ಸೋಮವಾರಪೇಟೆ: ಇಲ್ಲಿನ ಹೈಟೆಕ್ ಮಾರುಕಟ್ಟೆ ಬಳಿ ಕಳೆದ ಹಲವು ವರ್ಷಗಳಿಂದ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಶಾಸಕರ ಸ್ವಂತ ಹಣದಿಂದ ತೆರವುಗೊಳಿಸಿ, ಮೈಸೂರಿನ ವೆಲ್‌ಕಮ್ ಟ್ರೇಡರ್ಸ್ ತ್ಯಾಜ್ಯ ವಿಲೇವಾರಿ ಘಟಕಕ್ಕೆ ವರ್ಗಾಯಿಸಲಾಯಿತು.ಪಟ್ಟಣದಲ್ಲಿ ಇಂದಿಗೂ ತ್ಯಾಜ್ಯ ವಿಲೇವಾರಿಗೆ ಸಮಸ್ಯೆ ಇದ್ದು, ಎಲ್ಲೆಡೆ ಸಂಗ್ರಹ ಮಾಡಿದ್ದರಿಂದ ಸಮಸ್ಯೆಯಾಗಿತ್ತು. ಇದನ್ನು ಮನಗಂಡ ಶಾಸಕರು ತಮ್ಮ ಸ್ವಂತ ವೆಚ್ಚದಿಂದ ತ್ಯಾಜ್ಯವನ್ನು ತೆಗೆಸಲು ಮುಂದಾಗಿದ್ದಾರೆ. ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಗುರುವಾರ ಮಾರುಕಟ್ಟೆ ಬಳಿಯ ತ್ಯಾಜ್ಯವನ್ನು ಲಾರಿಗೆ ತುಂಬಿಸಿ ಮೈಸೂರಿಗೆ ಕಳಿಸಿದರು. ಈ ಸಂದರ್ಭ ಪಟ್ಟಣ ಪಂಚಾಯಿತಿ ಆರೋಗ್ಯಾಧಿಕಾರಿ ಜಾಸಿಂ ಖಾನ್ ಮತ್ತು ಸಿಬ್ಬಂದಿ ಇದ್ದರು.
ಸೋಮವಾರಪೇಟೆ: ತ್ಯಾಜ್ಯ ತೆರವಿಗೆ ಶಾಸಕ ಸ್ವಂತ ಖರ್ಚಿನ ನೆರವು
ಹೈಟೆಕ್ ಮಾರುಕಟ್ಟೆ ಬಳಿ ಕಳೆದ ಹಲವು ವರ್ಷಗಳಿಂದ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಶಾಸಕರ ಸ್ವಂತ ಹಣದಿಂದ ತೆರವುಗೊಳಿಸಿ, ಮೈಸೂರಿನ ವೆಲ್‌ಕಮ್ ಟ್ರೇಡರ್ಸ್ ತ್ಯಾಜ್ಯ ವಿಲೇವಾರಿ ಘಟಕಕ್ಕೆ ವರ್ಗಾಯಿಸಲಾಯಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.