ವಿಧಾನಸಭಾ ಅಧಿವೇಶನದಲ್ಲಿ ಅನುದಾನ ಕೇಳಿದ ಶಾಸಕ ಯಶ್ಪಾಲ್ ಸುವರ್ಣರ ಮಾತನ್ನು ಹಗುರವಾಗಿ ಪರಿಗಣಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿ ಮಾಡಿರುವ ಸ್ಪೀಕರ್ ಅಬ್ದುಲ್ ಖಾದರ್ ಅವರ ರಾಜಕೀಯ ಪ್ರೇರಿತ ಕ್ಷುಲ್ಲಕ ವರ್ತನೆ ಅತ್ಯಂತ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ: ‘ಕರಾವಳಿ ಕರ್ನಾಟಕದ ನಾಡ ಹಬ್ಬ’ ಉಡುಪಿ ಪರ್ಯಾಯೋತ್ಸವಕ್ಕೆ ವಿಧಾನಸಭಾ ಅಧಿವೇಶನದಲ್ಲಿ ಅನುದಾನ ಕೇಳಿದ ಶಾಸಕ ಯಶ್ಪಾಲ್ ಸುವರ್ಣರ ಮಾತನ್ನು ಹಗುರವಾಗಿ ಪರಿಗಣಿಸಿ, ಹಿಂದೂ ಧರ್ಮದ ಅಸ್ಮಿತೆಯ ಹರಿಕಥೆಯನ್ನು ತಿರಸ್ಕಾರ ಭಾವದಿಂದ ಉಲ್ಲೇಖಸಿ, ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿ ಮಾಡಿರುವ ಸ್ಪೀಕರ್ ಅಬ್ದುಲ್ ಖಾದರ್ ಅವರ ರಾಜಕೀಯ ಪ್ರೇರಿತ ಕ್ಷುಲ್ಲಕ ವರ್ತನೆ ಅತ್ಯಂತ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸ್ಪೀಕರ್ ಪೀಠದಲ್ಲಿ ನಿಷ್ಪಕ್ಷಪಾತವಾಗಿ ಸರ್ವಪಕ್ಷದ ಶಾಸಕರಿಗೆ ನ್ಯಾಯ ಒದಗಿಸುವ ಬದಲು ಒಂದು ಧರ್ಮವನ್ನು ದ್ವೇಷಿಸುವ ರೀತಿಯ ಹೇಳಿಕೆ ನೀಡಿದ ಖಾದರ್, ಜನರಿಂದ ಆಯ್ಕೆಯಾಗಿರುವ ಯಶ್‌ಪಾಲ್ ಸಹಿತ ಕ್ಷೇತ್ರದ ಸಮಸ್ತ ಹಿಂದೂ ಸಮಾಜ ಬಾಂಧವರನ್ನು ಅವಮಾನಿಸಿರುವುದು ಖೇದಕರ ಎಂದವರು ಹೇಳಿದ್ದಾರೆ.ಪಾರಂಪರಿಕವಾಗಿ ಉಡುಪಿ ಪರ್ಯಾಯಕ್ಕೆ ಅನುದಾನ ಕೇಳಿರುವ ಯಶ್ಪಾಲ್ ಸುವರ್ಣ ನಡೆ ಸಮರ್ಥನೀಯವಾಗಿದೆ. ಇತರ ಧರ್ಮಗಳ ವಿಶೇಷ ಆಚರಣೆಗಳಿಗೆ ಅನುದಾನ ಕೇಳಿದಾಗಲೂ ಖಾದರ್ ಇದೇ ರೀತಿಯ ಉದ್ದಟತನ ಪ್ರದರ್ಶಿಸುತ್ತಾರೋ ಎಂದವರು ಪ್ರಶ್ನಿಸಿದ್ದಾರೆ.
ಸ್ಪೀಕರ್ ಖಾದರ್ ಕೂಡಲೇ ಉಡುಪಿಯ ನಾಗರಿಕರ ಹಾಗೂ ಸಮಸ್ತ ಹಿಂದೂ ಸಮಾಜದ ಬಹಿರಂಗ ಕ್ಷಮೆ ಕೋರಬೇಕು ಎಂದು ಕುತ್ಯಾರು ನವೀನ್ ಶೆಟ್ಟಿ ಅಗ್ರಹಿಸಿದ್ದಾರೆ.