ಶ್ರೀ ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ವಿಶೇಷ ಪೂಜೆ, ಕರಗ ಮಹೋತ್ಸವ

| Published : Jul 28 2024, 02:15 AM IST

ಸಾರಾಂಶ

ಇತಿಹಾಸ ಪ್ರಸಿದ್ಧ ಶ್ರೀದೇವಿರಮ್ಮಣ್ಣಿ ಕೆರೆಯಲ್ಲಿ ಕರಗವನ್ನು ಸ್ಥಾಪಿಸಿ ಬಾಲಕಿಯರ ತಲೆ ಮೇಲೆ ಕರಗ ಹೊರಿಸಿ ನಡೆ ಮುಡಿಯೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮಂಗಳವಾದ್ಯ ಹಾಗೂ ಜಾನಪದ ಕಲಾ ತಂಡಗಳ ವೈಭವದ ಮೆರವಣಿಗೆಯೊಂದಿಗೆ ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಶ್ರೀರಾಮ ಮಂದಿರದ ಆವರಣಕ್ಕೆ ಕರಗದ ಕಳಸವನ್ನು ತಂದು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು.

ಕೆ.ಆರ್.ಪೇಟೆ: ಆಷಾಢ ಶುಕ್ರವಾರದ ಅಂಗವಾಗಿ ಪಟ್ಟಣದ ನೇಕಾರ ತೊಗಟವೀರ ಸಮಾಜದಿಂದ ಶ್ರೀಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಕರಗ ಮಹೋತ್ಸವವು ಶ್ರದ್ಧಾ,ಭಕ್ತಿಯಿಂದ ಅದ್ಧೂರಿಯಾಗಿ ನಡೆಯಿತು.

ಇತಿಹಾಸ ಪ್ರಸಿದ್ಧ ಶ್ರೀದೇವಿರಮ್ಮಣ್ಣಿ ಕೆರೆಯಲ್ಲಿ ಕರಗವನ್ನು ಸ್ಥಾಪಿಸಿ ಬಾಲಕಿಯರ ತಲೆ ಮೇಲೆ ಕರಗ ಹೊರಿಸಿ ನಡೆ ಮುಡಿಯೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮಂಗಳವಾದ್ಯ ಹಾಗೂ ಜಾನಪದ ಕಲಾ ತಂಡಗಳ ವೈಭವದ ಮೆರವಣಿಗೆಯೊಂದಿಗೆ ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಶ್ರೀರಾಮ ಮಂದಿರದ ಆವರಣಕ್ಕೆ ಕರಗದ ಕಳಸವನ್ನು ತಂದು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು.

ಸಮಾಜದ ಮುಖಂಡ ಹಂಸ ರಮೇಶ್ ಮಾತನಾಡಿ, ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಶ್ರೀಸಾಮಾನ್ಯರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುತ್ತಿರುವ ತೊಗಟವೀರ ಸಮಾಜದ ಬಂಧುಗಳು ತಮ್ಮ ನೇಕಾರಿಕೆ ವೃತ್ತಿ ಜೊತೆಗೆ ವ್ಯಾಪಾರ ವ್ಯವಹಾರ ನಡೆಸಿ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಅಭಿವೃದ್ಧಿ ಹೊಂದುತ್ತಿದ್ದಾರೆ ಎಂದರು. ಮೈಸೂರು ವಿಭಾಗದ ತೊಗಟವೀರ ಸಮಾಜದ ಅಧ್ಯಕ್ಷ ಎಂಜಿನಿಯರ್ ವೆಂಕಟೇಶ್, ಪಿ.ಎಲ್.ಡಿ ಬ್ಯಾಂಕ್ ಮಾಜಿ ನಿರ್ದೇಶಕ ಕೆ.ಆರ್.ಪುಟ್ಟಸ್ವಾಮಿ, ಪುರಸಭೆ ಸದಸ್ಯೆ ಇಂದ್ರಾಣಿ ವಿಶ್ವನಾಥ್, ಪದ್ಮರಾಜು, ಪುರಸಭೆ ಮಾಜಿ ಅಧ್ಯಕ್ಷ ರಾಮಕೃಷ್ಣ ಮಾಸ್ಟರ್, ರಾಚಿ ನಂಜುಂಡಣ್ಣ, ಮೈಲಾರಿ ರವಿ, ಕ್ಯಾಂಟೀನ್ ರಾಮಣ್ಣ, ಅಂಗಡಿ ಲಕ್ಷ್ಮಣ, ಕೈಗೋನಹಳ್ಳಿ ಈರಪ್ಪಣ್ಣ, ಚಂದ್ರಕಲಾ ರಮೇಶ್, ಮೀಸೆ ರಮೇಶಣ್ಣ, ಮಲ್ಲಿಕಾರ್ಜುನ, ನಿರಂಜನ, ಮಧುಸೂದನ್, ಕ್ಯಾಂಟೀನ್ ವಾಸು ಸೇರಿದಂತೆ ಅಂಚನಹಳ್ಳಿ, ತಗಡೂರು, ತೆಂಡೆಕೆರೆ, ಹೊನ್ನಾವರ, ಮಾಳಗೂರು, ಸರಗೂರು, ಶ್ರೀರಂಗಪಟ್ಟಣ, ಪಾಂಡವಪುರ, ಉಂಡಿಗನಹಾಳು, ಹರವು ಅರಳಕುಪ್ಪೆ, ಕೈಗೋನಹಳ್ಳಿ, ಸಿಂಧಘಟ್ಟ ಗ್ರಾಮಗಳಿಂದ ಸಾವಿರಾರು ಜನರು ಕರಗ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ದೇಗುಲಕ್ಕೆ ಆಗಮಿಸಿದ್ದ ಭಕ್ತರಿಗೆ ಅನ್ನ ದಾಸೋಹ ನಡೆಯಿತು.