ಸೋಮವಾರಪೇಟೆ ಮಾರುಕಟ್ಟೆ ವಿವಿಧ ಮಳಿಗೆ ಹರಾಜು ಪ್ರಕ್ರಿಯೆ

| Published : Feb 28 2024, 02:39 AM IST

ಸೋಮವಾರಪೇಟೆ ಮಾರುಕಟ್ಟೆ ವಿವಿಧ ಮಳಿಗೆ ಹರಾಜು ಪ್ರಕ್ರಿಯೆ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾಂಸ, ಮೀನು ಮಾರಾಟ ಮಳಿಗೆ, ಸಂತೆ ಸುಂಕ ಎತ್ತಾವಳಿ ಹಾಗೂ ಬಸ್ ನಿಲ್ದಾಣ ಸುಂಕ ಎತ್ತಾವಳಿ ಹಕ್ಕುಗಳ ಹರಾಜು ಪ್ರಕ್ರಿಯೆ ನಡೆಯಿತು. ಪಟ್ಟಣ ಪಂಚಾಯಿತಿಗೆ ವಾರ್ಷಿಕ ರು. 32,500 ಹೆಚ್ಚುವರಿ ಆದಾಯ ಲಭಿಸಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾರುಕಟ್ಟೆ ಆವರಣದಲ್ಲಿರುವ ವಿವಿಧ ಮಳಿಗೆಗಳ ಹರಾಜು ಪ್ರಕ್ರಿಯೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ, ಆಡಳಿತಾಧಿಕಾರಿ ನವೀನ್‍ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಪಂಚಾಯಿತಿ ವ್ಯಾಪ್ತಿಯ ಮಾಂಸ, ಮೀನು ಮಾರಾಟ ಮಳಿಗೆ, ಸಂತೆ ಸುಂಕ ಎತ್ತಾವಳಿ ಹಾಗೂ ಬಸ್ ನಿಲ್ದಾಣ ಸುಂಕ ಎತ್ತಾವಳಿ ಹಕ್ಕುಗಳ ಹರಾಜು ಪ್ರಕ್ರಿಯೆ ನಡೆದು, ಪಟ್ಟಣ ಪಂಚಾಯಿತಿಗೆ ವಾರ್ಷಿಕ ರು. 32,500 ಹೆಚ್ಚುವರಿ ಆದಾಯ ಲಭಿಸಿತು.

ಕಳೆದ ಬಾರಿ ಕೋಳಿ ಮಾಂಸ ಮಾರಾಟದ ಮಳಿಗೆ ಸಂಖ್ಯೆ 3 ವಾರ್ಷಿಕ 45 ಸಾವಿರಕ್ಕೆ ಹರಾಜಾಗಿತ್ತು. ಈ ಬಾರಿ ಅದು 47 ಸಾವಿರ, 2.30 ಲಕ್ಷ ರು.ಗೆ ಹರಾಜಾಗಿದ್ದ ಮಳಿಗೆ ಸಂಖ್ಯೆ 4 ಈ ಬಾರಿ 2.31 ಲಕ್ಷ, 2.32 ಲಕ್ಷಕ್ಕೆ ಹರಾಜಾಗಿದ್ದ ಮಳಿಗೆ ಸಂಖ್ಯೆ 6 ಈ ಬಾರಿ 2.34 ಲಕ್ಷಕ್ಕೆ ಹರಾಜಾಯಿತು.

ಕುರಿಮಾಂಸ ಮಾರಾಟ ಮಳಿಗೆ ಸಂಖ್ಯೆ 5 ಕಳೆದ ವರ್ಷ 28 ಸಾವಿರಕ್ಕೆ ಹರಾಜಾಗಿದ್ದರೆ ಈ ಬಾರಿ 31 ಸಾವಿರ ರು., ಮಳಿಗೆ ಸಂಖ್ಯೆ 7-1.50 ಲಕ್ಷದಿಂದ 1.56 ಲಕ್ಷ ರು., ಮಳಿಗೆ ಸಂಖ್ಯೆ 10-32 ಸಾವಿರದಿಂದ 34 ಸಾವಿರ ರು.ಗೆ ಹರಾಜಾಗಿದೆ.

