಕುಮಾರ್ ಅವರಿಂದ ವಿಶೇಷ ಆಶ್ಲೇಷ ಬಲಿ ಪೂಜೆ ಜರುಗಲಿದೆ. ಸಂಜೆ ೭ಕ್ಕೆ ಶಾಸಕ ಡಾ.ಮಂಥರ್‌ಗೌಡ ಅವರು ನೂತನವಾಗಿ ನಿರ್ಮಿಸಿರುವ ನೈವೇದ್ಯ ಕೊಠಡಿಯನ್ನು ಉದ್ಘಾಟಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಇಲ್ಲಿನ ಕಕ್ಕೆಹೊಳೆ ಬಳಿಯ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವವು ಮಾ.೧೬ರಿಂದ ಮೂರು ದಿನಗಳು ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್‌ಕುಮಾರ್ ತಿಳಿಸಿದ್ದಾರೆ.ಮಾ.೧೬ರಂದು ಬೆಳಗ್ಗೆ ೫.೩೦ಕ್ಕೆ ದೇವಾಲಯದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿಯವರ ತಾಂತ್ರಿಕತ್ವದಲ್ಲಿ ಗಣಪತಿ ಹೋಮದೊಂದಿಗೆ ಜಾತ್ರಾ ಮಹೋತ್ಸವ ಆರಂಭವಾಗಲಿದೆ. ಸಂಜೆ ೬.೩೦ಕ್ಕೆ ಕೇರಳದ ಕೊಳಪುರಂ ಮನಹಿಲ್ಲಂ ತಂತ್ರಿಗಳಾದ ಕೃಷ್ಣಕುಮಾರ್ ಅವರಿಂದ ವಿಶೇಷ ಆಶ್ಲೇಷ ಬಲಿ ಪೂಜೆ ಜರುಗಲಿದೆ. ಸಂಜೆ ೭ಕ್ಕೆ ಶಾಸಕ ಡಾ.ಮಂಥರ್‌ಗೌಡ ಅವರು ನೂತನವಾಗಿ ನಿರ್ಮಿಸಿರುವ ನೈವೇದ್ಯ ಕೊಠಡಿಯನ್ನು ಉದ್ಘಾಟಿಸಲಿದ್ದಾರೆ.ಮಾ.೧೭ರಂದು ಮಧ್ಯಾಹ್ನ ೧೨ಕ್ಕೆ ಮಾಜಿ ಸಚಿವ ಅಪ್ಪಚ್ಚು ರಂಜನ್ ಅವರು ಜಾತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ.ವಿಜಯ ಪಾಲ್ಗೊಳಲಿದ್ದಾರೆ. ಮಧ್ಯಾಹ್ನ ೩.೩೦ಕ್ಕೆ ಶ್ರೀ ಮುತ್ತಪ್ಪನ್ ದೇವರ ವೆಳ್ಳಾಟಂ ಆರಂಭವಾಗಲಿದೆ. ನಂತರ ವಿಷ್ಣುಮೂರ್ತಿ, ಕರಿಂಗುಟ್ಟಿ ಚಾತನ್, ಕಂಡಕರ್ಣ, ಭಗವತಿ ದೇವಿ, ರಕ್ತ ಚಾಮುಂಡಿ, ಪೊಟ್ಟನ್ ದೇವರ ವೆಳ್ಳಾಟಂ ನಡೆಯಲಿದೆ. ರಾತ್ರಿ ೧೧.೩೦ಕ್ಕೆ ದೇವರ ಕಳಿಕ್ಕಾಪಾಟ್ ಜರುಗಲಿದೆ. ಸಂಜೆ ೪.೩೦ಕ್ಕೆ ಕೇರಳದ ಖ್ಯಾತ ಸಿಂಗಾರಿ ಮೇಳದೊಂದಿಗೆ ಕಲಶದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ.ಮಾ.೧೮ರಂದು ಬೆಳಗ್ಗಿನ ಜಾವ ೧ ಗಂಟೆಗೆ ಭಗವತಿ ದೇವಿಯ ಕೋಲ ಆರಂಭವಾಗಲಿದೆ. ಬೆಳಗಿನ ಜಾವ ೪.೩೦ಕ್ಕೆ ಪೊಟ್ಟನ್ ದೇವರು ಅಗ್ನಿಗೇರುವುದು. ಮಧ್ಯಾಹ್ನ ೩.೩೦ಕ್ಕೆ ಕೋಲಗಳ ಮುಕ್ತಾಯ ಕಾರ್ಯಕ್ರಮದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ. 17ರಂದು ಮಧ್ಯಾಹ್ನ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿದೆ.ಏ.೩ರಂದು ಪ್ರತಿಷ್ಠಾಪನಾ ವಾರ್ಷಿಕೋತ್ಸವ:ಏ.೩ರಂದು ಸಂಜೆ ೬ಗಂಟೆಯಿಂದ ಏ.೪ರ ಮಧ್ಯಾಹ್ನ ೧೨.೩೦ರ ವರೆಗೆ ಕೇರಳದ ಕಾಳೇಘಾಟ್‌ನ ತಂತ್ರಿಗಳಾದ ನಾರಾಯಣನ್ ನಂಬೂದರಿಯವರ ನೇತೃತ್ವದಲ್ಲಿ ಪ್ರತಿಷ್ಠಾಪನಾ ವಾರ್ಷಿಕೋತ್ಸವ ನಡೆಯಲಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.