ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ದೇಶದ ವಿದ್ಯಾರ್ಥಿ ಸಮುದಾಯ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಆಕರ್ಷಿತರಾಗುತ್ತಿದ್ದಾರೆ. ವಿದೇಶಿ ಶೈಕ್ಷಣಿಕ ಸಂಸ್ಥೆಗಳ ಗುಣಮಟ್ಟದ ಶಿಕ್ಷಣ ಮತ್ತು ಉತ್ಕೃಷ್ಟ ಸಂಶೋಧನೆಗೆ ಒದಗಿಸುತ್ತಿರುವ ಆರ್ಥಿಕ ನೆರವಿನಿಂದ ಉತ್ತಮ ಭವಿಷ್ಯ ಕಂಡುಕೊಳ್ಳುತ್ತಿದ್ದಾರೆ. ಅದರ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ವಿದೇಶಿ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವ ಸುವರ್ಣಾವಕಾಶ ಸಿಗುತ್ತಿದೆ ಎಂದು ದಕ್ಷಿಣ ಭಾರತ ಚೆನೈನ ಬ್ರಿಟಿಷ್ ಹೈ ಕಮಿಷನ್ ಹಾಗೂ ಬ್ರಿಟಿಷ್ ಕೌನ್ಸಿಲನ ನಿರ್ದೇಶಕಿ ಜನಕ ಪುಷ್ಪನಾಥನ್ ಹೇಳಿದ್ದಾರೆ.ಗುಲ್ಬರ್ಗ ವಿವಿ ಮತ್ತು ಯುನೈಟೆಡ್ ಕಿಂಗ್‍ಡಂನ ಬ್ರಾಡ್‍ಫೋರ್ಡ್ ವಿವಿ ಸಹಯೋಗದೊಂದಿಗೆ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ‘ರೀಸೆಂಟ್ ಅಡ್ವಾನ್ಸಸ್ ಇನ್ ಬಯೋ-ನ್ಯಾನೋ ಕಾಂಪೋಸಿಟ್ಸ್ ಫಾರ್ ಎನಾನ್ಸಿಂಗ್ ಹ್ಯುಮನ್ ಹೆಲ್ತ್’ ವಿಷಯ ಕುರಿತು ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತ ಹಾಗೂ ಯುನೈಟೆಡ್ ಕಿಂಗ್‍ಡಂನ ಬ್ರಿಟಿಷ್ ಕೌನ್ಸಿಲ್ ಪೋಷಕತ್ವದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ಹಾಗೂ ಬ್ರಾಡ್‍ಪೋರ್ಡ್ ವಿಶ್ವವಿದ್ಯಾಲಯಗಳ ಪೂರಕ ಒಪ್ಪಂದಗಳಿಂದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಸಂಶೋಧನೆ ಕೈಗೊಳ್ಳಲು ವಿಪುಲ ಅವಕಾಶಗಳನ್ನು ಒದಗಿಸುತ್ತಿರುವುದು ಪ್ರೋತ್ಸಾಹದಾಯಕ ಕಾರ್ಯವಾಗಿದೆ. ವೈಜ್ಞಾನಿಕ ಶಿಕ್ಷಣ ಪಡೆಯುವ ಮೂಲಕ ವಿಶ್ವಮಟ್ಟದ ಜ್ಞಾನ ವಿಸ್ತರಣೆಯ ಸಮ್ಮೇಳನಗಳಲ್ಲಿ ಉತ್ಸಾಹದಿಂದ ಪಾಲ್ಗೊಳಬೇಕು ಎಂದ ಅವರು ಕ್ರಿಯಾಶೀಲ ಮನಸ್ಸಿನಿಂದ ಜ್ಞಾನ ವಿಸ್ತರಣೆ ಮತ್ತು ಆರೋಗ್ಯ ಕಾಳಜಿಯಿಂದ ಜಾಗತಿಕ ಸವಾಲುಗಳನ್ನು ದೈರ್ಯವಾಗಿ ಎದುರಿಸಿ ಉತ್ತಮ ಅವಕಾಶಗಳನ್ನು ಬದ್ಧತೆಯಿಂದ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಪುಣೆಯ ಎನ್‍ಸಿಐಎಂ ರಿಸೋರ್ಸ್ ಸೆಂಟರ್ ಡಿವಿಷನ್ ಆಪ್ ಬಯೋಕೆಮಿಕಲ್ ಸೈನ್ಸ್‍ನ ಮುಖ್ಯ ವಿಜ್ಞಾನಿ ಡಾ. ಸೈಯದ್ ಜಿ. ದಸ್ತಗೆರ್ , ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ರಜನಿ, ಶ್ರೀಲಂಕಾದ ಪೆರಡೇನಿಯಾ ವಿಶ್ವವಿದ್ಯಾಲಯದ ಪ್ರೊ. ದಿಸ್ಸೆ ನಾಯಕೆ ಮಾತನಾಡಿದರು.
