ಸಾರಾಂಶ
ಕಾರವಾರ: ಭಟ್ಕಳ ತಾಲೂಕಿನ ಮುರುಡೇಶ್ವರ ಬಸ್ತಿ ಬಳಿ ಭಾನುವಾರ ಸ್ಪಿರಿಟ್ ಹೊತ್ತು ಸಾಗುತ್ತಿದ್ದ ಲಾರಿ ಪಲ್ಟಿಯಾಗಿ ಲಕ್ಷಾಂತರ ರುಪಾಯಿ ಮೌಲ್ಯದ ಸ್ಪಿರಿಟ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚೆಲ್ಲಿದೆ.
9 ಸಾವಿರ ಲೀ. ದ್ರಾಕ್ಷಾ ಸ್ಪಿರಿಟ್ ಮಹಾರಾಷ್ಟ್ರದಿಂದ ಕೇರಳಕ್ಕೆ ಸಾಗಿಸುತ್ತಿತ್ತು. ಪಲ್ಟಿಯಾದ ಕಾರಣ ಲಾರಿಯಲ್ಲಿದ್ದ ಲಕ್ಷಾಂತರ ರುಪಾಯಿ ಮೌಲ್ಯದ ಸ್ಪೀರಿಟ್ ರಾಷ್ಟೀಯ ಹೆದ್ದಾರಿಯಲ್ಲಿ ಚೆಲ್ಲಿದೆ. ಬಸ್ತಿ ಬಳಿ ರಾಷ್ಟೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿರುವುದರಿಂದಲೇ ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ, ಪೋಲಿಸ್ ಸಿಬ್ಬಂದಿ ಸ್ಪಿರಿಟ್ ಸಾಗಾಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದರು.೧೦೨೩ ಸರ್ವೆ ನಂ. ಪೋಡಿ ದುರಸ್ತಿ ಬಾಕಿ
ಕಾರವಾರ: ರಾಜ್ಯ ಸರ್ಕಾರದಿಂದ ಪೋಡಿ ದುರಸ್ತಿ ಅಭಿಯಾನ ಆರಂಭಿಸಿದ್ದು, ಉತ್ತರ ಕನ್ನಡದಲ್ಲಿ ೧೧೫೯ ಸರ್ವೆ ನಂಬರ್‌ಗಳಲ್ಲಿ ೧೩೬ ನಂಬರ್‌ಗಳನ್ನು ದುರಸ್ತಿ ಮಾಡಲಾಗಿದ್ದು, ೧೦೨೩ ಸರ್ವೆ ನಂಬರ್‌ಗಳ ದುರಸ್ತಿ ಬಾಕಿ ಉಳಿದಿದೆ.ಜಿಲ್ಲೆಯ ೫ ತಾಲೂಕಿನಲ್ಲಿ ಪೋಡಿ ದುರಸ್ತಿ ಅಭಿಯಾನ ಇದುವರೆಗೂ ಆರಂಭವಾಗಿಲ್ಲ. ಉಳಿದ ತಾಲೂಕಿನಲ್ಲಿ ದುರಸ್ತಿ ಆರಂಭಿಸಲಾಗಿದೆ. ದಾಂಡೇಲಿಯಲ್ಲಿ ದುರಸ್ತಿಯೇ ಇಲ್ಲವಾದರೆ ಹಳಿಯಾಳದಲ್ಲಿ ಕೇವಲ ಮೂರು, ಸಿದ್ದಾಪುರದಲ್ಲಿ ಕೇವಲ ೨ ಸರ್ವೆ ನಂಬರ್‌ಗಳು ಮಾತ್ರ ದುರಸ್ತಿಯಾಗಬೇಕಿರುವುದು ವಿಶೇಷವಾಗಿದೆ.ಏನಿದು ಪೋಡಿ ದುರಸ್ತಿ?: ಸರ್ಕಾರಿ ಸರ್ವೆ ಸಂಖ್ಯೆಯಲ್ಲಿ ಭೂರಹಿತರಿಗೆ ಸರ್ಕಾರಿ ಭೂಮಿಯನ್ನು ಕಳೆದ ೩೫ರಿಂದ ೪೦ ವರ್ಷಗಳ ಹಿಂದೆಯೇ ಮಂಜೂರು ಮಾಡಿ ಸರ್ಕಾರಿ ಜಮೀನನ್ನು ಪಟ್ಟಾ ಮಾಡಿಕೊಟ್ಟಿರಲಾಗಿತ್ತು. ಆದರೆ ಜಾಗ, ಗಡಿ ಗುರುತು ಮಾಡಿರಲಿಲ್ಲ. ಕಾರಣ ಆರ್‌ಟಿಸಿನಲ್ಲಿ ಕರ್ನಾಟಕ ಸರ್ಕಾರ ಎಂದು ಬರುತ್ತಿದೆ. ಇದನ್ನು ಸರ್ವೆ ಇಲಾಖೆಯಿಂದ ತಿದ್ದುಪಡಿ ಮಾಡಿ ಭೂಮಾಲೀಕರ ಹೆಸರಿಗೆ ಮಾಡುವುದಾಗಿದೆ.
ಮತ್ತೊಂದು ಒಂದು ಸರ್ವೆ ನಂಬರ್‌ನಲ್ಲಿ ೮ ಹಿಸ್ಸಾ ಸಂಖ್ಯೆಗಳಿರುತ್ತವೆ. ಆದರೆ ಭೂಮಾಲೀಕತ್ವದ ಹೆಸರು ಒಂದೇ ಪಹಣಿಯಲ್ಲಿರುತ್ತದೆ. ಇದರಿಂದಾಗಿ ರೈತರಿಗೆ ಸರ್ಕಾರದ ಸೌಲಭ್ಯಗಳು, ಸಾಲ ದೊರೆಯುವುದಿಲ್ಲ. ಹೀಗಾಗಿ ಜಮೀನಿನ ಮಾಲೀಕರು ಪೋಡಿ ಮಾಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಜಮೀನನ್ನು ಕಾಯ್ದೆ ಪ್ರಕಾರ ವಿಭಜನೆ ಮಾಡಿ ಪ್ರತ್ಯೇಕ ಹಿಸ್ಸಾ ಸಂಖ್ಯೆ ಹಾಗೂ ತಾತ್ಕಾಲಿಕ ಪೋಡಿ ನಂಬರ್ ನೀಡಲಾಗುತ್ತದೆ.ಆಗ ಪೋಡಿ ಮಾಡಲಾಗಿರುವ ಭೂಮಿಗೆ ಆದಾಯ ದಾಖಲೆಗಳನ್ನು ತಯಾರು ಮಾಡಿ ಏಕ ಮಾಲೀಕತ್ವದ ಪಹಣಿ ದೊರೆಯುತ್ತದೆ. ಏಕ ಮಾಲೀಕತ್ವವಿದ್ದರೆ ಸಾಲ ಸಿಗುತ್ತದೆ. ಭೂಮಿ ಮಾಲೀಕತ್ವ ಖಾತ್ರಿ ಪಡೆಯುವುದರಿಂದ ಒತ್ತುವರಿಯಾಗುವುದಿಲ್ಲ. ಬೆಳೆ ವಿಮೆ ಮಾಡಿಸಲು ಸುಲಭವಾಗುತ್ತದೆ. ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳು ಪಡೆಯಲು ಅನುಕೂಲವಾಗುತ್ತದೆ.ತಾಲೂಕಾವಾರು?: ಕಾರವಾರ ತಾಲೂಕಿನಲ್ಲಿ ೩೬ ಸರ್ವೆ ನಂಬರ್‌ಗಳಲ್ಲಿ ೨ ಮುಕ್ತವಾಗಿದ್ದು, ೩೪ ಬಾಕಿ, ಜೋಯಿಡಾದಲ್ಲಿ ೧೨೦ರಲ್ಲಿ ೧೨೦ ಬಾಕಿ ಇದೆ. ಹಳಿಯಾಳದಲ್ಲಿ ಮೂರಕ್ಕೆ ಮೂರು ಬಾಕಿ, ಯಲ್ಲಾಪುರದಲ್ಲಿ ೪೪ ಸರ್ವೆ ನಂಬರ್‌ಗಳಲ್ಲಿ ೨ ವಿಲೇವಾರಿಯಾಗಿದ್ದು, ೪೨ ಬಾಕಿ, ಮುಂಡಗೋಡದಲ್ಲಿ ೨೮೪ ಸರ್ವೆ ನಂಬರ್‌ನಲ್ಲಿ ೬೨ ಸರ್ವೆ ನಂಬರ್ ವಿಲೇವಾರಿಯಾಗಿದ್ದು, ೨೨೨ ಬಾಕಿ ಉಳಿದಿದೆ.ಶಿರಸಿ ತಾಲೂಕಿನಲ್ಲಿ ೬೭ರಲ್ಲಿ ಎಲ್ಲವೂ ಬಾಕಿಯಿದೆ. ಅಂಕೋಲಾ ತಾಲೂಕಿನಲ್ಲಿ ೧೩೪ರಲ್ಲಿ ೨೮ ವಿಲೇವಾರಿಯಾಗಿದ್ದು, ೧೦೬ ಬಾಕಿ, ಕುಮಟಾದಲ್ಲಿ ೭೨ ಸರ್ವೆ ನಂಬರ್‌ನಲ್ಲಿ ೧೯ ವಿಲೇವಾರಿಯಾಗಿದ್ದು, ೫೩ ಬಾಕಿಯಿದೆ. ಸಿದ್ದಾಪುರ ೨ರಲ್ಲಿ ಎರಡೂ ಬಾಕಿ, ಹೊನ್ನಾವರದಲ್ಲಿ ೩೧೫ ಸರ್ವೆ ನಂಬರ್‌ಗಳಲ್ಲಿ ೨೩ ಸರ್ವೆ ನಂಬರ್‌ಗಳನ್ನು ವಿಲೇವಾರಿಯಾಗಿದ್ದು, ೨೯೨ ಸರ್ವೆ ನಂಬರ್‌ಗಳು ಬಾಕಿ ಉಳಿದಿವೆ. ಭಟ್ಕಳದಲ್ಲಿ ೮೨ರಲ್ಲಿ ಯಾವುದೂ ಪೋಡಿ ಮುಕ್ತವಾಗಿಲ್ಲ. ದಾಂಡೇಲಿಯಲ್ಲಿ ಯಾವುದೇ ಪೋಡಿ ದುರಸ್ತಿ ಮಾಡಬೇಕಿಲ್ಲ.