ಸಾರಾಂಶ
ವೈಭವ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಹಾಗೂ ವಿಸ್ಮಯ ಲೇಡಿ ಜೆಸಿಸ್ ಸಮ್ಮೇಳನದಲ್ಲಿ ಸ್ಥಳೀಯ ಜೇಸಿಸ್ ಸಂಸ್ಥೆ ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಜೇಸಿಐ ಸಂಸ್ಥೆ ವತಿಯಿಂದ ಕೊಪ್ಪದ ಯಾಸ್ಕನ್ ಸಭಾಂಗಣದಲ್ಲಿ ಈಚೆಗೆ ನಡೆದ ವೈಭವ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಹಾಗೂ ವಿಸ್ಮಯ ಲೇಡಿ ಜೆಸಿಸ್ ಸಮ್ಮೇಳನದಲ್ಲಿ ಸ್ಥಳೀಯ ಜೇಸಿ ಸಂಸ್ಥೆ ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ. ಸ್ಥಳೀಯ ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಘಟಕವು ವಲಯ ಮಟ್ಟದಲ್ಲೇ ಅತ್ಯುತ್ತಮ ಘಟಕ ಎಂದು ಬಿರುದು ಪಡೆದುಕೊಳ್ಳುವುದರೊಂದಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ತನ್ನದಾಗಿಸಿಕೊಂಡಿತು.ಘಟಕದ ಅಧ್ಯಕ್ಷೆ ಜಗದಾಂಬ ಗುರುಪ್ರಸಾದ್, ಕಾರ್ಯದರ್ಶಿ ವಿನುತಾ ಸುದೀಪ್, ಲೇಡಿ ಜೆಸಿ ವಿಭಾಗದ ಅಧ್ಯಕ್ಷರಾದ ಜ್ಯೋತಿ ರಾಜೇಶ್ ಹಾಗೂ ಎಲ್ಲಾ ಸದಸ್ಯರು ಪ್ರಶಸ್ತಿ ಸ್ವೀಕರಿಸಿದರು. ಜೇಸಿ ವಲಯಾಧ್ಯಕ್ಷ ವಿಜಯಕುಮಾರ್, ಉಪಾಧ್ಯಕ್ಷ ಅಕ್ಷಯ್‌ಕುಮಾರ್, ಘಟಕದ ಅಧ್ಯಕ್ಷೆ ಎಂ.ಎಸ್. ಶೃತಿ ಪ್ರಶಸ್ತಿ ಪ್ರದಾನ ಮಾಡಿದರು.