ಔರಾದ್ ಅಮರೇಶ್ವರ ದೇವಸ್ಥಾನದಲ್ಲಿ ಶಾಸಕ ಪ್ರಭು ಚವ್ಹಾಣರಿಂದ ವಿಶೇಷ ಪೂಜೆ

| Published : Feb 26 2025, 01:04 AM IST

ಔರಾದ್ ಅಮರೇಶ್ವರ ದೇವಸ್ಥಾನದಲ್ಲಿ ಶಾಸಕ ಪ್ರಭು ಚವ್ಹಾಣರಿಂದ ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

Special puja by MLA Prabhu Chavan at Aurad Amareshwar Temple

-ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಿಂದ ತಂದಿರುವ ಪವಿತ್ರ ಗಂಗಾಜಲ ಸಮರ್ಪಣೆ

----

ಕನ್ನಡಪ್ರಭ ವಾರ್ತೆ ಔರಾದ್

ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕ ಪ್ರಭು ಬಿ.ಚವ್ಹಾಣ ಅವರು ಫೆ.25ರಂದು ಔರಾದ(ಬಿ) ಪಟ್ಟಣದ ಅಮರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅರ್ಚನೆ, ಅಭಿಷೇಕ, ಹೋಮ-ಹವನಗಳನ್ನು ನೆರವೇರಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.

ಉತ್ತರ ಪ್ರದೇಶದ ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಿಂದ ತಂದಿರುವ ಪವಿತ್ರ ಗಂಗಾಜಲದಿಂದ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಅಲ್ಲಿಂದ ತರಲಾದ ವಿಶೇಷ ಪ್ರಸಾದವನ್ನು ದೇವಸ್ಥಾನಕ್ಕೆ ಸಮರ್ಪಿಸಿದರು.

ಶಾಸಕರು, ಮಹಾಕುಂಭ ಮೇಳದಲ್ಲಿ ಭಾಗವಹಿಸಿ ತ್ರಿವೇಣಿ ಸಂಗಮದಿಂದ ಪವಿತ್ರ ಗಂಗಾಜಲ ಮತ್ತು ವಿಶೇಷ ಪ್ರಸಾದವನ್ನು ತಂದಿದ್ದು, ದೇವರಿಗೆ ಸಮರ್ಪಿಸಿ ಪೂಜೆ ನೆರವೇರಿಸಿದ್ದೇನೆ. ನಾಡಿನ ಒಳಿತಿಗಾಗಿ, ಔರಾದ(ಬಿ) ಹಾಗೂ ಕಮಲನಗರದ ಸಮೃದ್ಧಿ, ಜನತೆಯ ಸುಖ, ಶಾಂತಿ, ನೆಮ್ಮದಿಗಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.

ಅಮರೇಶ್ವರ ದೇವಸ್ಥಾನ ಪುರಾತನ ಮತ್ತು ಐತಿಹಾಸಿಕ ಪ್ರಸಿದ್ದಿಯನ್ನು ಪಡೆದಿದೆ. ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಅದ್ದೂರಿಯಾಗಿ ನಡೆಯಲಿದೆ.

ಪಟ್ಟಣ ಪಂಚಾಯತ್ ಅಧ್ಯಕ್ಷೆ ಸರುಬಾಯಿ ಘೂಳೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ಮಾರುತಿ ಚವ್ಹಾಣ, ಶಿವರಾಜ ಅಲ್ಜಾಜೆ, ದಯಾನಂದ ಘೂಳೆ, ಸಂತೋಷ ಪೋಕಲವಾರ, ಕೇರಬಾ ಪವಾರ್, ಸಂಜು ವಡೆಯರ್, ಗುಂಡಪ್ಪ ಮುಧಾಳೆ, ಬಸವರಾಜ ಹಳ್ಳೆ, ಸಂದೀಪ ಪಾಟೀಲ, ಸಿದ್ರಾಮಪ್ಪ ನಿಡೋದೆ, ಜೈಪಾಲ ರಾಠೋಡ, ಡಾ.ಬಾಬುರಾವ ಔರಾದೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪೂಜಾರಿಗಳಾದ ರವೀಂದ್ರ ಸ್ವಾಮಿ ಅವರ ನೇತೃತ್ವದಲ್ಲಿ ಪೂಜೆ, ಅಭಿಷೇಕ, ಅರ್ಚನೆ ಮತ್ತು ಅಂತೇಶ್ವರ ಮಹಾರಾಜರ ನೇತೃತ್ವದಲ್ಲಿ ಹೋಮ-ಹವನಗಳನ್ನು ನಡೆದವು. ಬಳಿಕ ಶಾಸಕರು ದೇವಸ್ಥಾನದ ಆವರಣದಲ್ಲಿ ಪ್ರಸಾದ ವಿತರಣೆ ಸ್ಥಳಕ್ಕೆ ತೆರಳಿ ತಮ್ಮ ಕೈಯಿಂದ ಭಕ್ತಾದಿಗಳಿಗೆ ಪ್ರಸಾದ ವಿತರಿಸಿದರು.

--

ಚಿತ್ರ 25ಬಿಡಿಆರ್61

ಔರಾದ್ ಪಟ್ಟಣದ ಅಮರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಶಾಸಕ ಪ್ರಭು ಚವ್ಹಾಣರಿಂದ ವಿಶೇಷ ಪೂಜೆ ನೆರವೆರಿಸಲಾಯಿತು.

--