ಶ್ರೀ ಸೋಮನಾಥ ದೇವಸ್ಥಾನದ ಸ್ವಾಭಿಮಾನ ಪರ್ವ, ಸಾವಿರ ವರ್ಷಗಳ ಅಖಂಡ ನಂಬಿಕೆ ಶಿವನ ಶಾಶ್ವತ ಶಕ್ತಿಯ ಪ್ರತೀಕ ಹಿನ್ನೆಲೆಯಲ್ಲಿ ಶನಿವಾರ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಲಾಗಿದೆ.
ನಾಪೋಕ್ಲು: ಪೆರಾಜೆ ಶ್ರೀ ಶಾಸ್ತಾವು ದೇವಾಲಯದಲ್ಲಿ ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ ಶ್ರೀ ಸೋಮನಾಥ ದೇವಸ್ಥಾನದ ಸ್ವಾಭಿಮಾನ ಪರ್ವ, ಸಾವಿರ ವರ್ಷಗಳ ಅಖಂಡ ನಂಬಿಕೆ ಶಿವನ ಶಾಶ್ವತ ಶಕ್ತಿಯ ಪ್ರತೀಕ ಹಿನ್ನೆಲೆಯಲ್ಲಿ ಶನಿವಾರ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಲಾಗಿದೆ.
ಮಡಿಕೇರಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ದಿನದ ಮಹತ್ವದಬಗ್ಗೆ ತಿಳಿಸಿದರು.
ಶಕ್ತಿ ಕೇಂದ್ರದ ಪ್ರಮುಖ ಸುಭಾಷ್ ಬಂಗಾರಕೋಡಿ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್‍ಯದರ್ಶಿ ಪ್ರವೀಣ್ಮಾ ಜಿಕೊಡಿ, ಪೆರಾಜೆ ಗ್ರಾಪಂ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ ಮತ್ತಿತರರಿದ್ದರು.