ಸಾರಾಂಶ
ಪಟ್ಟಣದ ವಿವಿಧೆಡೆ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶ್ರೀರಾಮನ ಭಾವಚಿತ್ರದ ಅದ್ಧೂರಿ ಮೆರವಣಿಗೆ ಮಾಡಲಾಯಿತು.ಅದೇ ರೀತಿ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಸಂಭ್ರಮಿಸಲಾಯಿತು.
ಕವಿತಾಳ: ಪಟ್ಟಣದ ವಿವಿಧೆಡೆ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶ್ರೀರಾಮನ ಭಾವಚಿತ್ರದ ಅದ್ಧೂರಿ ಮೆರವಣಿಗೆ ಮಾಡಲಾಯಿತು.
ಅದೇ ರೀತಿ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಸಂಭ್ರಮಿಸಲಾಯಿತು.ಕನ್ಯಕಾ ಪರಮೇಶ್ವರಿ ದೇವಸ್ಥಾನದಿಂದ ಶ್ರೀರಾಮನ ಭಾವಚಿತ್ರವನ್ನು ತ್ರಯಂಭಕೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ಮಾಡಲಾಯಿತು. ಸೀತೆ, ರಾಮ, ಲಕ್ಷ್ಮಣನ ಮೂರ್ತಿಗಳಿಗೆ ಅಭಿಷೇಕ, ಮಹಾ ಮಂಗಳಾರತಿ ನೆರವೇರಿಸಲಾಯಿತು. ಅರ್ಚಕ ಜಯತೀರ್ಥ ಆಚಾಪೂರ್ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮಹಿಳೆಯರು ಭಜನೆ ಹಾಡುಗಳನ್ನು ಹಾಡಿದರು. ಭಗೀರಥ ವೃತ್ತದ ಹತ್ತಿರ ಯುವಕರು ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಮೌನೇಶ ಹಿರೇಕುರಬರ, ವೆಂಕೋಬ ಕಟ್ಟಿಮನಿ, ಮೌನೇಶ, ಗಂಗಾಧರ ಹಡಪದ, ನಿಂಗಪ್ಪ, ದೊಡ್ಡಪ್ಪ ಮೇಸನ್, ಮೌನೇಶ ಕಟ್ಟಿಮನಿ, ನಾಗರಾಜ ಉಪ್ಪಾರ, ಲಾಳೇಸಾಬ್ ನಾಯಕ, ನಾಗಪ್ಪ ಕರಿಗೋಡಿ, ಹನುಮಂತ ಕುರಿ, ನಬೀಸಾಬ, ಕರೀಂಸಾಬ, ಶಿವು ಕುರಿ, ಅಮರೇಶ ಕಟ್ಟಿಮನಿ, ಈರಪ್ಪ ನಾಯಕ, ಬುಡ್ಡಾಸಾಬ್ ಇದ್ದರು.ಸಮೀಪದ ಚಿಂಚಿರಿಕ ಗ್ರಾಮದಲ್ಲಿ ಶ್ರೀರಾಮನ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಪಾಮನಕಲ್ಲೂರು, ಚಿಲ್ಕರಾಗಿ, ಗೂಗೆಬಾಳ, ಪರಸಾಪುರ ಗ್ರಾಮಗಳಲ್ಲಿ ಆಂಜನೇಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು ಮತ್ತು ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.