ಸಮೃದ್ಧ ಮಳೆಯಾದರೆ ರೈತನ ಬದುಕು ಹಸನು. ಹೀಗಾಗಿ ಮಳೆರಾಯನನ್ನು ಪ್ರಾರ್ಥಿಸಬೇಕು. ಈ ಬಾರಿ ಸಕಾಲದಲ್ಲಿ ಮಳೆ ಇಲ್ಲದೆ ರೈತ ಕಂಗಲಾಗಿದ್ದಾನೆ. ಕನಿಷ್ಠ ಮಟ್ಟದಲ್ಲಿಯಾದರೂ ಮಳೆಯಾದರೆ ರೈತ ಬದುಕಲಿದ್ದಾನೆ. ದೇವಿ ಮಳೆಯನ್ನು ಕರುಣಿಸಿದರೆ ರೈತ ಹಾಗೂ ಕೃಷಿ ಸೊಸೈಟಿ ಅಭಿವೃದ್ಧಿಯಾಗಲಿದೆ.
ಕಿಕ್ಕೇರಿ:
ಸಮೃದ್ಧ ಮಳೆಯಾದರೆ ರೈತನ ಬದುಕು ಹಸನು. ಹೀಗಾಗಿ ಮಳೆರಾಯನನ್ನು ಪ್ರಾರ್ಥಿಸಬೇಕು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಕೆ.ಆರ್.ಪುಟ್ಟರಾಜು ತಿಳಿಸಿದರು.ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಮ್ಮಿಕೊಂಡಿದ್ದ ವರಮಹಾಲಕ್ಷ್ಮಿ ಹಬ್ಬದಲ್ಲಿ ಮಾತನಾಡಿ, ಈ ಬಾರಿ ಸಕಾಲದಲ್ಲಿ ಮಳೆ ಇಲ್ಲದೆ ರೈತ ಕಂಗಲಾಗಿದ್ದಾನೆ. ಕನಿಷ್ಠ ಮಟ್ಟದಲ್ಲಿಯಾದರೂ ಮಳೆಯಾದರೆ ರೈತ ಬದುಕಲಿದ್ದಾನೆ. ದೇವಿ ಮಳೆಯನ್ನು ಕರುಣಿಸಿದರೆ ರೈತ ಹಾಗೂ ಕೃಷಿ ಸೊಸೈಟಿ ಅಭಿವೃದ್ಧಿಯಾಗಲಿದೆ ಎಂದರು.
ಸಂಘದ ಸಿಬ್ಬಂದಿ ಎಚ್.ಟಿ.ಭಾರತಿ, ಕೆ.ಆರ್.ಶೋಭಾ, ಎನ್. ಆಶಾ, ಎಂ.ಮಮತ, ಎಂ.ಕೆ.ಸುಮಿತ್ರಾ, ಕೆ.ನರಸಿಂಹ, ಕೆ.ಎನ್. ಬಾಬು, ಮಲ್ಲಿಕ, ವೆಂಕಟೇಶ್‌ಭಾಗವಹಿಸಿದ್ದರು.ತಾಲೂಕಿನ ವಿವಿಧೆಡೆ ಲಕ್ಷ್ಮಿಪೂಜೆ
ಕಿಕ್ಕೇರಿ:ಇಲ್ಲಿನ ಪಾರ್ವತಿದೇವಿ, ಮಹಾಲಕ್ಷ್ಮೀದೇವಿ, ಮಂದಗೆರೆಕಟ್ಟೆಪರಮೇಶ್ವರಿ, ಬೋಳಮಾರನಹಳ್ಳಿ, ಗೂಡೆಹೊಸಹಳ್ಳಿ, ಐಕನಹಳ್ಳಿ, ಆನೆಗೊಳ ಲಕ್ಷ್ಮೀದೇವಿ, ತುಳಸಿ, ಕಾಳೇನಹಳ್ಳಿ ಲಕ್ಷ್ಮೀದೇವಿ, ತುಳಸಿಗೇಟ್ ರಾಜರಾಜೇಶ್ವರಿದೇಗುಲ ಮತ್ತಿತರ ದೇಗುಲಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ವಿಶೇಷ ಪೂಜೆಗಳು ಜರುಗಿದವು.