ಹಸಿ ಮೀನು ಮಾರಾಟ ಮಳಿಗೆ ಸಂಖ್ಯೆ 8 ಕಳೆದ ಬಾರಿ ರು. 1.72 ಲಕ್ಷಕ್ಕೆ ಹರಾಜಾಗಿದ್ದರೆ ಈ ಬಾರಿ ರು. 1.74 ಲಕ್ಷ, ಮಳಿಗೆ ಸಂಖ್ಯೆ 9- 1.10 ಲಕ್ಷದಿಂದ 1.13 ಲಕ್ಷ, ಮಳಿಗೆ ಸಂಖ್ಯೆ 11- 1.31 ಲಕ್ಷದಿಂದ 1.33 ಲಕ್ಷಕ್ಕೆ ಹರಾಜಾಯಿತು.

ಸಂತೆ ಸುಂಕ ಎತ್ತಾವಳಿ ಹಕ್ಕನ್ನು ಕಳೆದ ಬಾರಿ ರು. 9.38 ಲಕ್ಷಕ್ಕೆ ನೀಡಿದ್ದರೆ, ಈ ಬಾರಿ ರು. 9.45 ಲಕ್ಷ, ಬಸ್ ನಿಲ್ದಾಣದ ಸುಂಕ ಎತ್ತಾವಳಿ ಹಕ್ಕನ್ನು ಕಳೆದ ಬಾರಿ ರು. 47,500ಕ್ಕೆ ನೀಡಿದ್ದರೆ, ಈ ಬಾರಿ 50 ಸಾವಿರಕ್ಕೆ ಹರಾಜು ಮಾಡಲಾಯಿತು.

ಒಟ್ಟಾರೆ ಕುರಿ, ಕೋಳಿ, ಹಸಿ ಮೀನು ಮಾರಾಟ ಮಳಿಗೆ, ಸಂತೆ ಹಾಗೂ ಬಸ್ ನಿಲ್ದಾಣ ಸುಂಕ ಎತ್ತಾವಳಿ ಹಕ್ಕನ್ನು ಕಳೆದ ಬಾರಿ ರು. 21,15,500ಕ್ಕೆ ಹರಾಜು ಮಾಡಿದ್ದರೆ, ಈ ಬಾರಿ ರು. 21.48 ಲಕ್ಷಕ್ಕೆ ಹರಾಜು ಮಾಡುವ ಮೂಲಕ ವಾರ್ಷಿಕ ರು. 32.5 ಸಾವಿರ ರೂಪಾಯಿ ಪಂಚಾಯಿತಿಗೆ ಅಧಿಕ ಆದಾಯ ಬಂದಿದೆ. ಹಂದಿ ಮಾಂಸ ಮಾರಾಟ ಮಳಿಗೆಗೆ ಯಾರೂ ಸಹ ಟೆಂಡರ್ ಹಾಕದ ಹಿನ್ನೆಲೆ, ಮಳಿಗೆ ಹರಾಜು ನಡೆದಿಲ್ಲ.

ಟೆಂಡರ್ ಸಭೆಯಲ್ಲಿ ಮುಖ್ಯಾಧಿಕಾರಿ ನಾಚಪ್ಪ, ಸದಸ್ಯರಾದ ಪಿ.ಕೆ. ಚಂದ್ರು, ಮೃತ್ಯುಂಜಯ, ಜೀವನ್, ಬಿ.ಆರ್. ಮಹೇಶ್, ಜಯಂತಿ ಶಿವಕುಮಾರ್, ಬಿ.ಸಿ. ವೆಂಕಟೇಶ್, ಮೋಹಿನಿ, ಶುಭಕರ್ ಇದ್ದರು.