ಸಾರಾಂಶ
ಕಂದಾಯ ಇಲಾಖೆ ಸೇರಿದಂತೆ ಭೂಮಿ ಸೇವೆ, ಮೋಜಿಣಿ ಸೇವೆ, ಆಧಾರ್ ಸೇವೆ ಮತ್ತು ಸಾಮಾಜಿಕ ಭದ್ರತಾ ಸೇವೆಗಳು ಶೀಘ್ರವಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅಟಲ್‌ಜೀ ಜನಸ್ನೇಹಿ ಕೇಂದ್ರ ಹಾಗೂ ಜಿಲ್ಲಾ ಕೇಂದ್ರದಲ್ಲಿ ಸ್ಪಂದನ ಕೇಂದ್ರಗಳು ತ್ವರಿತ ಸೇವೆ ನೀಡಲು ಸನ್ನದ್ಧವಾಗಿವೆ.
ಸ್ಪಂದನ ಕೇಂದ್ರ ಪೂಜಾ ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲಾಧಿಕಾರಿ
ಕನ್ನಡಪ್ರಭ ವಾರ್ತೆ ಹೊಸಪೇಟೆಕಂದಾಯ ಇಲಾಖೆ ಸೇರಿದಂತೆ ಭೂಮಿ ಸೇವೆ, ಮೋಜಿಣಿ ಸೇವೆ, ಆಧಾರ್ ಸೇವೆ ಮತ್ತು ಸಾಮಾಜಿಕ ಭದ್ರತಾ ಸೇವೆಗಳು ಶೀಘ್ರವಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅಟಲ್‌ಜೀ ಜನಸ್ನೇಹಿ ಕೇಂದ್ರ ಹಾಗೂ ಜಿಲ್ಲಾ ಕೇಂದ್ರದಲ್ಲಿ ಸ್ಪಂದನ ಕೇಂದ್ರಗಳು ತ್ವರಿತ ಸೇವೆ ನೀಡಲು ಸನ್ನದ್ಧವಾಗಿವೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸ್ಪಂದನ ಕೇಂದ್ರ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಸೇವೆಗಳಿಗೆ ಜನರು ಅನಗತ್ಯ ಅಲೆದಾಟ ತಪ್ಪಿಸಲು ಹಾಗೂ ಶೀಘ್ರ ಸೇವೆ ನೀಡಲು ಜಿಲ್ಲಾಡಳಿತ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈಗಾಗಲೇ ತಾಲೂಕು ಮಟ್ಟದಲ್ಲಿ ಅಟಲ್‌ಜೀ ಜನಸ್ನೇಹಿ ಕೇಂದ್ರದ ಮೂಲಕ ಅನೇಕ ಸೇವೆ ನೀಡಲಾಗುತ್ತಿದ್ದು, ಜಿಲ್ಲಾ ಕೇಂದ್ರದಲ್ಲಿ ಸ್ಪಂದನ ಕೇಂದ್ರದಿಂದಲೂ ತ್ವರಿತ ಸೇವೆ ನೀಡಲು ಮುಂದಾಗಿದೆ. ಸಾರ್ವಜನಿಕರು ಸಾಮಾಜಿಕ ಭದ್ರತಾ ಸೇವೆ, ಕಂದಾಯ ಇಲಾಖೆ, ಭೂಮಿ ಸೇವೆ, ಅಧಾರ್ ನಂತಹ ಕೆಲಸಗಳಿಗೆ ಸ್ಪಂದನ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆ ಪಡೆಯಬಹುದಾಗಿದೆ. ಮಧ್ಯವರ್ತಿಗಳಿಂದ ಅವಲಂಬಿತರಾಗದೇ ನೇರವಾಗಿ ಕೇಂದ್ರಗಳಲ್ಲಿನ ಸೇವೆ ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಟಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ತಹಸೀಲ್ದಾರ, ಕಂದಾಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.