ಗುವಿವಿ ಕುಲಪತಿ ಪ್ರೊ. ದಯಾನಂದ ಅಗಸರ ಅಧ್ಯಕ್ಷತೆ ವಹಿಸಿ ಮಾತನಾಡಿ ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳೊಂದಿಗೆ ಗುವಿವಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ಆಸಕ್ತಿವಹಿಸಿದ್ದು, ವಿದೇಶಿ ವಿಶ್ವವಿದ್ಯಾಲಯಗಳ ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳುವ ಪ್ರಯತ್ನವನ್ನು ಈಗಾಗಲೇ ಆರಂಭವಾಗಿದೆ ಎಂದರು. ವಿತ್ತಾಧಿಕಾರಿ ರಾಜಾನಳ್ಕರ್ ಲಕ್ಷ್ಮಣ, ಗ್ರಂಥಪಾಲಕ ಡಾ. ಸುರೇಶ್ ಜಂಗೆ, ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ್, ಕುಲಸಚಿವ ಡಾ. ಬಿ. ಶರಣಪ್ಪ ಉಪಸ್ಥಿತರಿದ್ದರು.ಕಾಮನ್‍ವೆಲ್ತ್ ಅಕಾಡೆಮಿಕ್ ಸ್ಟಾಪ್ ಪ್ರೊಪೆಷನಲ್ ಫೆಲೋ ಪಡೆದಿರುವ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ವೆಂಕಟರಾಮನ್, ಡಾ. ಸುರೇಶ್ ಜಂಗೆ, ಹಾಗೂ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಜಿ. ಎಂ. ವಿದ್ಯಾಸಾಗರ್ ಅವರನ್ನು ಅಭಿನಂದಿಸಲಾಯಿತು.
ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಯುನೈಟೆಡ್ ಕಿಂಗ್‍ಡಮ್‍ನ ಬ್ರಾಡ್‍ಫೋರ್ಡ್ ವಿವಿ ಡಾ. ಎಸ್. ಎ. ಬೆಹ್ರುಜ್ ಖಘಾನಿ ಮಾತನಾಡಿ 350ಕ್ಕೂ ಪ್ರಾಧ್ಯಾಪಕರು, ವಿಜ್ಞಾನಿಗಳು ಹಾಗೂ ಸಂಶೋಧಕರು ಭಾಗವಹಿಸಿದ್ದರು. 65ಕ್ಕೂ ಹೆಚ್ಚು ಲೇಖನಗಳು ಪ್ರಸ್ತುತಿಯಾಗಿವೆ. ಎರಡು ದೇಶಗಳ ವಿಶ್ವವಿದ್ಯಾಲಯಗಳು ಸಮ್ಮೇಳನ ಆಯೋಜನೆ ಮೂಲಕ ಹೊಸ ಆಧುನಿಕ ಶಿಕ್ಷಣ ವಿನಿಮಯ, ಸಂಶೋಧನೆಗೆ ಹೆಚ್ಚು ಮೌಲ್ಯ ಬರಲಿದೆ ಎಂದು ಹೇಳಿ ಸಮ್ಮೇಳನದ ವರದಿ ವಾಚಿಸಿದರು. ಗುಲ್ಬರ್ಗ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಪ್ರೊ. ಜಿ.ಎಂ. ವಿದ್ಯಾಸಾಗರ್ ವಂದಿಸಿದರು.ಅತ್ಯುತ್ತಮ ಮೌಖಿಕ ಪ್ರಸ್ತುತಿ ಪ್ರಶಸ್ತಿ:
