ಅಧ್ಯಯನದಲ್ಲಿ ನಿರ್ದಿಷ್ಟ ಗುರಿ, ಏಕಾಗೃತೆ ಅಗತ್ಯ: ಪ್ರೊ.ಆರ್. ಆರ್. ಬಿರಾದಾರ

| Published : May 29 2024, 12:55 AM IST

ಸಾರಾಂಶ

ಬಾಗಲಕೋಟೆಯ ಬ.ವಿ.ವಿ ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಉದ್ಯಮಶೀಲತೆಯಿಂದ ವಿಕಸಿತ ಭಾರತ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅಧ್ಯಯನದಲ್ಲಿ ಕ್ರಿಯಾಶೀಲರಾಗಿ ನಿರ್ದಿಷ್ಟ ಗುರಿ ಮುಟ್ಟಲು ಏಕಾಗ್ರತೆ ಅಗತ್ಯ ಎಂದು ಕಲ್ಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್. ಆರ್. ಬಿರಾದಾರ ಹೇಳಿದರು.

ಬಾಗಲಕೋಟೆಯ ಬ.ವಿ.ವಿ ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಇನ್ ಸ್ಟಿಟ್ಯೂಟ್‌ ಇನ್ನೊವೇಶನ್ ಕೌನ್ಸಿಲ್ ಅಡಿ ಉಪನ್ಯಾಸ ಮಾಲೆಯಲ್ಲಿ ಉದ್ಯಮಶೀಲತೆಯಿಂದ ವಿಕಸಿತ ಭಾರತ ವಿಷಯ ಕುರಿತು ಮಾತನಾಡಿದ ಅವರು, ಸತತ ಪ್ರಯತ್ನ, ಸಮಯ ಪ್ರಜ್ಞೆ, ತಾಳ್ಮೆಯಿಂದ ಕಾರ್ಯ ಪ್ರವೃತ್ತರಾದರೆ ನಿರ್ದಿಷ್ಟ ಗುರಿ ಮುಟ್ಟಲು ಸಾಧ್ಯ. ತಮಗೆ ನಿಲುಕಬಹುದಾದ ಗುರಿ ಇಟ್ಟುಕೊಂಡು ಆ ನಿಟ್ಟಿನಲ್ಲಿ ಪ್ರಯತ್ನಿಸಿದರೆ ಕಂಡ ಕನಸನ್ನು ನನಸಾಗಿಸಿಕೊಳ್ಳಲು ಸಾಧ್ಯ ಎಂದರು.

ಕಲ್ಬುರ್ಗಿಯ ಕಾನೂನು ವಿಭಾಗದ ಮುಖ್ಯಸ್ಥ ಡಾ.ಬಿ.ಎಂ. ಕುಬಕಡ್ಡಿ ಬೌದ್ಧಿಕ ಬಂಡವಾಳ ಹೂಡಿಕೆಯ ಅವಕಾಶಗಳು ಕುರಿತು ಮಾತನಾಡಿ, ಬೌದ್ಧಿಕ ಆಸ್ತಿ ಹಕ್ಕುಗಳಲ್ಲಿನ ಅವಕಾಶಗಳನ್ನು ಬಂಡವಾಳೀಕರಣಗೊಳಿಸುವುದು, ಸಾಂಸ್ಕೃತಿಕ ಆಸ್ತಿ. ಅದು ಮಾನವನ ಬುದ್ಧಿವಂತಿಕೆಯ ಸಿದ್ಧಾಂತದ ಜ್ಞಾನದಿಂದ ಆಹ್ವಾನಿಸಲ್ಪಟ್ಟು ಅಸ್ತಿತ್ವಕ್ಕೆ ಬಂದಿದೆ. ಅಂತಹ ಪೇಟೆಂಟ್‌ಗಳ ಆವಿಷ್ಕಾರಕ್ಕೆ ವಿಶೇಷವಾದ ಹಕ್ಕು ನೀಡಲಾಗಿರುತ್ತದೆ. ಪೇಟೆಂಟ್ ಮಾಲೀಕರಿಗೆ ಆವಿಷ್ಕಾರವನ್ನು ಇತರರು ಹೇಗೆ ಬಳಸಬೇಕು ಎಂಬುದನ್ನು ನಿರ್ಧರಿಸುವ ಹಕ್ಕನ್ನು ಒದಗಿಸುತ್ತದೆ. ಈ ಹಕ್ಕಿಗೆ ಬದಲಾಗಿ ಪೇಟೆಂಟ್ ಮಾಲೀಕರು ಆವಿಷ್ಕಾರದ ಬಗ್ಗೆ ತಾಂತ್ರಿಕ ಮಾಹಿತಿ ಪ್ರಕಟಿಸಿದ ಪೇಟೆಂಟ್ ದಾಖಲೆಯಲ್ಲಿ ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡುವುದು ಪ್ರಮುಖವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬ.ವಿ.ವಿ ಸಂಘದ ಕಾಲೇಜು ಆಡಳಿತ ಮಂಡಳಿ ಪದನಿಮಿತ್ತ ಕಾರ್ಯದರ್ಶಿ ಡಾ.ಎಸ್.ಎಂ. ಗಾಂವಕರ, ದೇಶಕ್ಕಾಗಿ ನಾನು, ನನಗಾಗಿ ದೇಶವಲ್ಲ. ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು, ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಾಗಬೇಕಾದ ಅವಶ್ಯಕತೆವಿದೆ ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ಜಗನ್ನಾಥ್ ಚವ್ಹಾಣ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಗಿರಿಜಾ ನಾವದಿಗಿ ಉಪಸ್ಥಿತರಿದ್ದರು. ಐ.ಐ.ಸಿ ಘಟಕದ ಸಂಯೋಜಕ ರಾಮಕೃಷ್ಣ ತ್ಯಾಪಿ ವಂದಿಸಿದರು. ಶೀತಲ್ ಬಾರ್ಸಿ ನಿರೂಪಿಸಿದರು. ಐ.ಐ.ಸಿ ಘಟಕದ ಸದಸ್ಯರಾದ ಪಿ.ಎನ್. ರಾಥೋಡ, ಆರ್.ಆರ್. ಬೆಳಗೇರಿ, ಎಸ್.ಎಸ್. ಛಬ್ಬಿ, ಎಸ್.ವೈ. ಮೇಟಿ, ಜಿ.ಜಿ. ಬಳೆಗಾರ ಹಾಗೂ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.