ಶುಕ್ರವಾರದ ಪೂಜೆ ಜತೆಗೆ ದೇವಿಗೆ ವಿಶೇಷವಾಗಿ ವರಮಹಾಲಕ್ಷ್ಮೀ ಹಬ್ಬದ ಸಲುವಾಗಿ ವಿಶೇಷ ಪೂಜೆಗಳನ್ನು ಸಲ್ಲಿಸಲು ಅಧಿಕ ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಹೊಸ ಉಡುಗೆ ತೊಟ್ಟುಲಕ್ಷ್ಮೀ ದೇಗುಲಗಳಿಗೆ ಆಗಮಿಸಿದ್ದರು.ದೇವಿಗೆ ಬೆಳಗ್ಗಿನಿಂದಲೇ ಪಂಚಾಮೃತ ಅಭಿಷೇಕ ನೆರವೇರಿಸಿ ವಿವಿಧ ಆಭರಣ, ಪುಷ್ಪ, ವಸ್ತ್ರಗಳಿಂದ ಅಲಂಕರಿಸಲಾಗಿತ್ತು. ಭಕ್ತರು ಪರಸ್ಪರ ಅಂತರ ಕಾಪಾಡಿಕೊಂಡು ದೇವಿಯದರ್ಶನ ಪಡೆದು ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಿದರು.
ಗ್ರಾಮ ಸೇರಿದಂತೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಮನೆಯಲ್ಲಿ ಕಳಸಕ್ಕೆ ವರಮಹಾಲಕ್ಷ್ಮೀದೇವಿಯ ಮುಖವಾಡಧಾರಣೆ ಮಾಡಿ, ವಿವಿಧ ಅಲಂಕಾರ ಮಾಡಿದ್ದರು. ತಳಿರು ತೋರಣಕಟ್ಟಿ, ರಂಗೋಲಿ ಬಿಡಿಸಿದ್ದರು. ವಿವಿದ ಬಗೆಯ ಸಿಹಿತಿಂಡಿ ತಿನಿಸುಗಳನ್ನು ನೈವೇದ್ಯವಾಗಿ ಇಟ್ಟಿದ್ದರು. ಸುಮಂಗಲಿ ಪೂಜೆ ನೆರವೇರಿಸಿ ದೇವಿ ಪಾರಾಯಣ ಮಾಡಿದರು.ಬಂದ ಅತಿಥಿಗಳಿಗೆ ಸಿಹಿ ತಿನಿಸು ನೀಡಿ ಖುಷಿಪಟ್ಟರು.ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ
ಶ್ರೀರಂಗಪಟ್ಟಣ:ತಾಲೂಕಿನ ಮೇಳಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಿಸಲಾಯಿತು.ಕಲರವ ಸಾಂಸ್ಕೃತಿಕ ಮತ್ತು ಸಾಮಾಜಿಕ ಟ್ರಸ್ಟ್ (ರಿ) ಮೇಳಾಪುರ ವತಿಯಿಂದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿಲ್ಪ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದುವ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಕಲರವ ಟ್ರಸ್ಟ್ ನೋಟ್ ಬುಕ್ ಗಳನ್ನು ನೀಡುತ್ತಿರುವುದು ಸಂತಸದ ವಿಚಾರ. ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದಬೇಕಾದರೆ ಸರ್ಕಾರದ ಅನುದಾನದ ಜೊತೆಗೆ ಸ್ಥಳೀಯರ ಸಹಕಾರ ಮುಖ್ಯ ಎಂದರು.ಕಾರ್ಯಕ್ರಮದಲ್ಲಿ ಶಾಲೆ ಮುಖ್ಯ ಶಿಕ್ಷಕ ಗೌಸ್ ಷರೀಫ್, ಚಿಕ್ಕಂಕನಹಳ್ಳಿ ಸಿಆರ್‌ಪಿ ನಾಗೇಂದ್ರಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಮುರುಳಿ, ಉಪಾಧ್ಯಕ್ಷೆ ದಾಕ್ಷಾಯಿಣಿ, ಹಿರಿಯ ಕಲಾವಿದರಾದ ಜಯರಾಮ, ಕಲರವ ಟ್ರಸ್ಟ್ ಅಧ್ಯಕ್ಷ ಸುಮಂತ್ ಎಂ.ಸಿ, ಪ್ರಧಾನ ಕಾರ್ಯದರ್ಶಿ ಪ್ರತಾಪ್ ಕೆ.ವಿ, ಖಜಾಂಚಿ ಹೇಮಂತ್ ಎಮ್.ಡಿ, ಶಿಕ್ಷಕರಾದ ಸುನಿತಾ, ದೀಪ, ಹೇಮಾವತಿ, ಉಷಾ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.