ಮುಸ್ಲಿಂ ಬಾಂಧವರಿಂದ ಗಣಪತಿಗೆ ವಿಶೇಷ ಪೂಜೆ

| Published : Sep 17 2025, 01:05 AM IST

ಸಾರಾಂಶ

ನೃಪತುಂಗ ವೃತ್ತದಲ್ಲಿ ಶ್ರೀ ವಿನಾಯಕ ಸೇವಾ ಸಮಿತಿಯ 56ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸೋಮವಾರ ಸಂಜೆ ಪಟ್ಟಣದ ಮುಸ್ಲಿಂ ಬಾಂಧವರು ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡಿ ಭಾವೈಕ್ಯತೆ ಮೆರೆದರು.

ಹೊಳೆಹೊನ್ನೂರು: ನೃಪತುಂಗ ವೃತ್ತದಲ್ಲಿ ಶ್ರೀ ವಿನಾಯಕ ಸೇವಾ ಸಮಿತಿಯ 56ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸೋಮವಾರ ಸಂಜೆ ಪಟ್ಟಣದ ಮುಸ್ಲಿಂ ಬಾಂಧವರು ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡಿ ಭಾವೈಕ್ಯತೆ ಮೆರೆದರು. ಈ ವೇಳೆ ಗಣೇಶ ಮೂರ್ತಿಗೆ ಹೂವಿನ ಹಾರ ಹಾಕಿ ಮಂಗಳಾರತಿ ಮಾಡಲಾಯಿತು. ಸಮಾಜದಲ್ಲಿ ಎಲ್ಲಾ ಧರ್ಮದ ಜನರು ಒಂದಾಗಿ ಸೌಹಾರ್ದಯುತವಾಗಿ ಬಾಳುವಂತೆ ಮನವಿ ಮಾಡಲಾಯಿತು. ಈ ವೇಳೆ ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಎ.ನಾಗೇಶ್ ಅವರಿಗೆ ಮುಸ್ಲಿಂ ಮುಖಂಡರು ಅಭಿನಂದಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಶ್ರೀಕಾಂತ್, ಸ್ಥಳೀಯ ಮುಖಂಡರಾದ ಸೈಪುಲ್ಲಾ ಖಾನ್, ಅಮ್ಜದ್ ಖಾನ್, ನೌಷಾದ್ ಆಲಿ ಖಾನ್, ಕಿಜರ್ ಅಹಮ್ಮದ್, ಇಮ್ರಾನ್, ವಾಜೀದ್ ಖಾನ್, ಎಚ್.ಎಂ.ಕೇಶವ, ಕೆ.ಸುಬ್ರಮಣಿ, ಆದಿತ್ಯ, ಪಿಎಸ್‍ಐ ರಮೇಶ್ ಹಾಗೂ ಸಮಿತಿ ಸದಸ್ಯರು ಹಾಜರಿದ್ದರು.