ಸೂಕ್ಷ್ಮಜೀವಿ ಸೋಂಕುಗಳು ಉಪ ವಿಷಯದ ಮೇಲೆ ನಡೆದ ತಾಂತ್ರಿಕ ಗೋಷ್ಠಿಯಲ್ಲಿ ಪ್ರಬಂಧ ಮಂಡಿಸಿದ ಗುಲ್ಬರ್ಗ ವಿಶ್ವವಿದ್ಯಾಲಯದ ಡಾ. ನಜುಹತ್ ತಬಸ್ಸುಮ ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯದ ಸಂಗೀತಾ ಎಂ ಹಾಗೂ ಎರಡನೇ ತಾಂತ್ರಿಕ ಗೋಷ್ಠಿಯಲ್ಲಿ ವಿಷಯ ಮಂಡಿಸಿದ ದಾವಣಗೆರೆ ವಿಶ್ವವಿದ್ಯಾಲಯದ ಪ್ರಶಂತ್ ಕುಮಾರ್ ಸಿ. ಎಸ್. ದೇವರಾಜ ಅವರಿಗೆ ಅತ್ಯುತ್ತಮ ಮೌಖಿಕ ಪ್ರಸ್ತುತಿ ಪ್ರಶಸ್ತಿ ನೀಡಲಾಯಿತು.ಅತ್ಯುತ್ತಮ ಪೋಸ್ಟರ್ ಪ್ರೆಸಂಟೇಶನ್ ಪ್ರಶಸ್ತಿ:
1) ಸೂಕ್ಷ್ಮಜೀವಿ ಸೋಂಕುಗಳು- ಉಪ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾಲಯದ ಯಶಸ್ವಿನಿ, ಗುಲ್ಬರ್ಗ ವಿಶ್ವವಿದ್ಯಾಲಯದ ಶ್ವೇತಾ ಮಲ್ಲಿಕಾರ್ಜುನ ಹಾಗೂ ಬೆಂಗಳೂರು ಮಹಾರಾಣಿ ಶೈನ್ಸ್ ಕಾಲೇಜಿನ ವಿಶ್ವನಾಥ್ ಟಿ.ಎಂ.,2) ಕ್ಯಾನ್ಸರ್ ಮತ್ತು ತ್ವಚೆ ಸಂರಕ್ಷಣೆ- ಉಪ ವಿಷಯದಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಗಣಪತಿ ಪಿ. ಯಾದವ ಹಾಗೂ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪೂಜಾ ವಿ. ಗುಣಗಾಮಭಿರೆ
3) ಟಿಶ್ಯೂ ಮತ್ತು ಎಂಜಿನಿಯರಿಂಗ್ ರಿಪೇರ – ಉಪ ವಿಷಯದಲ್ಲಿ ಕರಾಡ್‍ನ ಕೃಷ್ಣ ಇನ್ಸಟ್ಯೂಟ್ ಆಪ್ ಫಾರ್ಮಸಿಯ ರುತುರಾಜ ಯು. ಭಂಡಾರೆ, ಕಲಬುರಗಿ ಕೆ.ಬಿ.ಎನ್ ವಿಶ್ವವಿದ್ಯಾಲಯದ ಬದ್ರಿನಾಥ ಡಿ. ಕುಲಕರ್ಣಿ4) ಮಧುಮೇಹ ಮತ್ತು ಇತರೆ ಕಾಯಿಲೆಗಳು- ಉಪವಿಷಯದಲ್ಲಿ ಬೀದರಿನ ಬಿ.ವಿ ಬೂಮರೆಡ್ಡಿ ಕಲಾ ಕಾಲೇಜಿನ ಸೂರ್ಯವಂಶಿ ಪೂಜಾ, ಗುಲ್ಬರ್ಗ ವಿಶ್ವವಿದ್ಯಾಲಯದ ಸಹನಾಪ್ರಿಯಾ ಗುಬ್ಬೆವಾಡ ಹಾಗಾ ರೋಹಿಣಿ ಅತ್ಯುತ್ತಮ ಪೋಸ್ಟರ್ ಪ್ರೆಸಂಟೇಶನ್ ಪ್ರಶಸಿಗೆ ಅರ್ಹರಾದರು.