ವಿದ್ಯಾರ್ಥಿಯನ್ನು ನಾಗರಿಕನನ್ನಾಗಿಸದಿದ್ದರೆ ಶಿಕ್ಷಕನಾಗಿ ಅದು ನನ್ನ ದೋಷ

| Published : Mar 30 2025, 03:05 AM IST

ವಿದ್ಯಾರ್ಥಿಯನ್ನು ನಾಗರಿಕನನ್ನಾಗಿಸದಿದ್ದರೆ ಶಿಕ್ಷಕನಾಗಿ ಅದು ನನ್ನ ದೋಷ
Share this Article
  • FB
  • TW
  • Linkdin
  • Email

ಸಾರಾಂಶ

60 ನಿಮಿಷಗಳ ಬೋಧನೆ ಒಂದು ಕ್ರೌರ್ಯವಲ್ಲದೆ ಮತ್ತೇನು ಅಲ್ಲ. ನಾವು ಕಲಿಸುವವರಲ್ಲದೆ ಕಲಿಯುವ ಗುರುಗಳಾಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರುನನ್ನ ವಿದ್ಯಾರ್ಥಿಯನ್ನು ನಾನು ನಾಗರಿಕನನ್ನಾಗಿಸದಿದ್ದರೆ ಶಿಕ್ಷಕನಾಗಿ ಅದು ನನ್ನ ದೋಷ ಎಂದು ಸಾಹಿತಿ ಪ್ರೊ.ರಹಮತ್‌ ತರೀಕೆರೆ ಹೇಳಿದರು.ಕುವೆಂಪುನಗರ ಬಿಜಿಎಸ್ ಬಿ.ಇಡಿ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, 60 ನಿಮಿಷಗಳ ಬೋಧನೆ ಒಂದು ಕ್ರೌರ್ಯವಲ್ಲದೆ ಮತ್ತೇನು ಅಲ್ಲ. ನಾವು ಕಲಿಸುವವರಲ್ಲದೆ ಕಲಿಯುವ ಗುರುಗಳಾಗಬೇಕು.ಬೋಧನೆಯಲ್ಲಿ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳುತ್ತಾ ವಿಸ್ಮಯವನ್ನು ಮೂಡಿಸಿ ಬೋಧಿಸಬೇಕು ಎಂದರು.ಕೇವಲ ಮಾಹಿತಿ ನೀಡುವುದು ಶಿಕ್ಷಣವಲ್ಲ ಮಾಹಿತಿ,ವಿಶ್ಲೇಷಣೆ, ವ್ಯಾಖ್ಯಾನ ಈ ಮೂರು ಸ್ಥರಗಳಲ್ಲಿ ಜ್ಞಾನದ ವಿಸ್ತರಣೆಯಾಗಬೇಕು. ಇಂದಿನ ಐಎಎಸ್‌, ಕೆಎಎಸ್ ಅಧಿಕಾರಿಗಳು ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಉದ್ಯೋಗ ಪಡೆಯುತ್ತಿದ್ದಾರೆ ಅವರಿಗೆ ವಿಶ್ಲೇಷಣೆ ಮತ್ತು ವ್ಯಾಖ್ಯಾನದ ಅರಿವಿಲ್ಲ ಹಾಗಾಗಿ ಅವರು ಆಡಳಿತ ನಡೆಸುವಲ್ಲಿ ಸೋಲುತ್ತಿದ್ದಾರೆ. ಬೋಧನೆ ಯಾವಾಗಲೂ ಸಂವಾದದ ರೂಪದಲ್ಲಿರಬೇಕು, ಏಕಮುಖ ಸಂವಹನವಾಗಬಾರದು ಎಂದರು.ನಾಡಗೀತೆ ಮತ್ತು ರಾಷ್ಟ್ರಗೀತೆಯಲ್ಲಿ ಅದ್ವೈತ ಸಿದ್ದಾಂತವಿದ್ದು, ಒಳಗೊಳ್ಳುವ ಸಂಸ್ಕೃತಿಯನ್ನು ಈ ಗೀತೆಗಳು ಪ್ರತಿಬಿಂಬಿಸುತ್ತವೆ.