ಸಾರಾಂಶ
ರಾಮನಗರ: ವಿಭಿನ್ನವಾದ ದೇಸಿ ಸೊಗಡಿರುವ ಜಾನಪದ ಲೋಕಕ್ಕೆ ರಾಜ್ಯದಲ್ಲಿ ತನ್ನದೇ ಆದ ವಿಶೇಷ ಸ್ಥಾನಮಾನವಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಮಂಡ್ಯ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ ಹೇಳಿದರು.
ನಗರದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಾನಪದ ಲೋಕದ ವತಿಯಿಂದ ನಾಡೋಜ ಎಚ್.ಎಲ್. ನಾಗೇಗೌಡರ ನೆನಪಿನ ‘ಲೋಕಸಿರಿ-101’ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಥೈಲ್ಯಾಂಡಿನಲ್ಲಿ ಥಾಯ್ ವಿಲೇಜ್ ಎಂಬ ಪರಿಕಲ್ಪನೆಯ ಮಾದರಿ ಗ್ರಾಮವಿದೆ ಮತ್ತು ರಾಜಸ್ಥಾನದಲ್ಲಿಯೂ ಇದೇ ಬಗೆಯ ಜಾನಪದ ಕೇಂದ್ರವಿದೆ. ಆದರೆ, ಜಾನಪದ ಲೋಕದಂತ ವಿಶೇಷ ವಿಭಿನ್ನ ಜಾನಪದ ಲೋಕ ಎಲ್ಲೂ ಇಲ್ಲ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಮಾತನಾಡಿ, ಎಚ್.ಎಲ್.ನಾಗೇಗೌಡರು ಭವಿಷ್ಯದ ಆಲೋಚನೆ ಇಟ್ಟುಕೊಂಡು ಯುವ ಪೀಳಿಗೆಗೆ ಜನಪದವನ್ನು ತಿಳಿಸುವ ಮಾದರಿ ಜಾನಪದ ಲೋಕವನ್ನು ಕಟ್ಟಿಕೊಟ್ಟಿದ್ದಾರೆ. ಇಲ್ಲಿ ನಾಗೇಗೌಡರ ಆಶಯದಂತೆ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವುದು ಸಂತೋಷದ ಸಂಗತಿ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಮಲ್ಲನಾಯಕನಹಳ್ಳಿ ಗೊಲ್ಲರಹಟ್ಟಿಯ ತತ್ವಪದಕಾರ ದ್ಯಾವರಪ್ಪ ಹಾಗೂ ಡಾಕ್ಟರೇಟ್ ಪಡೆದ ಪರಿಷತ್ತಿನ ಚನ್ನಪಟ್ಟಣ ತಾಲೂಕು ಘಟಕದ ಅಧ್ಯಕ್ಷ ವಿಜಯ್ ರಾಂಪುರ ಅವರನ್ನು ಗೌರವಿಸಲಾಯಿತು. ಕ್ಯೂರೇಟರ್ ಡಾ. ರವಿ ಯು.ಎಂ ಕಲಾವಿದರೊಂದಿಗೆ ಸಂವಾದ ನಡೆಸಿಕೊಟ್ಟರು. ಸಂಶೋಧನಾ ಸಂಚಾಲಕ ಡಾ. ಸಂದೀಪ್, ಪ್ರಾಧ್ಯಾಪಕ ಡಾ. ವಿಜಯಲಕ್ಷ್ಮೀ ಮಾನಾಪುರ, ಡಾ. ಬ್ಯಾಡರಹಳ್ಳಿ ಶಿವರಾಜು, ಕಾರ್ಯನಿರ್ವಹಣಾಧಿಕಾರಿ ಸರಸವಾಣಿ , ರಂಗಸಹಾಯಕ ಎಸ್. ಪ್ರದೀಪ್ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
18ಕೆಆರ್ ಎಂಎನ್ 2.ಜೆಪಿಜಿರಾಮನಗರದ ಜಾನಪದ ಲೋಕದಲ್ಲಿ ನಡೆದ ಲೋಕಸಿರಿ-101 ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಮಲ್ಲನಾಯಕನಹಳ್ಳಿ ಗೊಲ್ಲರಹಟ್ಟಿಯ ತತ್ವಪದಕಾರ ದ್ಯಾವರಪ್ಪ ಅವರನ್ನು ಸನ್ಮಾನಿಸಲಾಯಿತು.