ಕಡೂರುಮಕರ ಸಂಕ್ರಮಣದ ಅಂಗವಾಗಿ ಪಟ್ಟಣದ ಛತ್ರದ ಬೀದಿಯ ಶ್ರೀವೀರಭದ್ರಸ್ವಾಮಿ ಹಾಗೂ ಶ್ರೀ ಕೆಂಚಾಂಬ ದೇವಾಲಯ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು.
ಮಕರ ಸಂಕ್ರಮಣ ದಿನ ಪಟ್ಟಣದ ಶ್ರೀ ವೀರಭದ್ರಸ್ವಾಮಿ, ಶ್ರೀ ಕೆಂಚಾಂಬ ದೇವಿಗೆ ವಿಶೇಷ ಅಲಂಕಾರ
ಕನ್ನಡಪ್ರಭ ವಾರ್ತೆ ಕಡೂರುಮಕರ ಸಂಕ್ರಮಣದ ಅಂಗವಾಗಿ ಪಟ್ಟಣದ ಛತ್ರದ ಬೀದಿಯ ಶ್ರೀವೀರಭದ್ರಸ್ವಾಮಿ ಹಾಗೂ ಶ್ರೀ ಕೆಂಚಾಂಬ ದೇವಾಲಯ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು.
ಗ್ರಾಮ ದೇವರಾದ ಶ್ರೀ ವೀರಭದ್ರಸ್ವಾಮಿ ದೇಗುಲದಲ್ಲಿ ನಸುಕಿನ ಜಾವ ಅಭಿಷೇಕ, ವಿಶೇಷ ಅಲಂಕಾರಗಳು ಮತ್ತು ಪೂಜಾ ಕಾರ್ಯಗಳು ನೆರವೇರಿವು. ಸೂರ್ಯದೇವನು ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಹಿನ್ನೆಲೆಯಲ್ಲಿ ಜನರು ಬೆಳಗಿನಿಂದಲೇ ನೂರಾರು ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸುವ ಮುಖೇನ ಶ್ರೀ ಸ್ವಾಮಿರಿಗೆ ಪೂಜೆ ಸಲ್ಲಿಸುವ ಮೂಲಕ ಕೃತಾರ್ಥರಾದರು. ಅರ್ಚಕ ವಿಶ್ವನಾಥ್ ನೇತೃತ್ವದಲ್ಲಿ ಪೂಜಾ ಕಾರ್ಯ ಜರುಗಿದವು. ಬಂದ ಭಕ್ತರಿಗೆ ಪೊಂಗಲ್ ವಿತರಣೆ ಕೂಡ ನಡೆಯಿತು.ಪಟ್ಟಣದ ಶ್ರೀ ಕೆಂಚಾಂಬ ದೇವಾಲಯದಲ್ಲೂ ಶ್ರೀ ಅಮ್ಮನವರಿಗೆ ವಿಶೇಷ ಅಲಂಕಾರ ಹಾಗೂ ವಡವೆಗಳಿಂದ ಕಂಗೊಳಿಸಿದ ಕೆಂಚಾಂಬ ಅಮ್ಮನವರಿಗೆ ಅರ್ಚಕ ವಿನಯ್ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆಗಳು ಸಲ್ಲಿಕೆ ಆದವು. ಭಕ್ತರು ಆಗಮಿಸಿ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡು ಪುನೀತರಾದರು.
ಇನ್ನು ಪಟ್ಟಣದ ಕೋಟೆ ಇತಿಹಾಸ ಪ್ರಸಿದ್ಧ ಶ್ರೀ. ಆಂಜನೇಯ , ಶ್ರೀ ವೇಂಕಟೇಶ್ವರ ದೇವಾಲಯ, ದೊಡ್ಡಪೇಟೆಯ ಶ್ರೀಶನೇಶ್ವರ ಸ್ವಾಮಿ, ಶ್ರೀ ಆಂಜನೇಯ, ಶ್ರೀಗಣಪತಿ, ದೊಡ್ಡಪೇಟೆಯ ಶ್ರೀಮೈಲಾರಲಿಂಗ ಸ್ವಾಮಿ, ಶ್ರೀ ಬನಶಂಕರಿ, ಶ್ರೀಕಾಳಿಕಾಂಬ, ಹಳೇಪೇಟೆಯ ಶ್ರೀ ಸಿದ್ದೇದೇವರು, ಶ್ರೀಲಕ್ಷೀ ದೇವಾಲಯ, ಶ್ರೀರೇವಣ ಸಿದ್ದೇಶ್ವರ, ಶ್ರೀಏಳೂರು ಬೀರ ಲಿಂಗೇಶ್ವರ , ಶ್ರೀಕಲ್ಲತ್ತಿಗಿರಿ ಚೌಡೇಶ್ವರಿ, ಸುಭಾಷ್ ನಗರದ ಶ್ರೀ ದುರ್ಗಾಂಬ ದೇವಾಲಯ, ಶ್ರೀ ಎಮ್ಮೇದೊಡ್ಡಮ್ಮ, ಶ್ರೀ ಮಾಸ್ತಿಯಮ್ಮ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.ಅಲ್ಲದೆ ತಾಲೂಕಿನ ಸಿಂಗಟಗೆರೆ ಇತಿಹಾಸ ಪ್ರಸಿದ್ಧಿ ಶ್ರೀಕಲ್ಲೇಶ್ವರ ಸ್ವಾಮಿ , ಯಗಟಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ತಾಲೂಕಿನ ಅನೇಕ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು.
15 ಕೆಕೆಡಿಯುು1.ಕಡೂರು ಪಟ್ಟಣದ ದೊಡ್ಡಪೇಟೆಯ ಶ್ರೀ ವೀರಭದ್ರಸ್ವಾಮಿ .
15ಕೆೆಕೆಡಿಯು1ಎ. ಕಡೂರು ಪಟ್ಟಣದ ಶ್ರೀ ಕೆಂಚಾಂಬ ದೇವಿಯವರು.