ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಸೇತುವೆಗೆ ಕಾಮಗಾರಿಗೆ ವೇಗ ನೀಡಿ

| Published : Aug 01 2025, 12:30 AM IST

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಸೇತುವೆಗೆ ಕಾಮಗಾರಿಗೆ ವೇಗ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಗಣೇಶ ಚತುರ್ಥಿ ದೃಷ್ಟಿಯಲ್ಲಿಟ್ಟುಕೊಂಡು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾಮಗಾರಿ ವೇಗ ಹೆಚ್ಚಿಸಬೇಕು. ಇನ್ನೂ ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಬೇಕು. ಈಗಾಗಲೇ ಕಾಮಗಾರಿ ಮುಗಿದಿರುವ ಸ್ಥಳದಲ್ಲಿ ರಸ್ತೆ ಕಾಮಗಾರಿ ಆರಂಭಿಸಲು ಸೂಚನೆ ನೀಡಿದ ಅವರು 20 ದಿನಗಳ ನಂತರ ಮತ್ತೆ ಕಾಮಗಾರಿ ಪರಿಶೀಲಿಸುತ್ತೇನೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಸೂಚನೆ ನೀಡಿದರು.

ಹುಬ್ಬಳ್ಳಿ: ನಗರದ ಬಸವ ವನದಿಂದ ರಾಣಿ ಚೆನ್ನಮ್ಮ ವೃತ್ತದಿಂದ ಹಳೆಕೋರ್ಟ್ ವರೆಗಿನ ಮೇಲ್ಸೇತುವೆ ಕಾಮಗಾರಿಯನ್ನು ಬುಧವಾರ ಶಾಸಕ ಮಹೇಶ ಟೆಂಗಿನಕಾಯಿ ವೀಕ್ಷಿಸಿದರು.

ಈ ವೇಳೆ ಮಾತನಾಡಿದ ಅವರು, ಕಳೆದ 22 ದಿನಗಳ ಹಿಂದೆ ವೀಕ್ಷಣೆ ವೇಳೆ ನಡೆದಿದ್ದ ಕಾಮಗಾರಿಗೆಗೆ ಹೋಲಿಸಿದರೆ ಈಗ ವೇಗ ಪಡೆದಿದೆ. ಜುಲೈ 7ರ ವರೆಗೆ 36 ಗರ್ಡರ್ ಅ‍ಳವಡಿಸಲಾಗಿತ್ತು. ಇಂದಿನ ವರೆಗೆ 61 ಗರ್ಡರ್ ಅಳವಡಿಸಲಾಗಿದೆ. ಇದೇ ವೇಳೆ ನಾಲ್ಕು ಸ್ಲಾಬ್ ಗಳ ಕಾಮಗಾರಿ ಮತ್ತು ಒಂದು ಪಿಲ್ಲರ್‌ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು.

ಗಣೇಶ ಚತುರ್ಥಿ ದೃಷ್ಟಿಯಲ್ಲಿಟ್ಟುಕೊಂಡು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾಮಗಾರಿ ವೇಗ ಹೆಚ್ಚಿಸಬೇಕು. ಇನ್ನೂ ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಬೇಕು. ಈಗಾಗಲೇ ಕಾಮಗಾರಿ ಮುಗಿದಿರುವ ಸ್ಥಳದಲ್ಲಿ ರಸ್ತೆ ಕಾಮಗಾರಿ ಆರಂಭಿಸಲು ಸೂಚನೆ ನೀಡಿದ ಅವರು 20 ದಿನಗಳ ನಂತರ ಮತ್ತೆ ಕಾಮಗಾರಿ ಪರಿಶೀಲಿಸುತ್ತೇನೆ ಎಂದು ಹೇಳಿದರು.

ಕಾಮಗಾರಿ ಪರಿಶೀಲನೆ ಸಂದರ್ಭದಲ್ಲಿ ಉಪಸ್ಥಿತರಿದ್ದ ಉದ್ದಿಮೆದಾರರ ಹಾಗೂ ಕರ್ನಾಟಕ ಚೇಂಬರ್ ಆಫ್‌ ಕಾಮರ್ಸ್ ಕಾರ್ಯದರ್ಶಿ ರವಿ ಬಳಿಗಾರ ಮಾತನಾಡಿ, ಕಾಮಗಾರಿ ವೇಗ ಪಡೆದಿದ್ದು ಎಲ್ಲ ವ್ಯಾಪಾರಸ್ಥರಿಗೆ ಸಮಾಧಾನ ತಂದಿದೆ. ಕಾಮಗಾರಿಯಲ್ಲಿ ಶಾಸಕ ಟೆಂಗಿನಕಾಯಿ ವಿಶೇಷ ಆಸಕ್ತಿ ಹೊಂದಿದ್ದಾರೆ ಎಂದರು.

ವ್ಯಾಪಾರಸ್ಥರಾದ ನವಲೆ, ಕೃಷ್ಣರಾಜ ಕೆಮತೂರ ಮತ್ತು ಶಿವಮೂರ್ತಿ ಪಾಟೀಲ್ ಮಾತನಾಡಿ, ಶಾಸಕರು ಕಳೆದ ಬಾರಿ ವೀಕ್ಷಣೆ ಮಾಡಿದ ಬಳಿಕ ಕಾಮಗಾರಿ ವೇಗಪಡಿದಿದೆ ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿ ಸತೀಶ್ ನಾಗನೂರ, ಸಹಾಯಕ ಎಂಜಿನಿಯರ್ ರಮೇಶ್ ನವಲಿ, ಸುದರ್ಶನ್ ಬಂಡಿ, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ರಾಜು ಕಾಳೆ, ಬಿಜೆಪಿ ಮುಖಂಡ ರವಿ ನಾಯಕ, ಅಶೋಕ್ ವಾಲ್ಮೀಕಿ ವ್ಯಾಪಾರಸ್ಥರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.