ಪ್ರಸ್ತುತ ದಿನಗಳಲ್ಲಿ ಯಾವುದಾದರು ಒಂದು ಜ್ಞಾನ ಶಾಖೆಯ ಬಗ್ಗೆ ತಿಳಿದಿದ್ದರೆ ಸಾಲದು ಎಲ್ಲಾ ಜ್ಞಾನ ಶಾಖೆಗಳ ಪರಿಚಯ ನಮಗಿರಬೇಕು ಎಂದು ಬೋಧನೆ ಮತ್ತು ಕಲಿಕೆ ಬಗ್ಗೆ ತಮ್ಮ ಅಭಿಮತ ವ್ಯಕ್ತಪಡಿಸಿದರು. ಸಮಾಜದ ಪ್ರತಿ ಸಮುದಾಯ ಕೌಶಲ್ಯ ಆಧಾರಿತವಾಗಿದೆ. ಯಾವುದಾದರೂ ಒಂದು ಕೌಶಲ್ಯವನ್ನು ಅವಲಂಬಿಸಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತದೆ ಎಲ್ಲಾ ಸಮುದಾಯವೂ ಕಾಲಕ್ಕೆ ತಕ್ಕಂತೆ ಕೆಲವು ಬಿಕ್ಕಟ್ಟುಗಳನ್ನು ಎದುರಿಸುತ್ತವೆ ಮತ್ತು ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುತ್ತವೆ. ಉದಾಹರಣೆಗೆ ಕುಂಬಾರಿಕೆ ಮಡಿಕೆ ಮಾಡುವ ಸಮುದಾಯ ಮಡಿಕೆಯನ್ನು ಜನ ಕೊಳ್ಳುವುದನ್ನು ನಿಲ್ಲಿಸಿದಾಗ ಆ ಸಮುದಾಯ ಹೂ ಕುಂಡಗಳನ್ನು ತಯಾರಿಸಿ ಮಾರುವುದನ್ನು ರೂಡಿಸಿಕೊಂಡು ತಮ್ಮ ಜೀವನ ನಿರ್ವಹಿಸುತ್ತಿದೆ ಹಾಗೆ ಶಿಕ್ಷಕ ಕೂಡ ತರಗತಿಯ ಹಿಂದಿನ ವಾತಾವರಣಕ್ಕೆ ಬೇಕಾದ ಕೌಶಲ್ಯವನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.ನಂತರ ಅವರು ಪ್ರಶಿಕ್ಷಣಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ನಾಗರಾಜು ಮಾತನಾಡಿ, ಕಲಿಕೆ ಮತ್ತು ಬೋಧನೆಗೆ ಸಂಬಂಧಿಸಿದಂತೆ ಡಾ. ರಹಮತ್ ತರೀಕೆರೆ ಮಂಡಿಸಿದ ವಿಚಾರಗಳನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.--ಬಾಕ್ಸ್‌.ಯುಗಾದಿ- ರಂಜಾನ್‌ ಹಬ್ಬ ಒಟ್ಟಿಗೆ ಬಂದಿವೆಚಂದ್ರಮಾನ ಯುಗಾದಿ ಮತ್ತು ರಂಜಾನ್ ಎರಡು ಹಬ್ಬಗಳು ಒಟ್ಟಿಗೆ ಬಂದಿವೆ. ಹತ್ತು ವರ್ಷಗಳ ಹಿಂದೆ ಹೀಗೆ ಎರಡು ಹಬ್ಬಗಳು ಒಟ್ಟಿಗೆ ಬಂದಿದ್ದವು. ಈ ಸಂದರ್ಭದಲ್ಲಿ ನಾವು ಹಿಂದೂ- ಮುಸ್ಲಿಮರು ಒಟ್ಟಿಗೆ ಚಂದ್ರನ ದರ್ಶನ ಮಾಡುತ್ತಿದ್ದೆವು ಎಂದು ರಹಮತ್‌ ತರೀಕೆರೆ ನೆನಪಿಸಿಕೊಂಡರು.