ವಿಶೇಷಚೇತನರು ಸರ್ಕಾರಿ ಸೌಲಭ್ಯ ಪಡೆದು ಸದೃಢರಾಗಿ: ಸಚಿವ ಆರ್.ಬಿ.ತಿಮ್ಮಾಪೂರ

| Published : Dec 10 2024, 12:32 AM IST

ವಿಶೇಷಚೇತನರು ಸರ್ಕಾರಿ ಸೌಲಭ್ಯ ಪಡೆದು ಸದೃಢರಾಗಿ: ಸಚಿವ ಆರ್.ಬಿ.ತಿಮ್ಮಾಪೂರ
Share this Article
  • FB
  • TW
  • Linkdin
  • Email

ಸಾರಾಂಶ

ವಿಶೇಷ ಚೇತನರು ಸರ್ಕಾರದ ಹಲವಾರು ಯೋಜನೆ ಸೌಲಭ್ಯ ಪಡೆದು ಸಮಾಜದಲ್ಲಿ ಆರ್ಥಿಕವಾಗಿ ಸದೃಢರಾಗಬೇಕೆಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು

ಕನ್ನಡಪ್ರಭ ವಾರ್ತೆ ಲೋಕಾಪುರ

ವಿಶೇಷ ಚೇತನರು ಸರ್ಕಾರದ ಹಲವಾರು ಯೋಜನೆ ಸೌಲಭ್ಯ ಪಡೆದು ಸಮಾಜದಲ್ಲಿ ಆರ್ಥಿಕವಾಗಿ ಸದೃಢರಾಗಬೇಕೆಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿ ೨೦೨೪-೨೫ ನೇ ಸಾಲಿನ ನಿಧಿ ಯೋಜನೆ ಅಡಿಯಲ್ಲಿ ಶೇ.೫ರಷ್ಟು ಕಾಯ್ದಿರಿಸಿದ ವಿಶೇಷಚೇತನರಿಗೆ ವ್ಹೀಲ್ ಚೇರ್ ವಿತರಣೆ ಹಾಗೂ ಎಸ್‌ಬಿಎಂ ೨.೦ ಯೋಜನೆ ಅಡಿಯಲ್ಲಿ ₹೪೨ ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ, ೨೦೨೪-೨೫ ಸಾಲಿನ ಎಸ್‌ಎಫ್‌ಸಿ ಹಾಗೂ ೧೫ ನೇ ಹಣಕಾಸು ₹೧ ಕೋಟಿ ೩೭ ಲಕ್ಷ ಅಡಿಯಲ್ಲಿ ಕಾಯ್ದಿರಿಸಿದ ಮೊತ್ತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಮಗಾರಿಗಳಲ್ಲಿ ಕಳಪೆ ಕೆಲಸ ಆಗದಂತೆ ನೋಡಿಕೊಂಡು, ವಿವಿಧ ಯೋಜನೆಗಳ ಅಡಿಯಲ್ಲಿ ನಿಗದಿಪಡಿಸಿರುವ ಕಾಮಗಾರಿಗಳು ಹಾಗೂ ಅಭಿವೃದ್ಧಿ ಕೆಲಸ ಕಾರ್ಯಗಳು ಅಚ್ಚು ಕಟ್ಟಾಗಿ ನಿರ್ವಹಿಸಿ ಲೋಕಾಪುರ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕೆಂದರು.

ಈ ವೇಳೆ ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಗುರುರಾಜ ಉದಪುಡಿ, ಲಕ್ಷ್ಮಣ ಮಾಲಗಿ, ಬೀರಪ್ಪ ಮಾಯನ್ನವರ, ಗೋವಿಂದ ಕೌಲಗಿ, ಭೀಮನಗೌಡ ಪಾಟೀಲ, ರವಿ ರೊಡ್ಡಪ್ಪನವರ, ಕುಮಾರ ಕಾಳಮ್ಮನವರ, ಲೋಕಣ್ಣ ಉಳ್ಳಾಗಡ್ಡಿ, ಕೃಷ್ಣಾ ಹೂಗಾರ, ಮಹಾನಿಂಗಪ್ಪ ಹುಂಡೇಕಾರ, ವೆಂಕಪ್ಪಗೌಡ ಚಿಂಚಖಂಡಿ, ವೆಂಕಣ್ಣ ಅಂಕಲಗಿ, ವೆಂಕಣ್ಣ ಕಮಕೇರಿ, ಶಬ್ಬೀರ ಬಾಗವಾನ, ಯಶವಂತ ಮಾದರ, ಅಬ್ದುಲ್ ರಹಿಮಾನ್ ತೊರಗಲ್, ಸಿದ್ದು ಕಿಲಾರಿ, ಸುಲ್ತಾನ ಕಲಾದಗಿ, ಸೈಯ್ಯದ ಗುದಗಿ, ಜಾವೀದ ಮುಧೋಳ, ಸುರೇಶ ಪೂಜಾರಿ, ಮುತ್ತಪ್ಪ ಗಡ್ಡದವರ, ರೇಖಾ ಪಾಟೀಲ, ಮಹೇಶ ಪೂಜಾರಿ, ಅಶೋಕ ದೊಡಮನಿ, ಮಹಾದೇವ ದೊಡಮನಿ, ಪಪಂ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ, ಜೆಇ ಪ್ರಶಾಂತ ಪಾಟೀಲ, ಯುಆರ್‌ಡಬ್ಲೂ ಜೆ.ಆರ್. ಜಾಧವ, ವಿವಿಧ ಇಲಾಖೆ ಅಧಿಕಾರಿಗಳು, ಪಪಂ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಇದ್ದರು.