ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ದೇವಸ್ಥಾನವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು.

ಬೆಳ್ತಂಗಡಿ: ಬೆಂಗಳೂರಿನ ಮಾರುಕಟ್ಟೆ ಹೂವಿನ ವ್ಯಾಪಾರಸ್ಥರು ಮತ್ತು ಡೆಕೋರೇಟರ್ಸ್‌ಗಳು ವಿವಿಧ ಬಗೆಯ ಹೂವು, , ಹಣ್ಣು, ತರಕಾರಿಗಳನ್ನು ಬಳಸಿ ದೇವಸ್ಥಾನ, ಬೀಡು, ಅನ್ನಛತ್ರ ಮೊದಲಾದ ಕಟ್ಟಡಗಳಿಗೆ ಅಲಂಕಾರ ಸೇವೆ ಮಾಡಿದರು.

ಅನಾನಸ್‌, ಸೇಬು, ದ್ರಾಕ್ಷಿ, ತೆಂಗಿನಕಾಯಿ, ಕಲ್ಲಂಗಡಿ, ಕಬ್ಬು ಮೊದಲಾದವುಗಳನ್ನು ತಲಾ ಮುನ್ನೂರು ಕೆ.ಜಿ. ಬಳಸಲಾಗಿದೆ. ಲಿಲಿಯಂ, ಬಿ.ಒ.ಪಿ. ಆರ್ಕಿಡ್, ಗುಲಾಬಿ, ಗ್ಲಾಡಿಯೊ, ಕ್ಯೂಬ್‌ರೋಸ್ ಮೊದಲಾದ ಹೂವುಗಳನ್ನು ಬಳಸಲಾಗಿದೆ. ಸುಮಾರು ಮುನ್ನೂರು ಮಂದಿ ಶ್ರಮವಹಿಸಿ ಅಲಂಕಾರ ಸೇವೆ ಮಾಡಿದ್ದಾರೆ. ಸುಮಾರು 15 ಲಕ್ಷ ರು. ವೆಚ್ಚವಾಗಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.ಕ್ಷೇತ್ರದಲ್ಲಿ ಶುಕ್ರವಾರ ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಕಂಚಿಮಾರುಕಟ್ಟೆ ಉತ್ಸವ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ದೇವಸ್ಥಾನವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು.