ಆಧ್ಯಾತ್ಮಿಕ ಶಿಕ್ಷಣವು ಏಕಾಗ್ರತೆಯನ್ನು ಹೆಚ್ಚಿಸುವ ಸಾಧನ

| Published : Jan 06 2025, 01:03 AM IST

ಸಾರಾಂಶ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ "ಆಧ್ಯಾತ್ಮಿಕ ಚಿತ್ರ ಪಟ ಪ್ರದರ್ಶನ " ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು. ಆಧ್ಯಾತ್ಮಿಕ ಶಿಕ್ಷಣವು ಏಕಾಗ್ರತೆಯನ್ನು ಹೆಚ್ಚಿಸುವ ಸಾಧನವಾಗಿದೆ. ವರ್ತಮಾನ ಸಮಯದಲ್ಲಿ ಜಗತ್ತಿನಲ್ಲಿ ಜಾತಿ ಧರ್ಮಗಳ ನಡುವೆ ಕಲಹ, ಅಶಾಂತಿ ಮತ ಭೇದಗಳು ಹೆಚ್ಚಾಗುತ್ತಿವೆ. ಜನರ ನಡುವೆ ವೈಷಮ್ಯ ಹೆಚ್ಚುತ್ತಿದೆ. ದುಃಖ ಕಾಯಿಲೆಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಜನರಿಗೆ ಈ ಆಧ್ಯಾತ್ಮಿಕ ರಾಜಯೋಗ ಶಿಕ್ಷಣವು ನಿಜವಾದ ಶಾಂತಿ ಮತ್ತು ಆನಂದವನ್ನು ಒದಗಿಸುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಇಲ್ಲಿಯ ಪ್ರಸನ್ನ ಶ್ರೀ ಸುಬ್ರಹ್ಮಣ್ಯ ಷಷ್ಠಿ ರಥೋತ್ಸವದ ಪ್ರಯುಕ್ತ ಕೊಣನೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ "ಆಧ್ಯಾತ್ಮಿಕ ಚಿತ್ರ ಪಟ ಪ್ರದರ್ಶನ " ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು.

ಈ ಪ್ರದರ್ಶನವು ಸಂಪೂರ್ಣ ಉಚಿತವಾಗಿದ್ದು ಇಲ್ಲಿ ದೇವತೆಗಳೆಂದರೆ ಯಾರು, ಪರಮಾತ್ಮ ಶಿವನಿಂದ ದೇವತೆಗಳ ಸೃಷ್ಟಿ ಹೇಗೆ ಆಗುತ್ತದೆ, ಎಲ್ಲಾ ಧರ್ಮದವರಿಗೂ ಒಬ್ಬನೇ ಪರಮಾತ್ಮ ಹೇಗೆ, ಸ್ವರ್ಗ - ನರಕಗಳ ವ್ಯತ್ಯಾಸವೇನು, ನಾಲ್ಕು ಯುಗಗಳ ರಹಸ್ಯ, ಕರ್ಮಫಲ, ರಾಜಯೋಗದಿಂದ ಉಂಟಾಗುವ ಮಾನಸಿಕ ಏಕಾಗ್ರತೆ ಮತ್ತು ಪುಣ್ಯ ಸಂಚಯ, ಸಮಯದ ಮಹತ್ವ ಹಾಗೂ ರಾಜಯೋಗದ ಆಧಾರ ಮತ್ತು ವಿಧಿಗಳ ಬಗ್ಗೆ ಆಗಮಿಸಿದ ಭಕ್ತಾದಿಗಳಿಗೆ ಸಾರ್ವಜನಿಕರಿಗೆ ವಿವರಿಸಲಾಯಿತು.

ಈ ಸಂದರ್ಭದಲ್ಲಿ ಸೇವಾ ಕೇಂದ್ರದ ಶಿಕ್ಷಕಿ ಡಿಕೆ ಸುರೇಂದ್ರ ಮಾತನಾಡಿ, ಆಧ್ಯಾತ್ಮಿಕ ಶಿಕ್ಷಣವು ಏಕಾಗ್ರತೆಯನ್ನು ಹೆಚ್ಚಿಸುವ ಸಾಧನವಾಗಿದೆ. ವರ್ತಮಾನ ಸಮಯದಲ್ಲಿ ಜಗತ್ತಿನಲ್ಲಿ ಜಾತಿ ಧರ್ಮಗಳ ನಡುವೆ ಕಲಹ, ಅಶಾಂತಿ ಮತ ಭೇದಗಳು ಹೆಚ್ಚಾಗುತ್ತಿವೆ. ಜನರ ನಡುವೆ ವೈಷಮ್ಯ ಹೆಚ್ಚುತ್ತಿದೆ. ದುಃಖ ಕಾಯಿಲೆಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಜನರಿಗೆ ಈ ಆಧ್ಯಾತ್ಮಿಕ ರಾಜಯೋಗ ಶಿಕ್ಷಣವು ನಿಜವಾದ ಶಾಂತಿ ಮತ್ತು ಆನಂದವನ್ನು ಒದಗಿಸುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ. ಸಮಯದ ಅಭಾವವಿರುವವರಿಗೆ ಈ ಒಂದು ಚಿತ್ರಪಟ ಪ್ರದರ್ಶನ ಒಂದು ಕಿರು ಪರಿಚಯವನ್ನ ಕಡಿಮೆ ಸಮಯದಲ್ಲಿ ಒದಗಿಸುತ್ತದೆ. ಎಲ್ಲರೂ ಇದರ ಲಾಭವನ್ನು ಪಡೆಯಿರಿ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಆಗಮಿಸಿದವರಿಗೆ 2025ನೇ ಇಸವಿಯ ಕ್ಯಾಲೆಂಡರ್‌, ಸಾಹಿತ್ಯಗಳನ್ನು ಅನ್ನು ಉಚಿತವಾಗಿ ನೀಡಲಾಯಿತು.

ಪಂಚಾಯತಿ ಸದಸ್ಯರಾದ ಸಿದ್ದರಾಜು, ಸತ್ಯಸಾಯಿ ಸೇವಾ ಸಮಿತಿಯ ಕಾಳೇಗೌಡ್ರು ಸಾಯಿ ಪ್ರಸಾದ್ ರಾಮೇಗೌಡ ದೇವರಾಜೇಗೌಡರು, ಶಂಕರಮ್ಮ ಲಕ್ಷ್ಮಿ ಸುಜಾತ , ಕೊಣನೂರು ಬ್ರಹ್ಮ ಕುಮಾರೀಸ್ ನ ಬಿ ಕೆ ಸುನಂದ, ವಸಂತಮ್ಮ, ಬಿಕೆ ರಾಧಾ, ಬಿಕೆ ನಾಗರತ್ನ, ಕೊಣನೂರು ಸೂರ್ಯನಾರಾಯಣ , ನಾಗರಾಜು, ಪೇಪರ್‌ ಲೋಕೇಶ್, ರವಿ, ರಾಮನಾಥಪುರ ಮಂಜಣ್ಣ ಮತ್ತು ಅನೇಕ ಭಕ್ತಾದಿಗಳು, ಸುತ್ತಮುತ್ತಲಿನ ಊರಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಲಾಭ ಪಡೆದರು.